More

    ಬದುಕಿದ್ದು ಪ್ರಯೋಜನವಿಲ್ಲ, ದಯಾಮರಣ ಕೊಡಿ ಎಂದು ರಾಷ್ಟ್ರಪತಿಗೆ ಪತ್ರ ಬರೆದ ವೈದ್ಯಕೀಯ ವಿದ್ಯಾರ್ಥಿಗಳು!

    ಲಖನೌ: ‘ನಾವು ಬದುಕಿದ್ದು ಏನೂ ಪ್ರಯೋಜನವಿಲ್ಲ. ನಾವೆಲ್ಲಾ ಸಾಯಬೇಕು. ಅದ್ದರಿಂದ ಅದಕ್ಕೆ ದಯವಿಟ್ಟು ನಮಗೆ ದಯಾಮರಣ ಕೊಡಿ’ ಎಂದು ಉತ್ತರ ಪ್ರದೇಶದ ಶಹರನ್​ಪುರದ 12 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರಿಗೆ ಪತ್ರ ಬರೆದಿದ್ದಾರೆ!

    ಈ ಎಲ್ಲಾ ವಿದ್ಯಾರ್ಥಿಗಳು ಈ ರೀತಿ ಮನವಿ ಮಾಡಿಕೊಳ್ಳುವುದಕ್ಕೆ ಕಾರಣ ಅವರ ಕೋರ್ಸ್‌ಗಳು ಅರ್ಧಕ್ಕೆ ನಿಂತಿರುವುದು. ಆಗಿದ್ದೇನೆಂದರೆ ಈ 12 ವಿದ್ಯಾರ್ಥಿಗಳೂ ಸೇರಿದಂತೆ ಒಟ್ಟೂ 66 ಮಂದಿ ವಿದ್ಯಾರ್ಥಿಗಳು ಶಹರನ್​​ಪುರದ ಗ್ಲೋಕಲ್​ ವೈದ್ಯಕೀಯ ಕಾಲೇಜು ಎಂಬಿಬಿಎಸ್​ ಕೋರ್ಸ್​​​ಗಾಗಿ ನೋಂದಣಿ ಮಾಡಿಕೊಂಡಿದ್ದರು. ಆದರೆ ಈ ಕಾಲೇಜಿನಲ್ಲಿ ಮೂಲಸೌಕರ್ಯಗಳು, ಸವಲತ್ತುಗಳು ಅತ್ಯಂತ ಕಳಪೆಮಟ್ಟದಲ್ಲಿ ಇದ್ದ ಕಾರಣ ಭಾರತದ ವೈದ್ಯಕೀಯ ಮಂಡಳಿ ಕಾಲೇಜಿನ ಪರವಾನಗಿಯನ್ನು ಅಮಾನ್ಯಗೊಳಿಸಿತು.

    ಇದಾದದ್ದು ವಿದ್ಯಾರ್ಥಿಗಳ ಪ್ರವೇಶವಾದ ಮೂರು ತಿಂಗಳಿನಲ್ಲಿಯೇ. ಆದರೆ ದುರದೃಷ್ಟ ಎಂದರೆ ಇಷ್ಟಾದರೂ ಕಾಲೇಜು ಆಡಳಿತ ಮಂಡಳಿ ಇದನ್ನು ವಿದ್ಯಾರ್ಥಿಗಳಿಗೆ ತಿಳಿಸಲೇ ಇಲ್ಲ. ಐದು ವರ್ಷಗಳವರೆಗೆ ಅಲ್ಲಿಯೇ ಇವರೆಲ್ಲರೂ ಎಂಬಿಬಿಎಸ್ ಪೂರೈಸಿದ್ದಾರೆ. ಅಲ್ಲಿಯವರೆಗೂ ಕಾಲೇಜು ಅಮಾನ್ಯ ಆಗಿರುವುದರ ಬಗ್ಗೆ ಚಕಾರ ಎತ್ತಲಿಲ್ಲ. ಎಲ್ಲಾ ಕೋರ್ಸ್‌ ಮುಗಿದ ಮೇಲೆ ಕಾಲೇಜು ಅಮಾನ್ಯಗೊಂಡ ವಿಚಾರ ವಿದ್ಯಾರ್ಥಿಗಳಿಗೆ ತಿಳಿದಿದೆ. ನಮ್ಮ ವಿದ್ಯಾರ್ಥಿಗಳಿಗೆ ಸಂಪೂರ್ಣ ಶಿಕ್ಷಣ ಸಿಗಲಿ ಎನ್ನುವ ಕಾರಣಕ್ಕೆ ಅವರಿಗೆ ಈ ವಿಷಯ ತಿಳಿಸಲಿಲ್ಲ ಎಂದು ಕಾಲೇಜಿನ ಆಡಳಿತ ಮಂಡಳಿ ಸಮಜಾಯಿಷಿ ನೀಡಿದೆ!

