More

    ಗ್ರಾಮೀಣ ಭಾಗದಲ್ಲಿ ಸಂಭ್ರಮಾಚರಣೆ

    ಮುದಗಲ್: ಯುಗಾದಿಯು ಹಬ್ಬದ ಕರಿದಿನವಾದ ಬುಧವಾರ ರೈತರು ಮತ್ತು ಯುವಕರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮದಿಂದ ಆಚರಿಸಿದರು.
    ಬೇವಿನ ತಪ್ಪಲದಿಂದ ರಾಸುಗಳಿಗೆ ಮೈಮೇಲೆ ಸವರಿ ಯುವಕರೆಲ್ಲರು ಮನೆ ಮಂದಿಯ ಜೊತೆಗೆ ಬಣ್ಣದ ಆಟ ಆಡುವ ಮೂಲಕ ಸಂತಸಪಟ್ಟರು. ನಗರ ಪ್ರದೇಶಗಳಲ್ಲಿ ಆಚರಣೆ ಅಷ್ಟಾಗಿ ಕಂಡು ಬರಲಿಲ್ಲ. ಆದರೆ ಗ್ರಾಮೀಣ ಭಾಗದಲ್ಲಿ ಹಬ್ಬದ ವಿಜೃಂಭಣೆಯಿಂದ ಆಚರಿಸಿದರು.

    ಯುಗಾದಿ ದಿನ ಮಂಗಳವಾರ ಬೇವು ಬೆಲ್ಲ ಸವಿದು ಮನೆಯ ರೈತರು ರಾಸುಗಳ ಮೈಗೆ ಎಣ್ಣಿ ಸವರಿ ಮುಂಗಾರು ಬಿತ್ತನೆಗೆ ಕೂರಿಗೆ, ಕುಂಟೆ ಮಿಣಿಗಳನ್ನು ಸಿದ್ಧತೆ ಮಾಡಿಕೊಂಡರು. ಹೋಳಿಗೆ ಸಿಹಿ ಅಡುಗೆ ಮಾಡಿ ಮನೆ ಮಂದಿಯೆಲ್ಲ ಸೇರಿ ಊಟ ಸವಿದರು. ಬೇವಿನ ಹೂ ಹಾಗೂ ಮಾವು, ಹುಣಿಸೆ, ಬೆಲ್ಲ ಹಾಕಿ ಮಾಡಿದ ಕಹಿ ಹಾಗೂ ಸಿಹಿ ಗುಣ ಇರುವ ಬೇವು, ಬೆಲ್ಲವನ್ನು ಸವಿಯುವ ಮೂಲಕ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿಕರಿಸಿಕೊಂಡು ಬದುಕು ಸಾಗಿಸೋಣ ಎಂಬ ಸಂದೇಶವನ್ನು ಸಾರಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts