More

    ಕರೊನಾ ಇದ್ರೆ ಇರ್ಲಿ ಬಿಡ್ರಿ…. ಕೋಳಿ ಸಿಗದಿದ್ರೆ ಗತಿ ಏನ್ರಿ ಎಂದು ಸರಿ ನಿದ್ದೆನೂ ಮಾಡ್ದೇ ಓಡಿಬಂದ್ರು!

    ಬೆಂಗಳೂರು: ಭಾನುವಾರ ಮುಂಜಾನೆ 6 ಗಂಟೆಯಿಂದಲೇ ಕೋಳಿ ಮತ್ತು ಮಾಂಸದ ಅಂಗಡಿಯ ಕದ ತಟ್ಟಿದ ಗ್ರಾಹಕರು ಮಾಂಸ ಖರೀದಿಗೆ ಮುಗಿಬಿದ್ದಿದ್ದ ದೃಶ್ಯ ಸಿಲಿಕಾನ್ ಸಿಟಿಯ ಉದ್ದಗಲಕ್ಕೂ ಕಂಡುಬಂತು. ಬಿಟ್ಟರೆ ಸಿಗಲ್ಲವೇನೋ ಎಂಬ ದಾವಂತಕ್ಕೆ ಬಿದ್ದ ಗ್ರಾಹಕರು ಕೋಳಿ ಮತ್ತು ಮಾಂಸದ ಅಂಗಡಿಗೆ ಮುಗಿಬಿದ್ದಿದ್ದರು. ಭಾನುವಾರದ ಲಾಕ್ ಡೌನ್ ಅನ್ನು ಮಾಂಸದ ಅಡುಗೆಯಿಂದಲೇ ಪೂರೈಸಬೇಕೆಂಬ ಚಾಲೆಂಜ್ ಗೆ ಬಿದ್ದವರಂತೆ ಕೋಳಿ ಅಂಗಡಿಗಳ ಮುಂದೆ ಜನಜಾತ್ರೆಯೇ ಜಮಾಯಿಸಿತ್ತು.

    ಕೋಳಿ ಖಾಲಿ: ಇಷ್ಟೊಂದು ಗ್ರಾಹಕರು ಜಮಾಯಿಸುವ ಸುಳಿವರಿಯದ ಕೋಳಿ ಮತ್ತು ಮಾಂಸದಂಗಡಿ ಮಾಲೀಕರು ಗ್ರಾಹಕರ ದಂಡು ಕಂಡು ಬೆಸ್ತು ಬಿದ್ದರು. ೮ ಗಂಟೆಗೆಲ್ಲಾ ಕೋಳಿ ಖಾಲಿ ಮಾಂಸ ಖಾಲಿ ಎಂಬ ಅಂಗಡಿ ಮಾಲೀಕರು, ಹತಾಶ ಗ್ರಾಹಕರ ಆಕ್ರೋಶ ಎದುರಿಸಿದ ಪ್ರಸಂಗವೂ ನಡೆಯಿತು.

    ನಿಯಮ ಉಲ್ಲಂಘನೆ: ಕರೊನಾ ನಿಯಂತ್ರಣಕ್ಕೆ ಸರ್ಕಾರ ಘೋಷಿಸಿರುವ ಲಾಕ್ಡೌನ್ ನಿಯಮ ಭಾನುವಾರ ೧೦ ಗಂಟೆಯಷ್ಟರಲ್ಲೇ ವಿಫಲವಾದಂತಾಯಿತು. ಏಕಕಾಲಕ್ಕೆ ಮನೆಯಿಂದ ಹೊರಬಿದ್ದ ಗ್ರಾಹಕರು ಮಾಸ್ಕ್ ಧರಿಸದೆ ಪರಸ್ಪರ ಅಂತರ ಕಾಯ್ದುಕೊಳ್ಳದೆ ಮಾಂಸ ಖರೀದಿಗೆ ಒಬ್ಬರು ಮತ್ತೊಬ್ಬರ ಮೇಲೆ ಮುಗಿಬಿದ್ದಿದ್ದರು. ೧೦ ಗಂಟೆ ಕಳೆದರೂ ಜಾಗ ಖಾಲಿ ಮಾಡದ ಗ್ರಾಹಕರಿಗೆ ಖಾಕಿ ಪಡೆ ಲಾಠಿ ರುಚಿ ತೋರಿಸಿ ಚದುರಿಸುವಲ್ಲಿ ಸುತ್ತು ಹೊಡೆದರು.

    ವೀಕೆಂಡ್‌ ಕರ್ಫ್ಯೂ ಜತೆ ಲಾಕ್‌ಡೌನೂ ವಿಸ್ತರಣೆ ಆಗಿತ್ತಾ? ತಜ್ಞರು ಏನು ಹೇಳಿದ್ದಾರೆ ನೋಡಿ…

    ಮುಟ್ಟಿನ ಐದು ದಿನ ಆಚೆ-ಈಚೆ ಕರೊನಾ ಲಸಿಕೆ ಪಡೆಯಬಾರದು ಎನ್ನುವ ಸುದ್ದಿ ನಿಜನಾ?

    ಮದ್ವೆಗೆ ಒಂದಿಬ್ರು ಹೆಚ್ಚಿಗೆ ಹೋದ್ರೆ ಗೊತ್ತಾಗಲ್ಲಾ ಅಂದ್ಕೊಂಡ್ರಾ? ಬ್ಯಾಂಡ್‌ ಇದ್ರಷ್ಟೇ ಎಂಟ್ರಿ…. ನೋಡಿ ಹೊಸ ಪ್ಲ್ಯಾನ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts