More

    ಮದ್ವೆ ಯಾವಾಗ ಆಗುತ್ತೆ ಗುರೂಜಿ? ಹುಡುಗನಿಗೆ ಸರ್ಕಾರಿ ಕೆಲ್ಸ ಇರತ್ತಾ? ಹುಡುಗಿ ಸ್ಮಾರ್ಟ್​ ಇರ್ತಾಳಾ?

    ಬೆಂಗಳೂರು: ಟಿ.ವಿ ಚಾನೆಲ್​ನಲ್ಲಿ ಎಷ್ಟೇ ಧಾರಾವಾಹಿ, ಚಲನಚಿತ್ರಗಳು ಬರಲಿ, ಪತ್ರಿಕೆ, ವೆಬ್​ಸೈಟ್​ಗಳಲ್ಲಿ ಎಷ್ಟೇ ಸುದ್ದಿಗಳು ಇರಲಿ ವೀಕ್ಷಕರು, ಓದುಗರು ಮೊದಲು ದೃಷ್ಟಿ ಹರಿಸುವುದು ದಿನ-ವಾರ ಭವಿಷ್ಯದತ್ತ. ಜ್ಯೋತಿಷಿಗಳನ್ನು, ಜ್ಯೋತಿಷ್ಯಾಸ್ತ್ರವನ್ನು ಬೈಯುತ್ತಲೇ ಮೊದಲು ಅದನ್ನೇ ನೋಡುವುದು, ಓದುವುದು  ಗುಟ್ಟಾನೇನೂ ಉಳಿದಿಲ್ಲ.

    ಜನರ ಈ ಕುತೂಹಲವನ್ನು ಕಂಡು ಜ್ಯೋತಿಷಿ ಡಾಟ್​ ಕಾಂ ಒಂದು ಅಧ್ಯಯನ ನಡೆಸಿದೆ. ಅದೇನೆಂದರೆ ಜ್ಯೋತಿಷಿಗಳಲ್ಲಿ ಹೆಚ್ಚಾಗಿ ಕೇಳುವ ಪ್ರಶ್ನೆ ಯಾವುದು ಎಂದು? ಅದಕ್ಕೆ ಅವರು ಕಂಡುಕೊಂಡಿರುವ ಉತ್ತರ ಮದುವೆ! ನನ್ನ ಮದುವೆ ಯಾವಾಗ ಗುರೂಜಿ ಎಂದೋ ನನ್ನ ಮಗನ, ಮಗಳಿಗೆ ಯಾವಾಗ ಕಂಕಣ ಭಾಗ್ಯ ಕೂಡಿ ಬರುತ್ತದೆ ಗುರುಗಳೆ ಎಂಬ ಪ್ರಶ್ನೆಗಳು ಟಾಪ್​ 1ರಲ್ಲಿ ಇದೆಯಂತೆ.

    ಭಾರತದ ಜ್ಯೋತಿಷಿಗಳ ಬಳಿ ಅತಿ ಹೆಚ್ಚು ಕೇಳಲಾಗಿರುವ ಪ್ರಶ್ನೆ ಇದು ಎಂದಿದೆ ಸಮೀಕ್ಷೆ. ಮದುವೆ, ವೈವಾಹಿಕ ಜೀವನ, ತಾನು ಸುಖವಾಗಿ ಸಂಸಾರ ನಡೆಸುತ್ತೇನೋ ಇಲ್ಲವೋ, ತನಗೆ ಸಿಗುವವಳು/ಸಿಗುವವನು ಚೆನ್ನಾಗಿ ಇರುತ್ತಾನೋ ಇಲ್ಲವೋ, ನನ್ನ ವೈವಾಹಿಕ ಭವಿಷ್ಯ ಹೇಗಿದೆ? ಹುಡುಗ ಸರ್ಕಾರಿ ಕೆಲ್ಸದಲ್ಲಿ ಇರ್ತಾನಾ? ಹುಡುಗಿಗೆ ಜಾಬ್​ ಇರುತ್ತಾ…? ಒಟ್ಟಿನಲ್ಲಿ ಮದುವೆಗೆ ಸಂಬಂಧಿಸಿದ ಇಂಥ ಪ್ರಶ್ನೆಗಳೇ ಒಂದನೇ ಸ್ಥಾನ ಗಳಿಸಿದೆ ಎಂದು ಹೇಳಲಾಗಿದೆ. 20 ವರ್ಷದ ಯುವಕರಿಂದ ಹಿಡಿದು 50 ವರ್ಷ ದಾಟಿದವರೂ ಈ ಪ್ರಶ್ನೆ ಕೇಳುತ್ತಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

    ಇದನ್ನೂ ಓದಿ: ಡಿವೋರ್ಸ್​ ಕೊಟ್ಟಿಲ್ಲ ಎಂದು ತಾಯಿಯನ್ನೇ ಕೊಲೆ ಮಾಡಿದ ಬಾಲಕ!

