VIDEO: ಅಭಿಮಾನಿ ತಂದ ಪೇಟ ನೋಡಿ ಸಿದ್ದು ಗರಂ- ಹತ್ತಿರ ಬರುತ್ತಿದ್ದಂತೆಯೇ ಕಿತ್ತೆಸೆದ ಮಾಜಿ ಸಿಎಂ

1224529
Published on

ಬಾಗಲಕೋಟೆ: ಬಾಗಲಕೋಟೆ ಭೇಟಿ ವೇಳೆಯಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಭಾರಿ ಗರಂ ಆಗಿರುವ ಘಟನೆಯೊಂದು ನಡೆದಿದೆ.

ಬಾದಾಮಿ ತಾಲೂಕಿನ ಕಾತರಕಿ ಗ್ರಾಮಕ್‌ಕೆ ಸಿದ್ದರಾಮಯ್ಯನವರು ಆಗಮನಿಸಿದ್ದರು. ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆಗೆ ಸಿದ್ದರಾಮಯ್ಯ ಬಂದಿದ್ದರು. ಆ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಪೇಟ ತೊಡಿಸಲು ಬಂದಿದ್ದಾನೆ.

ಸಿದ್ದರಾಮಯ್ಯನವರು ಎಷ್ಟು ಬೇಡ ಬೇಡ ಎಂದರೂ ಸುತ್ತಿದ ರುಮಾಲು ತಂದು ತಲೆಗೆ ಇಟ್ಟಿದ್ದಾನೆ ಅಭಿಮಾನಿ. ಇದರಿಂದ ಸಿಟ್ಟುಗೊಂಡ ಸಿದ್ದರಾಮಯ್ಯನವರು ಅದನ್ನು ಕಿತ್ತೆಸಿದಿದ್ದಾರೆ. ಆಗ ಅಲ್ಲಿದ್ದವರು ಆ ಅಭಿಮಾನಿಯಲ್ಲಿ ಬಯ್ಯುವುದನ್ನು ವಿಡಿಯೋದಲ್ಲಿ ಕೇಳಬಹುದು. ಬೇಡ ಎಂದರೂ ಗೊತ್ತಾಗುವುದಿಲ್ಲವಾ ಎಂದು ಅಲ್ಲದ್ದವರು ಗದರಿಸಿದ್ದಾರೆ.

ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರನ್ನು ಕಾತರಕಿ ಗ್ರಾಮದಲ್ಲಿ ‌ಹೂಮಳೆ ಸುರಿಸಿ ಅಭಿಮಾನಿಗಳು ಬರಮಾಡಿಕೊಂಡರು. ಜೆಸಿಬಿ ಮೇಲೆ ನಿಂತು ಹೂವಿನ ಸುರಿಮಳೆಗೈಯಲಾಯಿತು.

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net