ಶೌಚಗೃಹದ ಫ್ಲಷ್‌ ರಿಪೇರಿ ಮಾಡಲು ಬಂದವರಿಗೆ ಕಾದಿತ್ತು ಶಾಕ್‌- ಟ್ಯಾಂಕ್‌ನಲ್ಲಿತ್ತು ಮಗುವಿನ ಶವ!

baby1
Published on

ತಂಜಾವೂರು (ತಮಿಳುನಾಡು): ಶೌಚಗೃಹದ ಫ್ಲಷ್‌ನಲ್ಲಿ ನವಜಾತ ಶಿಶುವಿನ ಮೃತದೇಹ ಸಿಕ್ಕಿರುವ ಭಯಾನಕ ಘಟನೆ ತಮಿಳುನಾಡಿನ ತಂಜಾವೂರಿನ ಆಸ್ಪತ್ರೆಯೊಂದರಲ್ಲಿ ನಡೆದಿದೆ.

ಇಲ್ಲಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ (ಟಿಎಂಸಿಹೆಚ್) ಫ್ಲಷ್‌ ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ದೂರು ಬಂದಿತ್ತು. ಇದನ್ನು ಆಧರಿಸಿ ರಿಪೇರಿ ಮಾಡಲು ಹೋಗಿದ್ದಾರೆ ಸಿಬ್ಬಂದಿ. ಆಗ ಫ್ಲಷ್‌ನ ಟ್ಯಾಂಕ್‌ ಬಾಗಿಲು ತೆರೆದಾಗ ಅವರಿಗೆ ಶಾಕ್‌ ಆಗಿದೆ. ಏಕೆಂದರೆ ಅದರಲ್ಲಿ ಆಗತಾನೇ ಹುಟ್ಟಿದ ಮಗುವಿನ ಶವವೊಂದು ಸಿಕ್ಕಿದೆ!

ತೀವ್ರ ನಿಗಾ ಘಟಕದ ಶೌಚಗೃಹದಲ್ಲಿ ಈ ಘಟನೆ ನಡೆದಿದೆ. ಕೂಡಲೇ ವೈದ್ಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಶವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮಗು ಫ್ಲಷ್‌ ಟ್ಯಾಂಕ್‍ಗೆ ಬೀಳುವ ಮುನ್ನವೇ ಸತ್ತುಹೋಗಿದೆಯೋ ಅಥವಾ ನೀರಿನಲ್ಲಿ ಮುಳುಗಿ ಸಾವು ಸಂಭವಿಸಿದೆಯೋ ಎಂದು ತಿಳಿದುಕೊಳ್ಳಲಾಗುತ್ತಿದೆ.

ಅಲ್ಲಿಯೇ ಇರುವ ಸಿಸಿಟಿವಿಯಲ್ಲಿ ಎಲ್ಲಾ ದೃಶ್ಯ ಸೆರೆಯಾಗಿದ್ದು, ಅದರ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net