VIDEO: ಖಾಲಿ ವಿಮಾನದಲ್ಲಿ ಗಗನಸಖಿಯ ರೀಲ್ಸ್​ಗೆ ನೆಟ್ಟಿಗರು ಫಿದಾ: ವಿಡಿಯೋ ವೈರಲ್​

viral
Published on

ನವದೆಹಲಿ: ಟಿಕ್​ಟಾಕ್ ಬ್ಯಾನ್​ ಆಗುವ ಮೊದಲು ಭಾರತದಲ್ಲಿ ಟಿಕ್​ಟಾಕ್​ನಲ್ಲಿ ವಿಡಿಯೋ ಮಾಡುತ್ತಿದ್ದವರು ಅದೆಷ್ಟೋ ಮಂದಿ. ಇದೀಗ ಎಲ್ಲರಿಗೂ ರೀಲ್ಸ್​ ಹುಚ್ಚು. ಬಗೆಬಗೆ ನೃತ್ಯ ಮಾಡಿ ರೀಲ್ಸ್​ನಲ್ಲಿ ಹರಿಬಿಡುತ್ತಾರೆ. ಅವುಗಳ ಪೈಕಿ ಕೆಲವೊಂದು ಭಾರಿ ವೈರಲ್​ ಆಗುತ್ತವೆ.

ಅಂಥದ್ದೇ ಒಂದು ನೃತ್ಯವೀಗ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಅದು ಗಗನ ಸಖಿಯರ ಡಾನ್ಸ್​. ದೀಪಿಕಾ ಪಡುಕೋಣೆ ಅವರು ನಟಿಸಿರುವ ಬಲಮ್ ಪಿಚ್​ಕಾರಿ ಹಾಡಿಗೆ ಸ್ಪೈಸ್‌ಜೆಟ್‌ನಲ್ಲಿ ಕೆಲಸ ಮಾಡುವ ಗಗನಸಖಿಯರು ನರ್ತಿಸಿದ್ದಾರೆ.

ಗಗನಸಖಿ ಉಮಾ ಅವರು ತಾವು ನರ್ತಿಸಿರುವ ನೃತ್ಯದ ವಿಡಿಯೋ ಅನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಪ್ರಯಾಣಿಕರು ಇಲ್ಲದ ನೆಲದ ಮೇಲೆ ವೀಡಿಯೊವನ್ನು ಚಿತ್ರೀಕರಿಸಲಾಗಿದೆ, ಪೂರ್ವ ಅನುಮತಿಯನ್ನು ತೆಗೆದುಕೊಳ್ಳಲಾಗಿದೆ ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net