More

    ಅಪ್ಪನ ಅಣ್ಣನಿಗೆ ವಾರಸುದಾರರಿಲ್ಲದಿದ್ದರೆ ಆಸ್ತಿ ತಮ್ಮನ ಮಕ್ಕಳಿಗೆ ಬರುತ್ತಾ? ಕಾನೂನು ಏನು ಹೇಳಿದೆ ನೋಡಿ…

    ಅಪ್ಪನ ಅಣ್ಣನಿಗೆ ವಾರಸುದಾರರಿಲ್ಲದಿದ್ದರೆ ಆಸ್ತಿ ತಮ್ಮನ ಮಕ್ಕಳಿಗೆ ಬರುತ್ತಾ? ಕಾನೂನು ಏನು ಹೇಳಿದೆ ನೋಡಿ...ಪ್ರಶ್ನೆ: ನನ್ನ ತಂದೆಯ ಸ್ವಂತ ಅಣ್ಣನಿಗೆ ಮಕ್ಕಳಿಲ್ಲ. ನಮಗೆ ತಾಯಿ ಇಲ್ಲ. ನನ್ನನ್ನು ಮತ್ತು ನನ್ನ ತಂಗಿಯನ್ನು ನಮ್ಮ ದೊಡ್ಡಪ್ಪ ಮತ್ತು ದೊಡ್ಡಮ್ಮನೇ ಸಾಕಿದ್ದಾರೆ.

    ನಮ್ಮಿಬ್ಬರಿಗೂ ನಾಲ್ಕೂವರೆ ಎಕರೆ ಜಮೀನು ಸಹ ಖರೀದಿಸಿ ನೋಂದಾಯಿಸಿ ಕೊಟ್ಟಿದ್ದಾರೆ. ದೊಡ್ಡಪ್ಪ ಮತ್ತು ದೊಡ್ಡಮ್ಮ ತೀರಿಕೊಂಡು ನಲವತ್ತು ವರ್ಷಗಳಾಗಿವೆ. ಅವರ ಆಸ್ತಿಯನ್ನು ನಾವೇ ಅನುಭವಿಸುತ್ತ ಬಂದಿದ್ದೇವೆ. ಈಗ ಅವರ ಎಲ್ಲ ಆಸ್ತಿಗಳಿಗೂ ನಾವೇ ಮಾಲೀಕತ್ವ ಪಡೆಯಲು ನಾವು ಏನು ಮಾಡಬೇಕು?

    ಉತ್ತರ: ನೀವು ನಿಮ್ಮ ದೊಡ್ಡಪ್ಪನಿಗೆ ಸೇರಿದ ಎಲ್ಲ ಆಸ್ತಿಗಳ ಖಾತೆ ಬದಲಾವಣೆ ನಿಮ್ಮ ಮತ್ತು ನಿಮ್ಮ ತಂಗಿಯ ಹೆಸರಿಗೆ ಆಗಬೇಕೆಂದು ರೆವಿನ್ಯೂ ಅಧಿಕಾರಿಗಳಿಗೆ ಅರ್ಜಿ ಕೊಡಿ. ಯಾರಾದರೂ ತಕರಾರು ಕೊಡುತ್ತಾರೆಯೇ ಎಂದು ಗಮನಿಸಿ. ಯಾರೂ ತಕರಾರು ಕೊಡದಿದ್ದರೆ ಖಾತೆ ಬದಲಾಯಿಸಿಕೊಂಡು ಕಂದಾಯ ಕಟ್ಟಿಕೊಂಡು ಅನುಭವಿಸುತ್ತ ಬನ್ನಿ. ಕೊಳ್ಳುವವರು ಮುಂದೆ ಬಂದರೆ ಮಾರಾಟವನ್ನೂ ಮಾಡಬಹುದು.

    ಒಂದುವೇಳೆ ಯಾರಾದರೂ ತಕರಾರು ಮಾಡಿದರೆ, ಆಗ ಅಂತಹ ವ್ಯಕ್ತಿಗಳ ವಿರುದ್ಧ ನೀವು ನ್ಯಾಯಾಲಯದಲ್ಲಿ ಹಕ್ಕು ಘೋಷಣೆಯ ದಾವೆಯನ್ನು ಹಾಕಬೇಕಾಗುತ್ತದೆ.

    ನೀವು ನಿಮ್ಮ ದೊಡ್ಡಪ್ಪನ ಎರಡನೇ ದರ್ಜೆಯ ವಾರಸುದಾರರಾದ್ದರಿಂದ ಅವರ ಆಸ್ತಿಗೆ ನೀವೇ ಮಾಲೀಕರು ಎಂದು ನಿಮ್ಮ ಹಕ್ಕನ್ನು ಘೋಷಿಸಿ ಎಂದು ನ್ಯಾಯಾಲಯವನ್ನು ಕೇಳಿಕೊಳ್ಳಬಹುದು. ಅಥವಾ ಸಕ್ಸೆಷನ್ ಸರ್ಟಿಫಿಕೇಟ್ ಪಡೆಯಲೂ ನೀವು ವಕೀಲರ ಸಹಾಯ ಪಡೆದು ಅರ್ಜಿ ಹಾಕಬಹುದು. ನಿಮ್ಮ ದೊಡ್ಡಪ್ಪನ ಮೊದಲನೇ ದರ್ಜೆಯ ವಾರಸುದಾರರು, ಅಂದರೆ, ನಿಮ್ಮ ದೊಡ್ಡಮ್ಮ, ಅವರ ಮಕ್ಕಳು ಮತ್ತು ನಿಮ್ಮ ದೊಡ್ಡಪ್ಪನ ತಾಯಿ ಇಲ್ಲದೇ ಇರುವುದರಿಂದ, ನಿಮ್ಮ ದೊಡ್ಡಪ್ಪನ ಎರಡನೇ ದರ್ಜೆಯ ವಾರಸುದಾರರಾಗಿ ಅವರ ತಮ್ಮನ ಮಕ್ಕಳಿಗೆ ಆಸ್ತಿಯ ಮಾಲೀಕತ್ವ ಬರುತ್ತದೆ.

    ಟಿ.ವಿಯಲ್ಲಿ ಕಾಣಿಸೋ ಬಾಯಲ್ಲಿ ನೀರೂರಿಸುವ ಆಹಾರಗಳನ್ನು ಇನ್ಮುಂದೆ ಸ್ಕ್ರೀನ್‌ನಲ್ಲೇ ನೆಕ್ಕಿ ಟೇಸ್ಟ್‌ ಮಾಡ್ಬೋದು!

    ಮೊದಲ ರಾತ್ರಿ ಆಸೆಯಿಂದ ಪತ್ನಿಯ ಸಮೀಪ ಬಂದವನಿಗೆ ಕಾದಿತ್ತು ಶಾಕ್‌! ಆಕೆಯ ಹೊಟ್ಟೆಯಲ್ಲಿದ್ವು ಅವಳಿ ಮಕ್ಕಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts