ಮಹಿಳೆಯರ ಬಟ್ಟೆ ತೊಳೆದು, ಇಸ್ತ್ರಿ ಮಾಡಿದರಷ್ಟೇ ಜಾಮೀನು: ರೇಪ್‌ ಆರೋಪಿಗೆ ಕೋರ್ಟ್‌ ಷರತ್ತು!

washing
Published on

ಪಟ್ನಾ: ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಮಹಿಳೆಯರ ಬಟ್ಟೆ ತೊಳೆಯುವ ಮತ್ತು ಆ ಬಟಟೆಗಳನ್ನು ಇಸ್ತ್ರಿ ಮಾಡುವ ಷರತ್ತು ನೀಡಿ ಜಾಮೀನು ಮಂಜೂರು ಮಾಡಲಾಗಿದೆ.

ಈ ಘಟನೆ ನಡೆದಿರುವುದು ಬಿಹಾರದ ಮಜಹೋರ್‌ನಲ್ಲಿ ಇಂಥದ್ದೊಂದು ಶಿಕ್ಷೆ ಅನುಭವಿಸಿರುವವನು ಗ್ರಾಮದ 20 ವರ್ಷದ ಲಾಲನ್‌ ಕುಮಾರ್ ಎಂಬ ಧೋಬಿ. ಅತ್ಯಾಚಾರ ಯತ್ನ ಸೇರಿ ವಿವಿಧ ಆರೋಪಗಳಡಿ ಈತನನ್ನು ಏಪ್ರಿಲ್ ತಿಂಗಳಲ್ಲಿ ಬಂಧಿಸಲಾಗಿತ್ತು.

ಜಾಮೀನು ನೀಡುವಂತೆ ಕೋರಿ ಆತ ಕೋರ್ಟ್‌ ಮೊರೆ ಹೋಗಿದ್ದ. ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವ ಕೋರ್ಟ್‌, ಗ್ರಾಮದಲ್ಲಿ ಇರುವ ಎಲ್ಲ ಮಹಿಳೆಯರ ಬಟ್ಟೆಗಳನ್ನು ತೊಳೆಯಬೇಕು ಮತ್ತು ಇಸ್ತ್ರಿ ಮಾಡಬೇಕು.ಬೇಕಾದ ಡಿಟರ್ಜೆಂಟ್ ಮತ್ತು ಇತರೆ ವಸ್ತುಗಳನ್ನು ಸ್ವಯಂ ಖರೀದಿಸಬೇಕು ಎಂದು ಹೇಳಿದೆ.

ಗ್ರಾಮದಲ್ಲಿ ಸರಿಸುಮಾರು 2000 ಮಹಿಳೆಯರು ಇದ್ದು ಎಲ್ಲರಿಗೂ ಈ ಷರತ್ತು ಖುಷಿ ಕೊಟ್ಟಿದೆ ಎಂದು ಮಧುಬನಿ ಜಿಲ್ಲೆಯ ಪೊಲೀಸ್ ಅಧಿಕಾರಿಯಾದ ಸಂತೋಷ್ ಕುಮಾರ್ ಸಿಂಗ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net