ತೆರೆದೆದೆಯಲ್ಲಿ ವಿಮಾನವೇರಿದ ಯುವತಿ: ಷರ್ಟ್​ ನೀಡಿದ ಪೈಲಟ್​- ಲಲನೆಯ ರಂಪಾಟ!

pilot
Published on

ವಾಷಿಂಗ್ಟನ್​: ತನ್ನ ಎದೆಯನ್ನು ಪ್ರದರ್ಶಿಸುವ ದಿರಿಸು ಧರಿಸಿ ವಿಮಾನ ಏರಿದ ಯುವತಿಯೊಬ್ಬಳಿಗೆ ವಿಮಾನದ ಪೈಲಟ್​ ತನ್ನ ಟೀ-ಷರ್ಟ್​ ನೀಡಿರುವ ಘಟನೆ ನಡೆದಿದೆ.

ಸೌತ್​ವೆಸ್ಟ್​ ಏರ್​ಲೈನ್ಸ್​ಗೆ ಕೇಯ್ಲಾ ಯುಬ್ಯಾಂಕ್ಸ್ ಎಂಬಾಕೆ ಹತ್ತಿದ್ದಳು. ಆದರೆ ಆಕೆ ತೊಟ್ಟಿರುವ ಗೌನ್​ನಲ್ಲಿ ಆಕೆಯ ಮುಕ್ಕಾಲು ದೇಹ ದರ್ಶನವಾಗುತ್ತಿತ್ತು. ಇದನ್ನು ಗಮನಿಸಿದ ಕ್ಯಾಪ್ಟನ್​ ಇದು ತುಂಬಾ ಅಶ್ಲೀಲವಾಗಿದೆ ಎಂದು ಹೇಳಿದ್ದಾರೆ.

ಇದರಿಂದ ಸಿಡಿಮಿಡಿಗೊಂಡ ಯುವತಿ, ನನ್ನ ಬಟ್ಟೆಗೂ ವಿಮಾನ ಪ್ರಯಾಣಕ್ಕೂ ಏನು ಸಂಬಂಧ? ಇದು ನನ್ನ ಇಷ್ಟ. ನಾನು ಹೇಗೆ ಬೇಕಾದರೂ ಡ್ರೆಸ್​ ಮಾಡಿಕೊಳ್ಳುತ್ತೇನೆ ಎಂದಿದ್ದಾಳೆ. ಆದರೆ ಸಿಬ್ಬಂದಿ ಆಕೆಯನ್ನು ಇದೇ ಡ್ರೆಸ್​ನಲ್ಲಿ ಮೇಲೆ ಏರಲು ಬಿಟ್ಟಿಲ್ಲ. ತನ್ನ ಬಳಿ ಬೇರೆ ಡ್ರೆಸ್​ ಇಲ್ಲ ಎಂದು ಯುವತಿ ಹೇಳಿದ ಕಾರಣ, ಆಕೆಗೆ ಪೈಲಟ್​ ಡ್ರೆಸ್​ ನೀಡಿದ್ದಾರೆ.

ಇದರಿಂದ ತೀವ್ರ ಸಿಟ್ಟುಕೊಂಡಿರುವ ಕೇಯ್ಲಾ ಯುಬ್ಯಾಂಕ್ಸ್ ಕ್ಯಾಪ್ಟನ್​, ಪೈಲಟ್​ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದಿದ್ದಾಳೆ. ತನ್ನ ಮೇಲೆ ದೌರ್ಜನ್ಯ ಎಸಗಲಾಗಿದೆ. ನನಗೆ ಪೈಲಟ್​ ಷರ್ಟ್​ ತೊಟ್ಟು ಹೋಗುವಂತೆ ಮಾಡಲಾಗಿದೆ. ಇದು ತೀರಾ ಅನ್ಯಾಯವಾಗಿದೆ ಎಂದು ಬರೆದುಕೊಂಡಿದ್ದಾಳೆ.

ಒಬ್ಬ ಮಹಿಳೆಯ ಮೇಲೆ ಈ ರೀತಿ ದೌರ್ಜನ್ಯ ಎಸಗಲು ಹೇಗೆ ಸಾಧ್ಯ? ನನ್ನಿಷ್ಟದ ಬಟ್ಟೆ ತೊಟ್ಟರೆ ಯಾರಿಗೆ ಏನು ಸಮಸ್ಯೆ? ಇದರಲ್ಲಿ ಅಶ್ಲೀಲ ಎನ್ನುವುದು ಏನಿದೆ ಎಂದೆಲ್ಲಾ ಸರಣಿ ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ್ದಾಳೆ. ಈಕೆಯ ಪರವಾಗಿ ಹಲವಾರು ಮಂದಿ ಕಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net