    ಇದರಿಂದ ಕಂಗಾಲಾದ ವಿದ್ಯಾರ್ಥಿಗಳು ಅಲಹಾಬಾದ್ ಹೈಕೋರ್ಟ್​ ಮೆಟ್ಟಿಲೇರಿದ್ದರು. ಆದರೆ ಅಲ್ಲಿ ಅವರ ಪರವಾಗಿ ತೀರ್ಪು ಬರಲಿಲ್ಲ. ಇದರಿಂದ ಬೇಸತ್ತಿರುವ ವಿದ್ಯಾರ್ಥಿಗಳು, ‘ನಮಗೆ ಈಗ ಯಾವುದೇ ಭರವಸೆ ಉಳಿದಿಲ್ಲ. ಇಷ್ಟು ವರ್ಷ ಕಾಲ ಶಿಕ್ಷಣ ಪಡೆದೂ ಅದನ್ನು ಸರಿಯಾಗಿ ಮುಂದುವರಿಸಲು ಆಗಲಿಲ್ಲ. ಇದರಿಂದ ಜೀವನವೇ ಸಾಕೆನಿಸಿದೆ. ಅಮಾನ್ಯಗೊಂಡಿರುವ ಕಾಲೇಜಿನಲ್ಲಿ ಓದಿರುವ ಕಾರಣ, ಇಷ್ಟು ವರ್ಷ ಕಷ್ಟಪಟ್ಟು ಎಷ್ಟೆಲ್ಲಾ ಹಣವನ್ನು ವ್ಯಯಮಾಡಿ ಅಭ್ಯಾಸ ಮಾಡಿದರೂ ನಮಗೆ ಕೆಲಸ ಸಿಗುವುದಿಲ್ಲ. ಇದರಿಂದ ನಾವು ಬದುಕಿದ್ದೂ ಪ್ರಯೋಜನವಿಲ್ಲ. ದಯವಿಟ್ಟು ನಾವು ಸಾಯಲು ಅನುಮತಿ ಕೊಡಿ’ ಎಂದು ಈಗ ಬರೆದಿದ್ದಾರೆ.

    VIDEO: ಕುರುಂಕುರುಂ, ಟೇಸ್ಟಿ ಟೇಸ್ಟಿ ಪೇಪರ್‌ ದೋಸೆ ತಿನ್ನಿ, 71 ಸಾವಿರ ರೂ. ಬಹುಮಾನ ಗೆಲ್ಲಿ!

    ಕೆಪಿಟಿಸಿಎಲ್‌ನಿಂದ 1492 ಇಂಜಿನಿಯರ್‌ಗಳ ನೇಮಕಾತಿ: 73 ಸಾವಿರ ರೂ.ವರೆಗೆ ಸಂಬಳ

    ಬಿಜೆಪಿಗೆ ಬನ್ನಿ, ಹೇಮಾ ಮಾಲಿನಿ ಮಾಡ್ತೇನೆ ಎಂಬ ಆಫರ್‌ ಬಂದಿತ್ತು ಎಂದ ಆರ್‌ಎಲ್‌ಡಿ ಮುಖ್ಯಸ್ಥ ಚೌಧರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts