ಪೃಷ್ಠಕ್ಕೆ 13 ಕೋಟಿ ರೂ. ವಿಮೆ ಮಾಡಿಸಿದ ‘ಮಿಸ್‌ ಬಮ್‌ಬಮ್‌’: ಈ ಅಂಗದ ಮೇಲಿನ ಮೋಹಕ್ಕೆ ಕಾರಣವೂ ವಿಚಿತ್ರ

bumbum
Published on

ಬ್ರೆಜಿಲ್‌: ಲೈಫ್‌ ಇನ್ಶುರೆನ್ಸ್‌, ಮೆಡಿಕಲ್‌ ಇನ್ಶುರೆನ್ಸ್‌ ಇವೆಲ್ಲವೂ ಕಾಮನ್‌. ಕೆಲವರು ಮನೆಗೆ, ವಾಹನಗಳಿಗೆ ವಿಮೆ ಮಾಡಿಸುವುದೂ ಸಹಜ. ಆದರೆ ಇಲ್ಲೊಬ್ಬ ಮಾಡೆಲ್‌, ತನ್ನ ಹಿಂದಿನ ಭಾಗ ಅಂದರೆ ಪೃಷ್ಠಕ್ಕೆ ವಿಮೆ ಮಾಡಿಸಿದ್ದಾಳೆ, ಜಾಲತಾಣದಲ್ಲಿ ಈಗ ಈಕೆಯದ್ದೇ ಸದ್ದು.

ಒಂದೆರಡಲ್ಲ, ಬರೋಬ್ಬರಿ 13 ಕೋಟಿ ರೂಪಾಯಿ ವಿಮೆಯನ್ನು ತನ್ನ ಈ ಅಂಗಕ್ಕೆ ಮಾಡಿಸಿದ್ದಾರೆ. ಬ್ರೆಜಿಲಿಯನ್‌ ರೂಪದರ್ಶಿಯಾಗಿರುವ ನಥೀ ಕೀಹಾರಾ ಹೀಗೊಂದು ಸುದ್ದಿಮಾಡಿದ್ದಾಳೆ. ಅಷ್ಟಕ್ಕೂ ಈಕೆಗೆ ತನ್ನ ಈ ಅಂಗದ ಮೇಲೆ ಏಕಿಷ್ಟು ಮೋಹ ಎಂದು ಕೇಳಬಹುದು. ಸೌಂದರ್ಯ ಸ್ಪರ್ಧೆಗಳಲ್ಲಿ ಕೆಲವೊಂದು ಅಂಗಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ. ಈಕೆಯ ಪೃಷ್ಠವನ್ನು ಗುತುರಿಸಿ, ಅಕೆಗೆ ಮಿಸ್‌ ಬಮ್‌ಬಮ್‌ (ಪೃಷ್ಠ ಸುಂದರಿ)-2021 ಎಂದು ಬಿರುದು ನೀಡಲಾಗಿದೆ. ಈ ಮೂಲಕ ಅತ್ಯಂತ ಕಿರಿಯ ಪೃಷ್ಠ ಸುಂದರಿ ಎಂಬ ಖ್ಯಾತಿ ಇವಳದ್ದಾಗಿದೆ.

Nathy Kihara: ಬ್ಯಾಕ್ ಬ್ಯೂಟಿಗಾಗಿ Miss ಬಮ್‌ಬಮ್ ವ್ಯಯಿಸಿದ್ದು ಬರೋಬ್ಬರಿ 13 ಕೋಟಿ |  Model who won Miss Bumbum 2021 spends Rs 13 crore to get her behind insured  dpl

ಇದಕ್ಕೆ ಕಾರಣವೂ ಇದೆ. ಅದೇನೆಂದರೆ, 35 ವರ್ಷ ವಯಸ್ಸಿನ ನಥಿಯ ಈ ಭಾಗ ಬ್ರೆಜಿಲ್‍ನಲ್ಲಿ ಅತಿ ದೊಡ್ಡದಾಗಿದೆಯಂತೆ. ಅಲ್ಲಿರುವ ಯುವತಿಯ ಪೃಷ್ಠ ಇಷ್ಟು ದೊಡ್ಡದಾಗಿ ಇರುವುದಿಲ್ಲವಂತೆ. ಅದಕ್ಕಾಗಿಯೇ ವಿಶೇಷವಾಗಿರುವ ನನ್ನ ಈ ಅಂಗಕ್ಕೆ 13 ಕೋಟಿ ರೂ. ವಿಮೆ ಮಾಡಿಸಿದ್ದೇನೆ ಎಂದಿದ್ದಾರೆ ಈ ಸುಂದರಿ.

ಸದ್ಯ ಈಕೆಯ ಪೃಷ್ಠ 126 ಸೆಂಟಿಮೀಟರ್ ಇದೆ. ಅದನ್ನು 130 ಸೆಂ.ಮೀ ಅನ್ನು ಹೊಂದುವುದು ನನ್ನ ಗುರಿ. ಈಗಿರುವ ಅಳತೆ ನನಗೆ ಅಷ್ಟು ತೃಪ್ತಿಕರವಾಗಿಲ್ಲ ಎಂದಿದ್ದಾಳೆ. ನನ್ನ ಪೃಷ್ಠವು ಸಂಪೂರ್ಣವಾಗಿ ನೈಸರ್ಗಿಕವಾಗಿದೆ. ನನ್ನ ದೇಹವನ್ನು ಕಾಪಾಡಿಕೊಳ್ಳಲು ನಾನು ಸಾಕಷ್ಟು ತರಬೇತಿ ನೀಡುತ್ತೆನೆ. ತಾಯ್ತನದ ನಂತರ ಜಿಮ್‍ನಲ್ಲಿ ತೂಕ, ಆಹಾರದ ಮೇಲೆ ಹೆಚ್ಚು ಗಮನ ಹರಿಸಲು ಪ್ರಾರಂಭಿಸಿದೆ ಎಂದು ಹೇಳಿಕೊಂಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net