

ಕುಮಟಾ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಇಂಥ ಸಂದರ್ಭಗಳಲ್ಲಿಯೂ ಜನರು ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ. ಜತೆಗೆ ಫೋಟೋಗೆ ಪೋಸ್ ಕೊಡಲು ದುಸ್ಸಾಹಸವನ್ನೂ ಮಾಡುತ್ತಿದ್ದಾರೆ. ಇದೇ ರೀತಿಯ ಸಾಹಸ ಮಾಡಲು ಹೋಗಿ ಕುಮಟಾದ ವಕೀಲನೊಬ್ಬ ಜೀವ ಕಳೆದುಕೊಂಡಿದ್ದಾರೆ.
ಕುಮಟಾದ ವನ್ನಳ್ಳಿ ಬೀಚ್‍ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಶಿರಸಿಯ ಸುಬ್ರಹ್ಮಣ್ಯ ಗೌಡ ಎನ್ನುವವರು ಜೀವ ಕಳೆದುಕೊಂಡಿದ್ದಾರೆ. ಇವರು ಸ್ನೇಹಿತರ ಜತೆಗೂಡಿ ವನ್ನಳ್ಳಿ ಬೀಚ್‌ಗೆ ಹೋಗಿದ್ದರು. ಈ ಸಂದರ್ಭದಲ್ಲಿ ವಿವಿಧ ರೀತಿಯ ಫೋಟೋ ತೆಗೆಸಿಕೊಂಡಿದ್ದಾರೆ.
ಸಮುದ್ರದ ನಡುವೆ ಇರುವ ಬಂಡೆಯೊಂದರ ಮೇಲೆ ಕುಳಿತು ಧ್ಯಾನಾಸಕ್ತರಾಗಿರುವಂತೆ ಪೋಸ್ ಕೊಟ್ಟು ಅದರ ಫೋಟೋ ತೆಗೆಯಲು ಹೇಳಿದ್ದಾರೆ. ಇತ್ತ ಸ್ನೇಹಿತರು ಫೋಟೋ ತೆಗೆಯುತ್ತಿರುವಾಗಲೇ ಬೃಹತ್ ಅಲೆಗಳು ಬಂದು ಅಪ್ಪಳಿಸಿದೆ. ಅಲೆಗಳ ಹೊಡೆತಕ್ಕೆ ಅಲ್ಲಿಯೇ ಸುಬ್ರಹ್ಮಣ್ಯ ಗೌಡ ಅವರು ಆಯತಪ್ಪಿಗೆ ನೀರಿಗೆ ಬಿದ್ದಿದ್ದಾರೆ.