

ಮುಂಬೈ: ಮುಂಬೈನ ಫಿಲ್ಮ್ ಸಿಟಿಯಲ್ಲಿರುವ ಬಿಗ್ ಬಾಸ್ ಮನೆಗೆ ಬೆಂಕಿ ಹೊತ್ತಿಕೊಂಡು ಧಗಧಗ ಉರಿಯುತ್ತಿದೆ. ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನಗಳನ್ನು ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.
ಈ ಮನೆಯನ್ನು ಹಿಂದಿಯ ಬಿಗ್‌ಬಾಸ್ ಸೀಜನ್ 15ಗೆಂದು ಅಣಿಗೊಳಿಸಲಾಗಿತ್ತು. ಆದರೆ ಕೆಲ ದಿನಗಳ ಹಿಂದಷ್ಟೇ ಈ ಸೀಸನ್ ಫಿನಾಲೆ ಮುಗಿದಿದೆ. ಈ ಹಿನ್ನೆಲೆಯಲ್ಲಿ ಬೆಂಕಿಯಿಂದ ಯಾವುದೇ ಪ್ರಾಣಾಪಾಯಾಗಲಿಲ್ಲ. ಆದರೆ ಬೆಂಕಿ ಏಕೆ ಹೊತ್ತಿಕೊಂಡಿದೆ ಎಂಬ ಬಗ್ಗೆ ಇದುವರೆಗೆ ತಿಳಿದುಬಂದಿಲ್ಲ.
ನಟ ಸಲ್ಮಾನ್ ಖಾನ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು, ಜನವರಿ 30ರಂದು ಸೀಜನ್ 15 ಕೊನೆಗೊಂಡಿತ್ತು. ನಟಿ ತೇಜಸ್ವಿ ಪ್ರಕಾಶ್ ವಿಜೇತೆಯಾಗಿ ಹೊರಹೊಮ್ಮಿದ್ದರು. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.