ಮಕ್ಕಳ ಮೇಲೆ ಅಸಹ್ಯ ಹುಟ್ಟಿದೆ; ನನ್ನ ಪಾಲಿನ ಪಿತ್ರಾರ್ಜಿತ ಆಸ್ತಿಯನ್ನು ಯಾರಿಗೂ ಕೊಡದೇ ಮಾರಬಹುದೆ?

nyayadevate
Published on: 
ಪ್ರಶ್ನೆ: ನನ್ನ ವಯಸ್ಸು 80 ನನ್ನ ಹೆಂಡತಿಯ ವಯಸ್ಸು 70 ನನಗೆ 6 ಜನ ಮಕ್ಕಳು 4 ಗಂಡು ಮಕ್ಕಳು 2 ಹೆಣ್ಣು ಮಕ್ಕಳು ನಮ್ಮನ್ನು ಯಾವ ಮಕ್ಕಳು ನೋಡಿಕೊಳ್ಳುತ್ತಿಲ್ಲ. ಅವರ ಮೇಲೆ ಅಸಹ್ಯ ಹುಟ್ಟಿದೆ. ನಮ್ಮ ಜೀವನ ಆಧಾರಕ್ಕೆ ನಾವು ಪಿತ್ರಾರ್ಜಿತ ಆಸ್ತಿಯನ್ನು ಮಾರಬಹುದೇ? ಮಾರಬಹುದಾದರೆ ನಾವು ಏನು ಮಾಡಬೇಕು ಅಥವಾ ಆ ಜಮೀನಿನ ಮೇಲೆ ಸಾಲ ತಗೆದುಕೊಳ್ಳಬಹುದೆ ?

ಉತ್ತರ: ಪಿತ್ರಾರ್ಜಿತ ಆಸ್ತಿಯಲ್ಲಿ ನಿಮ್ಮಭಾಗವನ್ನು ನೀವು ಮಾರಬಹುದು. ಮೊದಲಿಗೆ ಆಸ್ತಿ ನಿಮ್ಮ ಪಿತ್ರಾರ್ಜಿತ ಆಸ್ತಿಯೇ ಅಥವಾ ನಿಮ್ಮ ಪ್ರತ್ಯೇಕ ಆಸ್ತಿಯೇ ಎನ್ನುವುದನ್ನು ದಾಖಲೆಗಳ ಪರಿಶೀಲನೆಯ ಮೂಲಕ ಖಚಿತ ಪಡಿಸಿಕೊಳ್ಳಿ.

ನಿಮ್ಮ ತಂದೆಯ ಮರಣಾ ನಂತರ ನಿಮ್ಮ ತಂದೆಯ ಸ್ವಯಾರ್ಜಿತ ಆಸ್ತಿ ನಿಮಗೆ ಬಂದಿದ್ದರೆ, ಅದು ನಿಮ್ಮ ಪ್ರತ್ಯೇಕ ಆಸ್ತಿ ಆಗುತ್ತದೆ. ಅದನ್ನು ವಿಲೇವಾರಿ ಮಾಡುವ ಸಂಪೂರ್ಣ ಹಕ್ಕು ನಿಮಗೆ ಇರುತ್ತದೆ.

ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು ಕ್ಲಿಕ್ಕಿಸಿ. https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/ ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