13ನೇ ವರ್ಷವೂ ಮುಖೇಶ್​ ಅಂಬಾನಿ ನಂ.​1 ಶ್ರೀಮಂತ: ಟಾಪ್​ 10ನಲ್ಲಿ ಯಾರಿದ್ದಾರೆ? ಇಲ್ಲಿದೆ ವಿವರ

mukhesh ambani
Published on

ನವದೆಹಲಿ: ಫೋರ್ಬ್​ ಇಂಡಿಯಾ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಟಾಪ್​ 1 ಸ್ಥಾನದಲ್ಲಿದ್ದಾರೆ. ಸತತ 13ನೇ ವರ್ಷ ಅಗ್ರಸ್ಥಾನದಲ್ಲಿ ಇರುವ ಶ್ರೀಮಂತ ಎಂಬ ಹೆಗ್ಗಳಿಕೆಯನ್ನು ಇವರು ಪಡೆದುಕೊಂಡಿದ್ದಾರೆ.

ಕಳೆದ ವರ್ಷಕ್ಕಿಂತ ಈ ವರ್ಷ ಮುಖೇಶ್ ಅವರ ಆಸ್ತಿ ಮೌಲ್ಯ ಶೇ. 14ರಷ್ಟು ಏರಿಕೆಯಾಗಿದೆ. 517. 5 ಬಿಲಿಯನ್ ಡಾಲರ್​ಗೆ ಅವರ ಆಸ್ತಿಯ ಮೌಲ್ಯ ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅವರು ತಮ್ಮ ಆಸ್ತಿಗೆ 37.3 ಬಿಲಿಯನ್ ಹೆಚ್ಚುವರಿ ಸೇರಿಸಿದ್ದಾರೆ. ಈ ಮೂಲಕ ಒಟ್ಟೂ ಆಸ್ತಿಯ ಮೌಲ್ಯ ಶೇ. 73 ರಷ್ಟು ಏರಿಕೆಯಾಗಿದೆ ಎಂದು ಫೋರ್ಬ್ಸ್ ವಿವರಣೆ ನೀಡಿದೆ.

ಇನ್ನು ಫೋರ್ಬ್​ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಎರಡನೆಯ ಸ್ಥಾನವನ್ನು ಉದ್ಯಮಿ ಗೌತಮ್ ಅದಾನಿ ಪಡೆದುಕೊಂಡಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ 25.2 ಬಿಲಿಯನ್ ಡಾಲರ್​ಗೆ ಏರಿಕೆಯಾಗಿದೆ.

ಮೂರನೆಯ ಸ್ಥಾನದಲ್ಲಿ ಇರುವವರು ಟೆಕ್ ಉದ್ಯಮಿ ಶಿವ ನಾಡರ್. ಕಳೆದ ಜುಲೈನಲ್ಲಿ ಎಚ್‌ಸಿಎಲ್ ಟೆಕ್ನಾಲಜೀಸ್‌ನ ಅಧ್ಯಕ್ಷ ಹುದ್ದೆಯನ್ನು ತಮ್ಮ ಮಗಳು ರೋಶ್ನಿ ನಾಡರ್ ಮಲ್ಹೋತ್ರಾ ಅವರಿಗೆ ವಹಿಸಿದ್ದ ನಾಡರ್, 20.4 ಬಿಲಿಯನ್ ಆಸ್ತಿ ಹೊಂದಿದ್ದಾರೆ.

ಅವಿನ್ಯೂ ಸೂಪರ್ ಮಾರ್ಟ್ಸ್ ನ ರಾಧಾಕೃಷ್ಣನ್ ದಾಮಾನಿ 15.4 ಬಿಲಿಯನ್ ಡಾಲರ್ ಆಸ್ತಿ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನ, ಹಿಂದೂಜಾ ಸಹೋದರರು 12. 8 ಬಿಲಿಯನ್ ಡಾಲರ್​ನೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ಸೈಕ್ರಾಸ್ ಪೂನಾವಾಲಾ 11. 5 ಬಿಲಿಯನ್ ಡಾಲರ್​ನೊಂದಿಗೆ 6ನೇ ಸ್ಥಾನ, ಪಾಲೊಂಜಿ ಮಿಸ್ತ್ರೀ, ಉದಯ್ ಕೊಟಕು, ಗೋದ್ರೆಜ್ ಕುಟುಂಬ ಮತ್ತು ಲಕ್ಷ್ಮಿ ಮಿತ್ತಲ್ ಕ್ರಮವಾಗಿ 7,8,9 ಮತ್ತು 10ನೇ ಸ್ಥಾನದಲ್ಲಿದ್ದಾರೆ ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net