8ನೇ ದಿನವೂ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ- ಇಂದಿನ ದರ ಎಷ್ಟಿದೆ ನೋಡಿ...

Petrol
Petrol Bunk
Published on

ನವದೆಹಲಿ: ಇಂದು ಪುನಃ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಏರಿಕೆಯಾಗಿದೆ. ಈ ಮೂಲಕ ಸತತ 8ನೇ ದಿನವೂ ಇವುಗಳಲ್ಲಿ ಏರಿಕೆ ಕಂಡಿದೆ.

ಇಂದು ಪೆಟ್ರೋಲ್ ಪ್ರತಿ ಲೀಟರ್‌ಗೆ 30 ಪೈಸೆ ಮತ್ತು ಡೀಸೆಲ್ 35 ಪೈಸೆಯಷ್ಟು ಹೆಚ್ಚಳವಾಗಿದೆ.

ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರಿಗೆ 89.29 ರೂ., ಡೀಸೆಲ್ ಲೀಟರ್‌ಗೆ 79.70 ರೂ.ಗೆ ಏರಿಕೆಯಾಗಿದೆ. ಈ ದರ ಬೇರೆ ಬೇರೆ ರಾಜ್ಯಗಳಲ್ಲಿ ಸ್ವಲ್ಪ ಹೆಚ್ಚೂ ಕಡಿಮೆ ಇರುತ್ತದೆ. ಆಯಾ ರಾಜ್ಯಗಳ ವ್ಯಾಟ್ ತೆರಿಗೆ, ಸಾಗಣೆ ವೆಚ್ಚ ಆಧರಿಸಿ ತೈಲ ದರವನ್ನು ನಿಗದಿ ಮಾಡಲಾಗುತ್ತದೆ.

ಇಂದಿನ ಬೆಲೆ ಈ ರೀತಿ ಇದೆ:

ದೆಹಲಿ: ಪೆಟ್ರೋಲ್‌ 88.99; ಡೀಸೆಲ್‌ 79.35

ಕೋಲ್ಕತಾ: ಪೆಟ್ರೋಲ್‌ 90.25; ಡೀಸೆಲ್‌ 82.94

ಮುಂಬೈ: ಪೆಟ್ರೋಲ್‌ 95.46; ಡೀಸೆಲ್‌ 86.34

ಚೆನ್ನೈ: ಪೆಟ್ರೋಲ್‌ 91.19; ಡೀಸೆಲ್‌ 84.44

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net