ಅಪ್ಪನ ಆಸ್ತಿಯಲ್ಲಿ ಪಾಲು ಕೊಡದೇ ಯಾರಾದರೂ ಮಾರಾಟ ಮಾಡಿದರೆ ಅದನ್ನು ಪಡೆದುಕೊಳ್ಳುವುದು ಹೇಗೆ?

nyayadevate
Published on
ನಮ್ಮ ಪಾಲಕರಿಗೆ ನಾನು ಮತ್ತು ಅಣ್ಣ ಇಬ್ಬರು ಮಕ್ಕಳು. ನಮ್ಮ ತಂದೆ 2006ರಲ್ಲಿ ತೀರಿಕೊಂಡರು. ಆ ನಂತರ ನಮ್ಮ ತಾಯಿ ಮತ್ತು ಅಣ್ಣ ಸೇರಿ ನಮ್ಮ ಹೊಲವನ್ನು ನನಗೆ ಹೇಳದೆ, ನನ್ನ ಸಹಿ ಇಲ್ಲದೆ , ಮತ್ತೊಬ್ಬರಿಗೆ ಮಾರಿದ್ದಾರೆ. ಈವರೆಗೆ ನನಗೆ ವಿಷಯ ತಿಳಿದಿರಲಿಲ್ಲ. ಈಗ ನಮ್ಮ ತಾಯಿಯೂ ಫೆಬ್ರವರಿ 2019ರಲ್ಲಿ ತೀರಿಕೊಂಡಿದ್ದಾರೆ. ಈಗ ನಾನು ನನ್ನ ಆಸ್ತಿಯ ಪಾಲನ್ನು ಹೇಗೆ ಪಡೆದುಕೊಳ್ಳಬೇಕು?

ಉತ್ತರ: ನೀವು ಕೂಡಲೇ ವಕೀಲರನ್ನು ಸಂರ್ಪಸಿ ನಿಮ್ಮ ಅಣ್ಣನ ವಿರುದ್ಧ ವಿಭಾಗದ ದಾವೆ ಹಾಕಿ. ನಿಮ್ಮ ತಂದೆ ಬಿಟ್ಟು ಹೋದ ಎಲ್ಲ ಆಸ್ತಿಗಳನ್ನೂ ಸೇರಿಸಿ ದಾವೆ ಹಾಕಿ. ನಿಮ್ಮ ಅಣ್ಣ ಮತ್ತು ತಾಯಿ ಸೇರಿ ಮಾರಿದ ಹೊಲವನ್ನು ಕ್ರಯಕ್ಕೆ ಪಡೆದವರನ್ನೂ ದಾವೆಯಲ್ಲಿ ಪಾರ್ಟಿಮಾಡಿ. ಆ ಮಾರಾಟ ನಿಮ್ಮ ಹಕ್ಕನ್ನು ಬಂಧಿಸುವುದಿಲ್ಲ ಎನ್ನುವ ಹಕ್ಕು ಘೊಷಣೆಯನ್ನೂ ನೀವು ಕೇಳಬಹುದು.

ನಿಮಗೆ ವಿಷಯ ಯಾವಾಗ ತಿಳಿಯಿತು ಎನ್ನುವುದನ್ನೂ ದಾವೆಯಲ್ಲಿ ಬರೆಯಿರಿ. ನಿಮ್ಮ ಭಾಗ ನಿಮಗೆ ಸಿಗುತ್ತದೆ. ಕೆಲವೊಮ್ಮೆ ಮಾರಾಟ ಮಾಡಿದ ಆಸ್ತಿ ಬಿಟ್ಟು ಉಳಿದ ಆಸ್ತಿಯಲ್ಲಿ ನಿಮಗೆ ಹೆಚ್ಚಿನ ಭಾಗ ಕೊಡುವ ಸಾಧ್ಯತೆಯೂ ಇರುತ್ತದೆ. ದಾವೆಯಲ್ಲಿ ನಿಮ್ಮ ಅಣ್ಣನಿಗೆ ನೋಟೀಸು ಜಾರಿ ಆದ ಮೇಲೆ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ಕೇಳಿಕೊಳ್ಳಿ. ಮಧ್ಯಸ್ಥಿಕೆಯಲ್ಲಿ ನಿಮ್ಮ ನಿಮ್ಮಲ್ಲಿ ಏನಾದರೂ ಒಪ್ಪಂದ ಆಗಲೂ ಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net