ನನ್ನ ತಂದೆ ಅವರ ಸ್ವಯಾರ್ಜಿತ ಆಸ್ತಿಯನ್ನು ನನಗೆ ಮತ್ತು ನನ್ನ ತಮ್ಮನಿಗೆ ಮಾತ್ರ ವಿಲ್ ಮಾಡಲು ಸಿದ್ಧರಿದ್ದಾರೆ. ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅವರು ಬಡವರಾಗಿದ್ದರೂ ಅವರಿಗೇನೂ ಕೊಡಬೇಕಿಲ್ಲ ಎಂದು ನನ್ನ ತಮ್ಮ ಹೇಳುತ್ತಿದ್ದಾನೆ. ಮುಂದೆ ನನ್ನ ಅಕ್ಕಂದಿರು ಭಾಗಕ್ಕೆ ಕೇಸು ಹಾಕಬಹುದೇ?.ಉತ್ತರ: ನಿಮ್ಮ ತಂದೆ ಸ್ವಯಾರ್ಜಿತ ಆಸ್ತಿಯನ್ನು ಅವರ ಇಷ್ಟದಂತೆ ವಿಲ್ ಮಾಡಬಹುದು. ವಿಲ್ ಮಾಡುವಾಗ ಏಕೆ ಹೆಣ್ಣುಮಕ್ಕಳಿಗೆ ಏನೂ ಕೊಡುತ್ತಿಲ್ಲ , ಗಂಡು ಮಕ್ಕಳಿಗೇ ಎಲ್ಲ ಆಸ್ತಿ ಕೊಡುತ್ತಿದ್ದಾರೆ ಎನ್ನುವುದನ್ನು ಬರೆಸಿರಬೇಕು..ಸಾಧ್ಯವಾದರೆ ನೋಂದಣಿ ಮಾಡಿಸಿದರೆ ಒಳ್ಳೆಯದು. ವಿಲ್ ಬೇರೆಯವರ ಒತ್ತಡ ಒತ್ತಾಯದಿಂದ ಮೋಸದಿಂದ ಆಗಿರದೇ ಇದ್ದರೆ, ಸ್ವ ಇಚ್ಛೆಯಿಂದ ಆಗಿದ್ದರೆ ಹೆದರಬೇಕಿಲ್ಲ. ಅಕ್ಕಂದಿರು ಕೇಸು ಹಾಕಿದರೂ ನಿಲ್ಲುವುದಿಲ್ಲ..ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್ ಕ್ಲಿಕ್ಕಿಸಿ:.https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/.https://www.vijayavani.net/s-nyayadevate-patni-anaitika-sambandha/.https://www.vijayavani.net/s-nyayadevate-mba-odiyoo/