More

    ಅಧ್ಯಯನದಿಂದ ಗುರಿ ತಲುಪಲು ಸಾಧ್ಯ

    ಮೂಡಿಗೆರೆ: ಯುವಜನರು ಶ್ರಮಪಟ್ಟರೆ ಯಶಸ್ಸು ಗಳಿಸಬಹುದು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಯಾವುದೇ ಕ್ಷೇತ್ರದಲ್ಲಿ ಅಧ್ಯಯನದಿಂದ ಮಾತ್ರ ಗುರಿ ತಲುಪಬಹುದು ಎಂಬುದಕ್ಕೆ ಸಿಪಿಐ ತಾಲೂಕು ಕಾರ್ಯದರ್ಶಿ ರಮೇಶ್ ಕೆಳಗೂರು ನಿದರ್ಶನ ಎಂದು ಪಕ್ಷದ ಹಿರಿಯ ನಾಯಕ ಬಿ.ಕೆ.ಲಕ್ಷ್ಮಣ್‌ಕುಮಾರ್ ಹೇಳಿದರು.

    ಭಾರತ ಕ್ರೀಡಾ ಪ್ರಾಧಿಕಾರ ನಡೆಸುವ ತರಬೇತುದಾರರ ಪರೀಕ್ಷೆಯಲ್ಲಿ ಕರ್ನಾಟಕದಿಂದ ಆಯ್ಕೆಗೊಂಡ ಸಿಪಿಐ ತಾಲೂಕು ಕಾರ್ಯದರ್ಶಿ ರಮೇಶ್ ಕೆಳಗೂರು ಅವರಿಗೆ ಸೋಮವಾರ ಪಕ್ಷದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
    ಅಧಿಕಾರದ ಕುರ್ಚಿ ಲಭ್ಯವಾದರೂ ಅಧ್ಯಯನಶಕ್ತಿ ಇದ್ದಲ್ಲಿ ಮಾತ್ರ ಯಶಸ್ಸುಗಳಿಸಬಹುದು. ಮೊಬೈಲ್, ಸಾಮಾಜಿಕ ಜಾಲತಾಣಗಳ ಅಬ್ಬರದಿಂದ ಜನರಲ್ಲಿ ಓದುವ ಮನಸ್ಥಿತಿ ಇಲ್ಲವಾಗಿದೆ. ನಾವು ಸುಳ್ಳು ಸುದ್ದಿಗಳನ್ನು ನಂಬಿ ಅಸಲಿಯತ್ತನ್ನು ಪರಿಶೀಲಿಸುವುದಿಲ್ಲ. ಯುವಜನರು ಅಧ್ಯಯನ ಮಾಡುವುದನ್ನೇ ಮರೆತಿದ್ದಾರೆ. ಇಂಥ ಸನ್ನಿವೇಶದಲ್ಲೂ ರಮೇಶ್ ಕೆಳಗೂರು ಭಾರತ ಕ್ರೀಡಾ ಪ್ರಾಧಿಕಾರ ನಡೆಸುವ ತರಬೇತುದಾರರ ಪರೀಕ್ಷೆಯಲ್ಲಿ ಆಯ್ಕೆಗೊಂಡಿರುವುದು ಹೆಮ್ಮೆಯ ವಿಷಯ ಎಂದರು.
    ನಿಷ್ಠಾವಂತ ಕಾರ್ಯಕರ್ತ ರಮೇಶ್ ಕೆಳಗೂರು ಅವರಂಥ ಯುವನಾಯಕರ ಸೇವೆ ಮುಂದಿನ ದಿನಗಳಲ್ಲಿ ದೇಶಕ್ಕೆ ಸಿಗಲಿ. ಅವರು ಕ್ರೀಡಾ ತರಬೇತುದಾರರಾಗಿ ಆಯ್ಕೆ ಆಗಿ ಏಷಿಯನ್ ಒಲಿಂಪಿಕ್ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಅವಕಾಶ ಸಿಗಲಿ ಎಂದು ಆಶಿಸಿದರು.
    ರಮೇಶ್ ಅವರ ತಾಲೂಕು ಕಾರ್ಯದರ್ಶಿ ಜವಾಬ್ದಾರಿಯನ್ನು ಪಕ್ಷದ ಸಹಕಾರ್ಯದರ್ಶಿ ಗುಂಡಣ್ಣ ತಾತ್ಕಾಲಿಕವಾಗಿ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
    ಗೋಪಾಲ್ ಎನ್. ಶೆಟ್ಟಿ, ಗುಂಡಣ್ಣ, ವಾಸು, ಪ್ರಕಾಶ್, ವಿಠಲ, ರಾಜು ಬಾನಳ್ಳಿ, ಶಂಕರ್, ಜಗದೀಶ್ ಚಕ್ರವರ್ತಿ, ಸುಂದರ್ ಬಾಳೂರು, ಸುರೇಂದ್ರ, ಅನಿಲ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts