ಕರ್ನಾಟಕ ಪೊಲೀಸರ ವಿರುದ್ಧವೇ ಫೇಕ್‌ ವಿಡಿಯೋ! ದನಿ ಕೊಟ್ಟು ಅರೆಸ್ಟ್‌ ಆದ ಕಾಂಗ್ರೆಸ್‌ ಕಾರ್ಯಕರ್ತೆ

fake video
Published on

 ಬೆಂಗಳೂರು: ವ್ಯಕ್ತಿಯೊಬ್ಬರ ಮೇಲೆ ಅಮಾನುಷವಾಗಿ ಪೊಲೀಸರು ಹಲ್ಲೆ ನಡೆಸುತ್ತಿರುವ ವಿಡಿಯೋ ಒಂದಕ್ಕೆ ಕರ್ನಾಟಕ ಪೊಲೀಸರ ಕೃತ್ಯ ಎಂಬಂತೆ ಬಿಂಬಿಸಿ ದನಿ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದ ಕಾಂಗ್ರೆಸ್‌ ಕಾರ್ಯಕರ್ತೆ ಪದ್ಮಾ ಹರೀಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ವ್ಯಕ್ತಿಯೊಬ್ಬನನ್ನು ಹಿಗ್ಗಾಮುಗ್ಗ ಥಳಿಸುತ್ತಿರುವ ದೃಶ್ಯ ಇದಾಗಿದೆ. ಮನಸೋ ಇಚ್ಛೆ ಲಾಠಿಯಿಂದ ಪೊಲೀಸರು ವ್ಯಕ್ತಿಯೊಬ್ಬನಿಗೆ ಥಳಿಸುತ್ತಿದ್ದು, ಇದರ ವಿಡಿಯೋ ವೈರಲ್‌ ಆಗಿದೆ. ಆದರೆ ಈ ರೀತಿ ನಡೆದಿರುವುದು ನಿಜವೇ. ಆದರೆ ಈ ವಿಡಿಯೋ ಕರ್ನಾಟಕದಲ್ಲಿ ಆಗಿದ್ದು, ಕರ್ನಾಟಕದ ಪೊಲೀಸರು ಇಂಥ ಕೃತ್ಯ ಎಸಗಿದ್ದಾರೆ ಎಂದು ಕ್ಯಾಪ್ಷನ್‌ ನೀಡಿ ವೈರಲ್‌ ಆಗುತ್ತಿದೆ. ಅದನ್ನೇ ಸಹಸ್ರಾರು ಮಂದಿ ತಮ್ಮ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡು ಕರ್ನಾಟಕ ಪೊಲೀಸರನ್ನು ನಿಂದಿಸುತ್ತಿದ್ದಾರೆ.

ಇದರ ರೂವಾರಿ ಯಾರು ಎಂದು ಪೊಲೀಸರು ಬೆನ್ನತ್ತಿ ಹೋದಾಗ ಕಂಡುಬಂದದ್ದು ಪದ್ಮಾ ಹರೀಶ್‌. ಕಾಂಗ್ರೆಸ್‌ ಕಾರ್ಯಕರ್ತೆಯಾಗಿರುವ ಇವರಿಗೆ ಬೆಳಗ್ಗೆ ನೋಟಿಸ್‌ ನೀಡಲಾಗಿತ್ತು. ಇದೀಗ ಅವರನ್ನು ಬಂಧಿಸಲಾಗಿದೆ. ಬೆಂಗಳೂರಿನ ದಕ್ಷಿಣ ಸಿಇಎನ್ ಠಾಣೆ ಪೊಲೀಸರು ಪದ್ಮಾ ಅವರನ್ನು ಬಂಧಿಸಿದ್ದಾರೆ.

ಈ ವೇಳೆಗೆ ತಾವೇ ಇದನ್ನು ಮಾಡಿರುವುದಾಗಿ ಪದ್ಮಾ ತಪ್ಪೊಪ್ಪಿಕೊಂಡಿದ್ದಾರೆ. ಇವರ ಮೂಲಕವೇ ಈ ವಿಡಿಯೋ ಹೋಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲು ಇವರ ಮೊಬೈಲ್ ಅನ್ನು ಪೊಲೀಸರು ಪರಿಶೀಲಿಸಿದ್ದರು. ಸುದೀರ್ಘ ವಿಚಾರಣೆ ಬಳಿಕ ತಮ್ಮ ತಪ್ಪನ್ನು ಪದ್ಮಾ ಒಪ್ಪಿಕೊಂಡಿದ್ದಾರೆ. ಈ ರೀತಿ ಮಾಡುವುದರ ಹಿಂದಿನ ಕಾರಣವನ್ನು ಇದೀಗ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net