ಕ್ರಿಕೆಟ್​ ಮಾಂತ್ರಿಕ ಸಚಿನ್​ ತೆಂಡೂಲ್ಕರ್​ ಆಸ್ಪತ್ರೆಗೆ ದಾಖಲು: ಟ್ವೀಟ್​ ಮಾಡಿದ ತಾರೆ ಹೇಳಿದ್ದೇನು?

sachin
Published on

ನವದೆಹಲಿ: ಮಾಜಿ ಕ್ರಿಕೆಟಿಗ್​ ಸಚಿನ್​ ತೆಂಡೂಲ್ಕರ್​ ಅವರು ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರೊನಾ ಸೋಂಕಿನಿಂದ ಬಳಲುತ್ತಿರುವ ಇವರನ್ನು ಇಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಚಿನ್​ ಅವರಿಗೆ ಎರಡು ದಿನಗಳ ಹಿಂದೆ ಸೋಂಕು ತಗುಲಿತ್ತು. ಈ ಕುರಿತು ಅವರೇ ಟ್ವಿಟರ್​ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಸೋಂಕಿನ ಹೆಚ್ಚಿನ ಲಕ್ಷಣಗಳು ಇಲ್ಲದಿದ್ದ ಕಾರಣ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಮನೆಯಲ್ಲಿಯೇ ಐಸೋಲೇಷನ್​ ಆಗಿರುವ ಕುರಿತು ಅವರು ಮಾಹಿತಿ ನೀಡಿದ್ದರು.

ಆದರೆ ಇದೀಗ ಸೋಂಕಿನ ಲಕ್ಷಣಗಳು ಹೆಚ್ಚಿಗೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇದರಿಂದಾಗಿ ಎರಡು ದಿನಗಳಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದವರು ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಕುರಿತು ಪುನಃ ಟ್ವೀಟ್​ ಮಾಡಿ ಮಾಹಿತಿ ನೀಡಿರುವ ಸಚಿನ್​, ನನ್ನ ಆರೋಗ್ಯ ಚೇತರಿಕೆಯ ಬಗ್ಗೆ ಹರಸಿ, ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ಇಂದು ವೈದ್ಯರ ಸಲಹೆಯ ಮೇರೆಗೆ ಕೋವಿಡ್​-19 ಚಿಕಿತ್ಸೆಗಾಗಿ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ಕರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ಜತೆಗೆ ವಿಶ್ವ ಕಪ್​ ಗೆದ್ದ 10ನೇ ವಾರ್ಷಿಕೋತ್ಸವದ ಶುಭಾಶಯಗಳು ಎಂದೂ ಅವರು ಟ್ವಿಟರ್​ನಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net