ಪಿಎಸ್​ಐ ಪರೀಕ್ಷೆ ಗೋಲ್​ಮಾಲ್​: ತಲೆಮರೆಸಿಕೊಂಡು ಓಡಾಡುತ್ತಿದ್ದ ಪ್ರಮುಖ ಆರೋಪಿ ಅರೆಸ್ಟ್​

PSI
Published on

ಬೆಂಗಳೂರು: ಪಿಎಸ್ಐ ನೇಮಕಾತಿಗೆ ಸಂಬಂಧಿಸಿದಂತೆ ಅಕ್ರಮ ನಡೆಸಿರುವ ಒಬ್ಬೊಬ್ಬರೇ ಆರೋಪಿಗಳು ಪೊಲೀಸರ ಬಲೆಗೆ ಬೀಳುತ್ತಿದ್ದಾರೆ.

ಈ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್​​ನ ಮೊದಲ ಆರೋಪಿ ಜಾಗೃತ್‌ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಚನ್ನಪಟ್ಟಣದಲ್ಲಿ ಈತನನ್ನು ಬಂಧಿಸಲಾಗಿದೆ. ಪಿಎಸ್​ಐ ಪರೀಕ್ಷೆಯಲ್ಲಿ ನಡೆದ ಅಕ್ರಮ ನೇಮಕಾತಿ ಬಯಲಿಗೆ ಬರುತ್ತಿದ್ದಂತೆಯೇ ಇದರ ವಿರುದ್ಧ ಪ್ರತಿಭಟನೆ ಮಾಡಿದ ಮುಂದಾಳತ್ವವನ್ನೂ ಈತ ವಹಿಸಿದ್ದ ಎನ್ನುವುದು ಪೊಲೀಸ್​ ತನಿಖೆಯಿಂದ ಬಯಲಿಗೆ ಬಂದಿದೆ.

ಹಗರಣ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ ಈತನ ಜಾತಕಕ್ಕಾಗಿ ಜಾಲಾಡಿದ್ದರು. ಕೊನೆಗೆ ತಿಳಿದುಬಂದದ್ದು ಏನೆಂದರೆ, ಜಾಗೃತ್, ಮೊದಲ ಹಂತದಲ್ಲೇ ಹಣ ಕೊಟ್ಟು ಒಎಂಆರ್ ಶೀಟ್ ತಿದ್ದಿಸಿರುವುದು ಗೊತ್ತಾಗಿತ್ತು. ಎಫ್​ಎಸ್​​ಎಲ್ ವರದಿಯನ್ವಯ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ. ಇದಾದ ನಂತರ ತಲೆಮರೆಸಿಕೊಂಡಿದ್ದ.

ತನ್ನನ್ನು ಹಿಡಿಯಲು ಪೊಲೀಸರು ತಂಡ ರಚಿಸಿರುವುದು ತಿಳಿಯುತ್ತಲೇ ಹೈಕೋರ್ಟ್​ನಲ್ಲಿ ಎಫ್‌ಐಆರ್‌ ವಜಾಕ್ಕೆ ಆಗ್ರಹಿಸಿ ಅರ್ಜಿ ಸಲ್ಲಿಸಿದ್ದ. ಕೇರಳ ಹಾಗೂ ಬೇರೆ ಬೇರೆ ಕಡೆ ತಪ್ಪಿಸಿಕೊಂಡು ತಿರುಗುತ್ತಿದ್ದ. ಈತ ಹಣ ನೀಡಿ ಮಧ್ಯವರ್ತಿ ಹಾಗೂ ಎಫ್​ಡಿಎ ಹರ್ಷ ಮೂಲಕ ವ್ಯವಹಾರ ಮಾಡಿರುವುದು ಬೆಳಕಿಗೆ ಬಂದಿದೆ

ಸದ್ಯ ಜಾಗೃತ್​ನನ್ನು ಸಿಐಡಿ ಪೊಲೀಸರು ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net