ನಮ್ಮ ತಂದೆಯ ಸ್ವಯಾರ್ಜಿತ ಆಸ್ತಿ ಮಗಳಿಗೆ ಕೊಡಲು ಇಷ್ಟವಿಲ್ಲ, ಮಗನೊಬ್ಬನೇ ಪಡೆಯಬಹುದೆ?

nyayadevate
Published on
ನಮ್ಮ ತಂದೆ ತಾಯಿಗೆ ನಾನು  ಒಬ್ಬ ಮಗ ಹಾಗೂ ಒಬ್ಬಳು ಮಗಳು. ನನ್ನ ತಂದೆಯ ಆಸ್ತಿಯನ್ನು ನನ್ನ ತಂದೆಯ ಒಪ್ಪಿಗೆಯ ಮೇರೆಗೆ ಸಂಪೂರ್ಣವಾಗಿ ನನ್ನ ಹೆಸರಿಗೆ ವರ್ಗಾಯಿಸಬಹುದೇ?

ಉತ್ತರ: ನಿಮ್ಮ ತಂದೆ ತನ್ನ ಸ್ವಯಾರ್ಜಿತ ಆಸ್ತಿಯನ್ನು ತನ್ನ ಇಷ್ಟಬಂದವರಿಗೆ , ಇಷ್ಟ ಬಂದರೀತಿಯಲ್ಲಿ ವಿಲೇವಾರಿ ಮಾಡಬಹುದು. ಯಾರೂ ಪ್ರಶ್ನೆ ಮಾಡುವಂತಿಲ್ಲ. ಆದರೆ, ಅವರು , ಯಾರಿಂದಲಾಗಲೀ , ಯಾವುದೇ ವಿಧದಲ್ಲಿ ಆಗಲೀ ಒತ್ತಡ, ಒತ್ತಾಯ ಇಲ್ಲದೇ ಸ್ವ ಇಚ್ಚೆಯಿಂದ ಮಾಡಬೇಕು ಅಷ್ಟೇ.

ನಿಮ್ಮ ತಂದೆಗೆ ಒಪ್ಪಿಗೆ ಇದ್ದರೆ, ನಿಮ್ಮ ಹೆಸರಿಗೆ ಅವರು ತನ್ನ ಆಸ್ತಿಯನ್ನು ಕ್ರಯ ಅಥವಾ ದಾನ ಅಥವಾ ವಿಲ್‌ ಮಾಡಬಹುದು. ನೀವು ಯಾವುದೇ ರೀತಿಯಲ್ಲಿ ವರ್ಗಾವಣೆ ಮಾಡಿಸಿಕೊಂಡರೂ, ದಾಖಲೆಯನ್ನು ನೋಂದಾಯಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net