ಮರುಮದುವೆ ಆದ ವಿಚ್ಛೇದಿತೆ ಮೊದಲ ಪತಿಯಿಂದ ಜೀವನಾಂಶ ಕೇಳಬಹುದೇ?

nyayadevate
Published on

ಪ್ರಶ್ನೆ: ಮೇಡಂ ನಾನು ಕಾನೂನಿನ ಪ್ರಕಾರ ನನ್ನ ಹೆಂಡತಿಯಿಂದ ಬಿಡುಗಡೆ ಹೊಂದಿದ್ದೇನೆ. ಆಕೆಗೆ ಲೈಫ್ ಟೈಮ್ ಸೆಟಲ್ಮೆಂಟ್ ಮಾಡಿದ್ದೇನೆ. ಬಿಡುಗಡೆ ಆಗಿ ಒಂದೂವರೆ ವರ್ಷ ಆಯಿತು. ಆಕೆ ಇನ್ನೊಂದು ಮದುವೆ ಆಗಿದ್ದಾಳೆ. ನಾನು ಇನ್ನೊಂದು ವಿವಾಹ ಆಗಿಲ್ಲ. ನಾನು ಸರ್ಕಾರೀ ನೌಕರಿಯಲ್ಲಿ ಇದ್ದೇನೆ. ಆದರೆ ಆಕೆ ಮತ್ತೇನಾದರೂ ನನ್ನಿಂದ ಅಪೇಕ್ಷೆ ಪಡಬಹುದೇ ತಿಳಿಸಿ.

ಉತ್ತರ: ನೀವು ಹೆದರಬೇಕಾಗಿಲ್ಲ. ಒಮ್ಮೆ ವಿಚ್ಛೇದನ ಪಡೆದ ನಂತರ ವಿಚ್ಛೇದಿತ ಪತ್ನಿ ಮರು ಮದುವೆ ಆಗುವವರೆಗೆ ಅಥವಾ ತನ್ನನ್ನು ತಾನು ಪೋಷಿಸಿಕೊಳ್ಳಲು ಸಾಮರ್ಥ್ಯ ಇಲ್ಲದಿದ್ದಾಗ ಮಾತ್ರ ವಿಚ್ಛೇದಿತ ಪತಿಯ ವಿರುದ್ಧ ಜೀವನಾಂಶ ಕೇಳಿ ಅರ್ಜಿ ಸಲ್ಲಿಸಬಹುದು.

ನಿಮ್ಮ ಪತ್ನಿ ವಿಚ್ಛೇದನದ ಸಮಯದಲ್ಲಿ ನಿಮ್ಮಿಂದ ಜೀವನಾಂಶ ಪಡೆದಿರುವುದರಿಂದ ಆಕೆ ಮತ್ತೆ ನಿಮ್ಮನ್ನು ಏನೂ ಕೇಳುವಂತಿಲ್ಲ. ಮೇಲಾಗಿ ಆಕೆ ಈಗ ಮರು ಮದುವೆಯೂ ಮಾಡಿಕೊಂಡಿದ್ದಾರೆ. ಆಕೆ ಏನಾದರೂ ಕೇಳುವುದಾದರೆ, ಮರು ಮದುವೆ ಆಗಿರುವ ಪತಿಯನ್ನು ಕೇಳಬೇಕೇ ವಿನಃ , ವಿಚ್ಛೇದಿತ ಪತಿಯಾದ ನಿಮ್ಮನ್ನು ಕೇಳುವಂತಿಲ್ಲ. ನೀವು ಯಾವುದೇ ಚಿಂತೆಯನ್ನೂ ಮಾಡಬೇಡಿ.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್​.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net