ಕ್ರಿಕೆಟ್‌ಗೆ ಎಸ್.ಶ್ರೀಶಾಂತ್ ವಾಪಸ್..!

sreesanth for web
Published on

ನವದೆಹಲಿ: 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ 7 ವರ್ಷ ನಿಷೇಧ ಶಿಕ್ಷೆಯ ಕೊನೇ ಹಂತದಲ್ಲಿರುವ ವೇಗಿ ಎಸ್.ಶ್ರೀಶಾಂತ್ ಶೀಘ್ರವೇ ಕ್ರಿಕೆಟ್‌ಗೆ ಮರಳಲು ಉತ್ಸುಕರಾಗಿದ್ದಾರೆ. ಮುಂಬರುವ ಕ್ರಿಕೆಟ್ ಋತುವಿನಲ್ಲಿ ಆಡಲು ಸಜ್ಜಾಗಿರುವುದಾಗಿ ಶ್ರೀಶಾಂತ್ ಹೇಳಿಕೊಂಡಿದ್ದಾರೆ. 2013ರ ಆಗಸ್ಟ್ ತಿಂಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಶ್ರೀಶಾಂತ್, ಅಜಿತ್ ಚಂಡಿಲಾ ಹಾಗೂ ಅಂಕಿತ್ ಚವಾನ್‌ಗೆ ಆಜೀವ ನಿಷೇಧ ಹೇರಲಾಗಿತ್ತು. ಕಳೆದ ವರ್ಷ ಆಜೀವ ನಿಷೇಧದ ಬದಲಾಗಿ 7 ವರ್ಷಗಳಿಗೆ ಇಳಿಸಲಾಗಿತ್ತು. ಮುಂದಿನ ಸೆಪ್ಟೆಂಬರ್ ತಿಂಗಳಿಗೆ 7 ವರ್ಷ ಪೂರೈಸಲಿರುವ ಶ್ರೀಶಾಂತ್, ಕೇರಳ ತಂಡದ ಪರ ಕಣಕ್ಕಿಳಿಯುವ ಇರಾದೆಯಲ್ಲಿದ್ದಾರೆ. ‘ಅಭ್ಯಾಸ ಮುಂದುವರಿಸಿದ್ದೇನೆ, ಕಾರ್ಯದರ್ಶಿಯಿಂದ ಹಿಡಿದು ಪ್ರಧಾನ ನಿರ್ದೇಶಕರವರೆಗೂ (ಡಿಜಿ) ಪ್ರೋತ್ಸಾಹ ನೀಡುತ್ತಿದ್ದಾರೆ. ಸಹ-ಆಟಗಾರರು, ಆಯ್ಕೆ ಸಮಿತಿ ಸದಸ್ಯರು ನಾನು ವಾಪಸ್ ಬರುವುದನ್ನೇ ಕಾಯುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಬಿಸಿಸಿಐನಿಂದ ಅಧಿಕೃತ ಆದೇಶ ಬರಲಿದೆ’ ಎಂದು ಶ್ರೀಶಾಂತ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net