ಇವ್ರು ಬಾಡಿಗೆ ಕೇಳಿ ಬಂದಿದ್ದಾರೆ... ಕೊಡಬಹುದಾ? ಪೊಲೀಸ್ ಆಯುಕ್ತದಲ್ಲಿ ಟ್ವೀಟ್‌ ಮೂಲಕ ಪ್ರಶ್ನಿಸಿದ ಬೆಂಗಳೂರಿಗ

rent
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಬಾಡಿಗೆ ಮನೆ ಕೇಳಿ ಬಂದವರನ್ನು ನಂಬುವುದು ಕಷ್ಟ ಎನ್ನುವಂಥ ಸ್ಥಿತಿ ಈಗ ನಿರ್ಮಾಣವಾಗಿದೆ. ಅದರಲ್ಲಿಯೂ ಬೆಂಗಳೂರಿಗರಿಗಂತೂ ಇದು ದೊಡ್ಡ ಸವಾಲೇ. ಯಾರನ್ನು ನಂಬಬೇಕು, ಯಾರನ್ನು ಬಿಡಬೇಕು ಎಂದೇ ಹೇಳುವುದು ಕಷ್ಟ. ಇದೇ ಕಾರಣಕ್ಕೆ ಬೆಂಗಳೂರಿಗರೊಬ್ಬರು ಬಾಡಿಗೆ ಮನೆ ಕೇಳಿಕೊಂಡು ಬಂದಿದ್ದ ವ್ಯಕ್ತಿಗೆ ಬಾಡಿಗೆ ನೀಡಲೋ ಬೇಡವೋ ಎಂದು ನೇರವಾಗಿ ನಗರ ಪೊಲೀಸ್ ಆಯುಕ್ತರಿಗೇ ಕೇಳಿದ್ದಾರೆ.

ಇತ್ತೀಚೆಗೆ ಓರ್ವ ಬಾಡಿಗೆದಾರ ತನ್ನ ಮನೆಗೆ ಬಾಡಿಗೆಗೆ ಕೇಳಿಕೊಂಡು ಬಂದಿದ್ದರು. ನಾನು ಅವರ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಿದ್ದೇನೆ. ಅದರಲ್ಲಿ ಅವರ ಹಳ್ಳಿಯ ಹೆಸರನ್ನು ದಂಡುಪಾಳ್ಯ ಎಂದು ನಮೂದಿಸಲಾಗಿದೆ. ಈ ಹಳ್ಳಿಯ ಜನರು ಕ್ರೂರವಾಗಿ ಕೊಲೆ ಮಾಡುತ್ತಾರೆ. ಈ ಕುರಿತು ನಾನು ಚಲನಚಿತ್ರಗಳಲ್ಲಿ ನೋಡಿದ್ದೇನೆ. ಈಗ ಅವರಿಗೆ ಮನೆ ಬಾಡಿಗೆಗೆ ಕೊಟ್ಟರೆ ಸರಿಯೇ? ದಯವಿಟ್ಟು ನನಗೆ ನೀವು ಸಹಾಯ ಮಾಡಬಹುದೆ ಎಂದು ಅವರು ಪ್ರಶ್ನಿಸಿದ್ದಾರೆ.

ಕೃಷಮೂರ್ತಿ ಎಂಬುವವರು ಈ ಮಾಹಿತಿಯನ್ನು ಕೇಳಿದ್ದಾರೆ. ಅದಕ್ಕೆ ಕಾರಣ, ಬಾಡಿಗೆ ಕೇಳಿಕೊಂಡು ಬಂದಿರುವ ವ್ಯಕ್ತಿಯ ಆಧಾರ್‌ ಕಾರ್ಡಿನಲ್ಲಿ ದಂಡುಪಾಳ್ಯದ ನಿವಾಸಿ ಎಂದು ಇರುವುದು! ದಂಡುಪಾಳ್ಯ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ‘ದಂಡುಪಾಳ್ಯ ಗ್ಯಾಂಗ್‌’ ಎಂದೇ ಕುಖ್ಯಾತಿ ಪಡೆದಿರುವ ದರೋಡೆಕೋರರು. ಇದೇ ಕಾರಣಕ್ಕೆ ಮಾಲೀಕರು ಸಂದಿಗ್ಧ ಸ್ಥಿತಿಗೆ ಬಂದಿದ್ದು ಆಯುಕ್ತರಿಗೆ ಟ್ವೀಟ್‌ ಮೂಲಕ ಮಾಹಿತಿ ಕೋರಿದ್ದಾರೆ.

ಈ ಟ್ವೀಟ್​ಗೆ ನಗರ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅವರೇ ನೇರವಾಗಿ ಯಾವುದೇ ಮಾಹಿತಿ ನೀಡಲಿಲ್ಲ. ಬದಲಿಗೆ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ. ನಿಮಗೆ ಅವರು ಸಲಹೆ ನೀಡುತ್ತಾರೆ ಎಂದಷ್ಟೇ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net