ಧಾರವಾಡಕ್ಕೆ ಬಂದು ಡಾನ್‌ ಆದ- ಮಗನ ಮದುವೆ ಮುಗಿಸಿ ಗುಂಡೇಟಿಗೆ ಬಲಿಯಾದ!

rowdy
Published on

ಹುಬ್ಬಳ್ಳಿ: ನಿನ್ನೆ ಸಂಜೆ ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಗುಂಡಿನ ಸುರಿಮಳೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಹುಬ್ಬಳ್ಳಿಯ ರೌಡಿ ಷೀಟರ್‌ ಫ್ರೋಟ್ ಇರ್ಫಾನ್‍ (52) ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಮೂಲತಃ ಉತ್ತರಕನ್ನಡ ಜಿಲ್ಲೆಯ ಇರ್ಫಾನ್ ಹೊಟ್ಟೆಪಾಡಿಗಾಗಿ ಧಾರವಾಡಕ್ಕೆ ಬಂದು ಅಲ್ಲಿಯೇ ನೆಲೆಯೂರಿ ತನ್ನ ಅಪರಾಧ ಜಗತ್ತನ್ನು ವಿಸ್ತಾರ ಮಾಡಿಕೊಮಡಿದು ಡಾನ್ ಆಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮಗನ ಮದುವೆ ಮುಗಿಸಿ ಅತಿಥಿಗಳನ್ನು ಕಳುಹಿಸಲು ರಸ್ತೆ ಬದಿಯಲ್ಲಿ ಬಂದು ನಿಂತಿದ್ದ ವೇಳೆ ಬೈಕ್‌ನಲ್ಲಿ ಬಂದ ಮೂವರು ಗುಂಡಿನ ಮಳೆಗರೆದಿದ್ದರು. ಇರ್ಫಾನ್ ಇಂದು ತಮ್ಮ ಮಗನ ಮದುವೆ ನಂತರ ಕಲ್ಯಾಣ ಮಂಟಪದ ಹೊರಗೆ ಬೀಗರಿಗೆ ಬೀಳ್ಕೊಡುಗೆ ನೀಡುತ್ತಿದ್ದ. ಈ ವೇಳೆ ಗುಂಡಿನ ದಾಳಿ ನಡೆದಿತ್ತು.

ಜನರು ಓಡಾಟ ನಡೆಸುತ್ತಿರುವಾಗಲೇ ಸಿನಿಮೀಯ ರೀತಿಯಲ್ಲಿ ಬೈಕ್‌ನಲ್ಲಿ ಬಂದು ಅನಾಯಾಸವಾಗಿ ಗುಂಡು ಹಾರಿಸಿ ನಾಪತ್ತೆಯಾಗಿದ್ದು. ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

ಧಾರವಾಡದ ಫ್ರೋಟ್ ಇರ್ಫಾನ್ ನಾಲ್ಕು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿದ್ದ. ಈ ಹಿನ್ನೆಲೆಯಲ್ಲಿ ರೌಡಿ ಷೀಟರ್‌ ಪಟ್ಟಿಯಲ್ಲಿ ಈತನ ಹೆಸರು ಇದೆ. ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಇವರನ್ನು ಪೊಲೀಸ್ ಆಯುಕ್ತ ಆರ್.ದಿಲೀಪ್​​​​ ಧಾರವಾಡದಿಂದ ಗಡಿಪಾರು ಮಾಡಿದ್ದರು.

ಈ ಗುಂಡಿನ ದಾಳಿಗೆ ಹಳೇ ವೈಷಮ್ಯವೇ ಕಾರಣ ಎನ್ನಲಾಗುತ್ತಿದೆ. ಮೂರು ಗುಂಡು ಇರ್ಫಾನ್‍ಗೆ ತಗುಲಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಿ, ಓಡಿ ಹೋಗಿರುವವರ ಮತ್ತೂ ಬಳಕೆಯಾಗಿರುವ ದ್ವಿಚಕ್ರ ವಾಹನಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ ಪೊಲೀಸರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net