ಸುರತ್ಕಲ್​ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್‌​ ಟೆಕ್ನಾಲಜಿಯಲ್ಲಿ ಬೋಧಕ ಹುದ್ದೆಗೆ ಆಹ್ವಾನ

udyoga-suratkal
Published on

ರಾಷ್ಟ್ರೀಯ ಸಾಂಸ್ಥಿಕ ರ್ಯಾಂಕಿಂಗ್​ ಚೌಕಟ್ಟಿನಲ್ಲಿ ಈ ಬಾರಿ ದೇಶದ ಅಗ್ರ 10 ಎನ್​ಐಟಿಗಳಲ್ಲಿ ಸ್ಥಾನ ಪಡೆದಿರುವ ಹೆಮ್ಮೆ ದಣಕನ್ನಡ ಜಿಲ್ಲೆ ಸುರತ್ಕಲ್​ನ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್‌​ ಟೆಕ್ನಾಲಜಿ ಕರ್ನಾಟಕ (ಎನ್​ಐಟಿಕೆ) ಸಂಸ್ಥೆಯದ್ದು. ಪದವಿ, ಸ್ನಾತಕೋತ್ತರ, ಮತ್ತು ಪಿಎಚ್​.ಡಿ ಮಟ್ಟದಲ್ಲಿ ಇಂಜಿನಿಯರಿಂಗ್​, ವಿಜ್ಞಾನ ಮತ್ತು ನಿರ್ವಹಣಾ ಕ್ಷೇತ್ರದ ಶಿಕ್ಷಣಕ್ಕೆ ಖ್ಯಾತಿ ಗಳಿಸಿದೆ. ಪ್ರಸ್ತುತ ಸಂಸ್ಥೆಯಲ್ಲಿ ಬೋಧಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಎಲ್ಲ ಹುದ್ದೆಗಳು ಬ್ಯಾಕ್​ಲಾಗ್​ ಹುದ್ದೆಗಳಾಗಿದ್ದು, ಎಸ್ಸಿಗೆ 2 ಸ್ಥಾನ, ಎಸ್ಟಿಗೆ 9, ಇತರ ಹಿಂದುಳಿದ ವರ್ಗಕ್ಕೆ (ಕೆನೆಪದರಕ್ಕೆ ಸೇರದ) 12 ಸ್ಥಾನಗಳನ್ನು ಮೀಸಲಿರಿಸಲಾಗಿದೆ. 7ನೇ ವೇತನ ಆಯೋಗದ ಅನ್ವಯ ಗ್ರೇಡ್​ 2 ಹುದ್ದೆಗೆ 10 ಹಾಗೂ 11ನೇ ಹಂತದ ವೇತನ ಹಾಗೂ ಗ್ರೇಡ್​1 ಹುದ್ದೆಗೆ 12ನೇ ಹಂತದ ವೇತನ ನಿಗದಿಯಾಗಿದ್ದು, ಡಿಎ, ಮನೆ ಬಾಡಿಗೆ ಭತ್ಯೆ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು.

ಸಂಸ್ಕರಣಾ ಶುಲ್ಕವೆಂದು 100 ರೂ. ಅನ್ನು ನ.3ರ ಒಳಗಾಗಿ ಪಾವತಿಸಬೇಕು. ಒಂದಕ್ಕಿಂತ ಹೆಚ್ಚು ವಿಭಾಗದ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿಭಾಗಗಳ ಹೆಸರನ್ನು ನಮೂದಿಸಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನದ ಮಾಹಿತಿಯನ್ನು ಮೇಲ್​ ಮೂಲಕ ತಿಳಿಸಲಾಗುವುದು.

ಹುದ್ದೆ ವಿವರ

* ಅಸಿಸ್ಟೆಂಟ್​ ಪ್ರೊಫೆಸರ್​ ಗ್ರೇಡ್​ ಐಐ - 21

* ಅಸಿಸ್ಟಫೆಂಟ್​ ಪ್ರೊಫೆಸರ್​ ಗ್ರೇಡ್​ ಐ - 12

ಯಾವ ವಿಭಾಗಗಳಲ್ಲಿ ನೇಮಕ?:

*ಕೆಮಿಕಲ್​ ಇಂಜಿನಿಯರಿಂಗ್​ *ಸಿವಿಲ್​ *ಕಂಪ್ಯೂಟರ್​ ಸೈನ್ಸ್​ ಆ್ಯಂಡ್​ ಇಂಜಿನಿಯರಿಂಗ್​ *ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​ *ಎಲೆಕ್ಟ್ರಿಕಲ್​ ಆ್ಯಂಡ್​ ಎಲಫೆಕ್ಟ್ರಾನಿಕ್ಸ್​ *ಇನ್​ಮೇರ್ಷನ್​ ಟೆಕ್ನಾಲಜಿ *ಮ್ಯಾಥಮಟಿಕಲ್​ ಆ್ಯಂಡ್​ ಕಾಂಪ್ಯುಟೇಷನಲ್​ ಸೈನ್ಸ್​ *ಮಕಾನಿಕಲ್​ *ಮಲಜಿರ್ಕಲ್​ ಆ್ಯಂಡ್​ ಮಟಿರಿಯಲ್ಸ್​ *ಮೈನಿಂಗ್​ *ಸ್ಕೂಲ್​ ಆ್​ ಮ್ಯಾನೇಜ್​ಮಂಟ್​ *ವಾಟರ್​ ರಿಸೋರ್ಸ್​ ಆ್ಯಂಡ್​ ಓಷನ್​ ಇಂಜಿನಿಯರಿಂಗ್​

ವಿದ್ಯಾರ್ಹತೆ:

ನೇಮಕ ಮಾಡಿಕೊಳ್ಳಲಾಗುವ ವಿಭಾಗಗಳ ವಿಷಯದಲ್ಲಿ ಬಿಇ/ ಬಿ.ಟೆಕ್‌​, ಎಂಇ/ ಎಂ.ಟೆಕ್‌​, ಎಂಎ/ಎಂಸ್ಸಿ/ ಎಂಕಾಂ/ ಎಂಬಿಎ ಪದವಿ ನಂತರ ನೇರವಾಗಿ ಪಿಎಚ್​ಡಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ವಿಧಾನ: ಆನ್​ಲೈನ್​ ಅರ್ಜಿ ಸಲ್ಲಿಸಿದ ಬಳಿಕ ಅದರ ಪ್ರತಿ ಪಡೆದು ಸಹಿ ಹಾಕಿ ಅಗತ್ಯ ದಾಖಲೆ ಹಾಗೂ ಭಾವಚಿತ್ರದೊಂದಿಗೆ ನ.10ರ ಒಳಗಾಗಿ The Registrar, National Institute of Technology Karnataka, Surathkal, Mangaluru

ವಿಳಾಸಕ್ಕೆ ಸ್ಪೀಡ್​/ ರಿಜಿಸ್ಟ್ರರ್ಡ್​ ಪೋಸ್ಟ್​ ಮೂಲಕ ಕಳುಹಿಸಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 5.11.2021

ಅರ್ಜಿ ಶುಲ್ಕ ಪಾವತಿಸಲು ಕೊನೇ ದಿನ: 3.11.2021

ಆನ್​ಲೈನ್​ ಅರ್ಜಿಯ ಪ್ರತಿ ಸಲ್ಲಿಸಲು ಕೊನೇ ದಿನ: 10.11.2021

ಅಧಿಸೂಚನೆಗೆ: https://bit.ly/3AkUA83

ಮಾಹಿತಿಗೆ: www.nitk.ac.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net