ಮದ್ಯದ ಬಾಟಲ್‌, ಮಾಂಸದ ತುಂಡುಗಳೊಂದಿಗೆ ಶಿಕ್ಷಕರು, ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಸರ್ಕಾರಿ ಶಾಲೆ- ಮಾನ್ವಿಯಲ್ಲಿ ಘೋರ ಕೃತ್ಯ!

manvi
Published on

ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಬ್ಬಣಕಲ್ ಕ್ಯಾಂಪ್‌ನ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿದ ಖದೀಮರ ಗುಂಪೊಂದು ಅಲ್ಲಿಯೇ ಹೊಸ ವರ್ಷದ ಪಾರ್ಟಿ ಮಾಡಿರುವ ಘಟನೆ ನಡೆದಿದೆ.

ಶಾಲೆಯ ಬೇಗ ಮುರಿದು, ಎಲ್ಲಾ ದಾಖಲಾತಿಗಳನ್ನು ಚೆಲ್ಲಾಪಿಲ್ಲಿ ಮಾಡಿರುವ ಕಳ್ಳರು, ಅಲ್ಲಿ ಮಕ್ಕಳಿಗೆ ಸಂಗ್ರಹಿಸಿಟ್ಟ ಆಹಾರ ಪದಾರ್ಥಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಅಡುಗೆ ಕೋಣೆಯಲ್ಲಿ ಮೊಟ್ಟೆ, ಹಾಲಿನಪುಡಿ, ಅಕ್ಕಿ, ಸಕ್ಕರೆ ಅಡುಗೆ ಬಳಸುವ ಎಣ್ಣೆ ಇನ್ನಿತರ ಎಲ್ಲಾ ವಸ್ತುಗಳೂ ಕಳ್ಳತನವಾಗಿವೆ.

ಮಕ್ಕಳಿಗಾಗಿ ನೀಡಲಾಗುತ್ತಿದ್ದ ಆಹಾರ ಪರಿಕರಗಳನ್ನು ಕೂಡ ಇವರು ಕದ್ದೊಯ್ದದ್ದಾರೆ. ಶಾಲಾ ದಾಖಲಾತಿಗಳ ಮೇಲೆ ಮದ್ಯದ ಪೌಚ್ ಇಟ್ಟು ವಿಕೃತಿ ಮೆರೆದಿದ್ದಾರೆ. ಶಾಲೆಯ ಆವರಣದಲ್ಲಿ ಮದ್ಯದ ಬಾಟಲ್‌ಗಳು, ಮಾಂಸದ ತುಂಡುಗಳು ರಾಶಿ ಬಿದ್ದಿವೆ.

ಇಂದು ಬೆಳಗ್ಗೆ ಶಾಲೆಗೆ ಹೋಗಿ ನೋಡಿದಾಗ ಶಿಕ್ಷಕರು, ವಿದ್ಯಾರ್ಥಿಗಳು ಬೆಚ್ಚಿಬಿದ್ದು, ಮಾನ್ವಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net