VIDEO: ಪೋರ್ನ್‌ ಕೇಸ್‌ ಟೆನ್ಷನ್‌ ನಡುವೆಯೇ ವಿಡಿಯೋ ಮೂಲಕ ಈ ಟಿಪ್ಸ್‌ ನೀಡಿದ್ರು ಶಿಲ್ಪಾ

shilpa shetty
Published on

ಮುಂಬೈ: ಅಶ್ಲೀಲ ವಿಡಿಯೋ ದಂಧೆ ಆರೋಪದಡಿ ಜೈಲು ಪಾಲಾಗಿರುವ ಉದ್ಯಮಿ ರಾಜ್‌ಕುಂದ್ರಾ ಕೇಸ್‌ ಇನ್ನಷ್ಟು ಜಟಿಲವಾಗುತ್ತಲೇ ಸಾಗಿದೆ. ಇದೇ ಕೇಸ್‌ನಲ್ಲಿ ಅವರ ಪತ್ನಿ ನಟಿ ಶಿಲ್ಪಾ ಶೆಟ್ಟಿ ವಿರುದ್ಧವೂ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ.

ಇಂಥ ಆರೋಪಗಳಿಂದ ಆರಂಭದಲ್ಲಿ ಜರ್ಜರಿತರಾಗಿದ್ದ ಶಿಲ್ಪಾ ಶೆಟ್ಟಿ, ನಂತರ ನಿಧಾನವಾಗಿ ಅದರಿಂದ ಹೊರಬಂದು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ರಿಯಾಲಿಟಿ ಷೋನಲ್ಲಿ ಜಡ್ಜ್‌ ಆಗಿ ಕಾಣಿಸಿಕೊಂಡು, ನಂತರ ಮನೆಗೆ ಗಣೇಶನನ್ನು ತಂದು ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಮೂಲಕ ಈ ಕೆಟ್ಟ ಗಳಿಗೆಯಿಂದ ಹೊರಕ್ಕೆ ಬರಲು ನಟಿ ಸಾಕಷ್ಟು ತಯಾರಿ ನಡೆಸಿದ್ದಾರೆ.

ಇದೀಗ ಏಕಾಗ್ರತೆಯನ್ನು ಹೇಗೆ ಸಾಧಿಸಬೇಕು ಎಂಬ ಬಗ್ಗೆ ಶಿಲ್ಪಾ ವಿಡಿಯೋ ಮಾಡಿದ್ದು, ಅದನ್ನು ಅಭಿಮಾನಿಗಳು ಫಾಲೋ ಮಾಡುವಂತೆ ಹೇಳಿದ್ದಾರೆ. ಯೋಗ ಪಟುವಾಗಿರುವ ಶಿಲ್ಪಾ ಶೆಟ್ಟಿ, ವಯಸ್ಸು 45 ದಾಟಿದ್ದರೂ ಇನ್ನೂ 20ರ ಯುವತಿಯಂತೆಯೇ ಕಾಣಿಸುತ್ತಾರೆ. ಇದಕ್ಕೆ ಕಾರಣ ಯೋಗ. ಆದ್ದರಿಂದ ಯೋಗದಿಂದ ಹೇಗೆ ಏಕಾಗ್ರತೆ ಹೊಂದುವುದು ಹೇಗೆ, ಸಮಚಿತ್ತ ಹೊಂದೋದು ಹೇಗೆ ಎಂಬ ಬಗ್ಗೆ ಅಭಿಮಾನಿಗಳಿಗೆ ಟಿಪ್ಸ್ ನೀಡಿದ್ದಾರೆ.

ಒಳ್ಳೆಯ ಮನಸ್ಸಿನಿಂದ ದಿನವನ್ನು ಆರಂಭಿಸುವುದು ತುಂಬಾ ಮುಖ್ಯ. ಇದಕ್ಕೆ ಸಹಕಾರಿಯಾಗಿರುವುದು ಯೋಗ. ದಿನ ಅಥವಾ ವಾರವನ್ನು ಆರಂಭಿಸುವಾಗ ಯೋಗವೇ ಬೆಸ್ಟ್‌. ಇದಕ್ಕಿಂತ ಉತ್ತಮವಾದದ್ದೂ ಯಾವುದೂ ಇಲ್ಲ. ಅದರಲ್ಲಿಯೂ ಏಕಪಾದ ವಸಿಷ್ಠಾಸನ ಸಮತೋಲನ, ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಏಕಪಾದ ವಸಿಷ್ಠಾಸನದ ಕುರಿತು ವಿವರಣೆ ನೀಡಿರುವ ಅವರು, ಇದು ಮಣಿಕಟ್ಟನ್ನು ಬಲಪಡಿಸುತ್ತದೆ. ಜತೆಗೆ, ಭುಜಗಳು ಮತ್ತು ಬೆನ್ನುಮೂಳೆಯನ್ನು ಬಲಪಡಿಸುತ್ತದೆ. ಈ ದಿನವನ್ನು ಉತ್ಸುಹಕವಾಗಿ ಆರಂಭಿಸಲು ಸಹಾಯ ಮಾಡುತ್ತದೆ ಎಂದಿರುವ ನಟಿ, ನಿಮಗೆ ಇದು ಇಷ್ಟವಾದರೆ ಮಾಹಿತಿ ಹಂಚಿಕೊಳ್ಳಿ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ತಿಳಿಸಿದ್ದಾರೆ. ಇದರ ವಿಡಿಯೋ ಕೂಡ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿ ಅವರ ಯೋಗದ ವಿಡಿಯೋ ಇಲ್ಲಿದೆ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net