ನನ್ನ ಪ್ರಿಯಕರನ ಎಲ್ಲಾದರೂ ಕಂಡೀರಾ? ಗರ್ಭದಲ್ಲಿ ಮಗುಹೊತ್ತು ಸಾವಿರ ಕಿ.ಮೀ. ಬಂದಳೀ ಯುವತಿ!

lover
Published on

ನೋಯ್ಡಾ: ಗರ್ಭಿಣಿಯೊಬ್ಬಳು ತನ್ನ ಪ್ರೇಮಿಯನ್ನು ಹುಡುಕುತ್ತಾ, ಗರ್ಭದಲ್ಲಿ ಮಗುವನ್ನು ಹೊತ್ತು 1,100 ಕಿಲೋ ದೂರ ಬಂದಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ನೋಯ್ಡಾದಿಂದ ಬಿಹಾರಕ್ಕೆ ಸುಮಾರು 1,100 ಕಿ,ಮೀ ದೂರವಿದ್ದು, ಅಲ್ಲಿಗೆ ಮಹಿಳೆ ಪ್ರಯಾಣ ಬೆಳೆಸಿದ್ದಾರೆ.

ಒಂದೂವರೆ ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ಈ ಜೋಡಿಯಿಂದಾಗಿ ಯುವತಿ ಗರ್ಭವತಿಯಾಗಿದ್ದಾಳೆ. ಆದರೆ ಇದು ತಿಳಿಯುತ್ತಲೇ ಪ್ರಿಯಕರ ಎಸ್ಕೇಪ್​ ಆಗಿದ್ದಾನೆ. ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ನವದೇಪುರ್ ಹಳ್ಳಿಯ ಯುವತಿ, ನೋಯ್ಡಾದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ತನ್ನ ಗೆಳೆಯ ಅಶುತೋಷ್ ಸಿಂಗ್ ಜತೆ ಒಡನಾಟ ಬೆಳೆಸಿಕೊಂಡಿರುವ ಪ್ರಭಾವ ಇದು.

ಮದುವೆಯಾಗುವುದಾಗಿ ನಂಬಿಸಿ ತನಗೆ ಆತ ಮೋಸ ಮಾಡಿರುವ ವಿಷಯ ಯುವತಿಗೆ ಗರ್ಭಧರಿಸಿದ ಮೇಲೆ ತಿಳಿದಿದೆ. ಮೂರು ತಿಂಗಳ ಗರ್ಭಿಣಿ ಎಂದು ತಿಳಿಯುತ್ತಲೇ ಮದುವೆಗೆ ಒತ್ತಾಯಿಸಿದ್ದಾಳೆ ಯುವತಿ. ಆದರೆ ಅಶುತೋಷ್​ ಆ ಮಗುವನ್ನು ಗರ್ಭಪಾತ ಮಾಡಿಸು ಎಂದಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.

ತನಗೆ ಕಂಡ ಜಾಗದಲ್ಲೆಲ್ಲಾ ಹುಡುಕಿದ ಯುವತಿಗೆ ಅಶುತೋಷ್​ ಬಿಹಾರಕ್ಕೆ ಹೋಗಿರುವುದು ತಿಳಿದಿದೆ. ಪೊಲೀಸ್​ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲು ಮಾಡಿದ ನಂತರ, ಪೊಲೀಸರು ಅಶುತೋಷ್​ನ ಜಾಡನ್ನು ಹಿಡಿದು ಹೋದಾಗ ಆತ ಬಿಹಾರ್​ದಲ್ಲಿ ಇರುವುದು ತಿಳಿದಿದೆ. ಸೆಮ್ರಿ ಗ್ರಾಮದಲ್ಲಿ ಆತ ಇರುವುದು ಖಚಿತಪಡಿಸಿಕೊಂಡಿರುವ ಯುವತಿ ತನಗೆ ಪರಿಚಯವೇ ಇಲ್ಲದ ಊರಿಗೆ ಭೇಟಿ ಕೊಟ್ಟು ಪ್ರಿಯಕರನ ಹುಡುಕಾಟದಲ್ಲಿ ತೊಡಗಿದ್ದಾಳೆ. ಆಕೆಗೀಗ ಅಲ್ಲಿಯ ಪೊಲೀಸರೂ ನೆರವಾಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net