VIDEO: ಶಿವಮೊಗ್ಗದ ಚಾಕು ಇರಿತದ ಆರೋಪಿಗಳಿಗೆ ಎಸ್​ಡಿಪಿಐ ಲಿಂಕ್​- ಕೋಮು ಗಲಭೆಯೇ ಟಾರ್ಗೆಟ್​? ವಿಡಿಯೋ ನೀಡಿದೆ ಸಾಕ್ಷ್ಯ

shivamogga
Published on

ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಗಾರ ವೀರ್​ ಸಾವರ್ಕರ್​ ಅವರ ಫೋಟೋ ಕಿತ್ತೆಸೆಯುವ ಮೂಲಕ ಶಿವಮೊಗ್ಗದಲ್ಲಿ ಕೆಲ ದಿನಗಳ ಹಿಂದೆ ಶುರುವಾಗಿದ್ದ ಗಲಾಟೆ ಹಿಂಸಾಚಾರ ಸ್ವರೂಪ ಪಡೆದುಕೊಂಡಿದ್ದು, ಮುಸ್ಲಿಂ ಮತ್ತು ಹಿಂದೂಗಳ ನಡುವೆ ಘರ್ಷಣೆಗೆ ಕಾರಣವಾಗಿತ್ತು. ಈ ಘಟನೆಯಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆಯೂ ನಡೆದಿತ್ತು.

ಈ ಕುರಿತು ಇದಾಗಲೇ ಪ್ರತಿಕ್ರಿಯೆ ನೀಡಿದ್ದ ಮಾಜಿ‌ ಸಚಿವ ಕೆ.ಎಸ್.ಈಶ್ವರಪ್ಪನವರು, ವೀರ್​ ಸಾವರ್ಕರ್​ ಫೋಟೋ ಕಿತ್ತೆಸೆದು ಗಲಭೆಗೆ ಕಾರಣೀಕರ್ತರಾಗಿದ್ದು ಸೋಷಿಯಲ್​ ಡೆಮಾಕ್ರಟಿಕ್​ ಪಾರ್ಟಿ ಆಫ್​ ಇಂಡಿಯಾ (ಎಸ್​ಡಿಪಿಐ) ಕಾರ್ಯಕರ್ತ. ಅವನ ಹೆಂಡ್ತಿ ಕಾಂಗ್ರೆಸ್ ಪಾಲಿಕೆ ಸದಸ್ಯೆ. ಇದರಲ್ಲಿಯೇ ಗೊತ್ತಾಗುತ್ತದಲ್ಲ ಎಂದ ಈಶ್ವರಪ್ಪ, ಎಸ್​ಡಿಪಿಐ ಮನಸ್ಥಿತಿ ಬದಲಾಗಿಲ್ಲ. ಹಿಂದೂಗಳನ್ನು ಕೊಲೆ ಮಾಡಲು ಅವರು ಹೇಸುವುದಿಲ್ಲ. ಕೇರಳದಿಂದ ಹಾಗೂ ಹೊರಗಡೆಯಿಂದ ಬಂದವರಿಂದಲೂ ಈ ರೀತಿ ಆಗುತ್ತಿದೆ. ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಬೆಂಬಲ ಇದೆ. ಇಂಥ ಘಟನೆ ಮರುಕಳಿಸುತ್ತಿರುವುದಕ್ಕೆ ಕಾರಣ, ಕಾನೂನು ಸುವ್ಯವಸ್ಥೆಯ ವೈಫಲ್ಯ ಅಲ್ಲ, ಬದಲಿಗೆ ಕಾಂಗ್ರೆಸ್​ ನೀಡುತ್ತಿರುವ ಕುಮ್ಮುಕ್ಕು ಎಂದಿದ್ದರು. ಈ ಮಾತಿಗೆ ಕಾಂಗ್ರೆಸ್​ ಕಿಡಿಕಾರಿತ್ತು.

ಆದರೆ ಇದೀಗ ಆ ಮಾತು ನಿಜವಾಗಿದೆ. ಶಿವಮೊಗ್ಗದಲ್ಲಿ ಸ್ವಾತಂತ್ರ್ಯದ ದಿನದ ಸಂದರ್ಭದಲ್ಲಿ ಗಲಭೆಗೆ ಕಾರಣವಾಗಿದ್ದು ಅರೆಸ್ಟ್​ ಆಗಿರುವ ಪ್ರಮುಖ ಆರೋಪಿಗಳಾದ ಜಬೀವುಲ್ಲಾ, ನದೀಂ, ತನ್ವೀರ್​ ಮತ್ತು ಅಬ್ದುಲ್​ಗೆ ಎಸ್​ಡಿಪಿಐ ಲಿಂಕ್​ ಇರುವುದು ತನಿಖೆಯಿಂದ ತಿಳಿದುಬಂದಿದೆ. ಇಷ್ಟೇ ಅಲ್ಲದೇ ಜಬೀವುಲ್ಲಾದ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ) ನಂಟು ಇರುವುದು ಕೂಡ ತಿಳಿದಿದೆ.

ಇವರು ಇದಾಗಲೇ ಸರ್ಕಾರದ ವಿರೋಧಿ ಪ್ರತಿಭಟನೆಗಳಲ್ಲಿ ತೊಡಗಿಸಿಕೊಂಡಿರುವ ವಿಡಿಯೋ ವೈರಲ್​ ಆಗಿದೆ. ಇದರಿಂದ ಶಿವಮೊಗ್ಗದಲ್ಲಿಯೂ ಸಾವರ್ಕರ್​ ಫೋಟೋ ನೆಪ ಮಾಡಿಕೊಂಡು ಕೋಮುಗಲಭೆ ಸೃಷ್ಟಿಸುವ ಹುನ್ನಾರ ಮಾಡಿದ್ದರು ಎಂಬ ಬಗ್ಗೆ ಸಂದೇಹಗಳು ಕಾಡತೊಡಗಿವೆ. ಇದೇ ವೇಳೆ ಎಸ್​ಡಿಪಿಐ ನಿಷೇಧ ಮಾಡಲು ರಾಜಕೀಯ ನಾಯಕರು ಸೇರಿದಂತೆ ಹಲವರು ಸರ್ಕಾರಕ್ಕೆ ಒತ್ತಾಯ ಮಾಡುತ್ತಲೇ ಇದ್ದು, ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್​) ಇಲ್ಲಿದೆ ನೋಡಿ ಆರೋಪಿಗಳ ಪ್ರತಿಭಟನೆಯ ವಿಡಿಯೋ:

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net