    ನೇರವಾಗಿ ಜ್ಯೋತಿಷಿಗಳಿಗೆ ಕೇಳುವುದು ಮಾತ್ರವಲ್ಲದೇ ಆನ್​ಲೈನ್​ನಲ್ಲಿ ಬರುವ ಜ್ಯೋತಿಷದ ವೆಬ್​ಸೈಟ್​ಗಳಲ್ಲಿಯೂ ಹೆಚ್ಚಾಗಿ ಕೇಳುವ ಪ್ರಶ್ನೆಗಳಲ್ಲಿ ಮದುವೆಯೇ ಟಾಪ್​ 1ನಲ್ಲಿ ಇರುವುದಾಗಿ ಹೇಳಿದೆ. ಗೂಗಲ್​ನಲ್ಲಿ ಸರ್ಚ್​ ಮಾಡುವಾಗಿ ನಿಮ್ಮ ಪ್ರಶ್ನೆ ಕೇಳಿ ಎಂದು ಸಲಹೆ ಬಂದಾಗ, ಬಹುತೇಕ ಮಂದಿ ಕೇಳುವುದು ಇದೇ ಪ್ರಶ್ನೆ ಎಂದು ಸಮೀಕ್ಷೆ ಹೇಳಿದೆ.

    ಅಷ್ಟಕ್ಕೂ ಮದುವೆ ಕುರಿತು ಕೇಳುತ್ತಾರೆ ಎನ್ನುವುದು ಬಹುತೇಕ ಮಂದಿಗೆ ಅಚ್ಚರಿ ತರುವ ವಿಷಯ ಇರಲಾರದು. ಆದರೆ ನಿಜಕ್ಕೂ ಆಶ್ಚರ್ಯ ತರುವ ವಿಷಯ ಎಂದರೆ, ಜಾತಕ ಹೊಂದಾಣಿಕೆ ಮತ್ತು ಮದುವೆ ಮುಹೂರ್ತಕ್ಕೆ ಸಂಬಂಧಪಟ್ಟಂತೆ ಆನ್​ಲೈನ್​ ಮತ್ತು ಆಫ್​ಲೈನ್​ ವಹಿವಾಟು ವರ್ಷಕ್ಕೆ 1 ಬಿಲಿಯನ್ ಡಾಲರ್ ಮೀರಿದೆ ಎಂದಿದೆ ಈ ಸಮೀಕ್ಷೆ! ಭಾರತೀಯ ಲೆಕ್ಕಾಚಾರದಲ್ಲಿ ಹೇಳುವುದಾದರೆ ಸುಮಾರು 74 ಶತಕೋಟಿ ರೂಪಾಯಿ!

    ಕ್ಲಾಸ್​ರೂಂ ಒಳಗೇ ಗೆಳತಿಯ ಮದ್ವೆಯಾದ ಹೈಸ್ಕೂಲ್​​ ವಿದ್ಯಾರ್ಥಿ! ಮುಂದೇನಾಯ್ತು ನೋಡಿ…

    ಶಾಲೆಯಲ್ಲಿ ‘ಭೂತ’- ಬಡಿದುಕೊಳ್ಳುತ್ತಲೇ ಇದ್ದ ಬಾಗಿಲು: ಲಾಕ್​ ತೆಗೆದಾಗ ಏನಾಯ್ತು? ನೀವೇ ನೋಡಿ…

    ಡ್ರಗ್ಸ್​ ಪ್ರಕರಣ: ಭಾರ್ತಿ, ಕರಿಷ್ಮಾಗೆ ಬೇಲ್​- ಇಬ್ಬರು ತನಿಖಾಧಿಕಾರಿಗಳು ಸಸ್ಪೆಂಡ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts