

ಇಸ್ಲಾಮಾಬಾದ್: ಮದುವೆಯೆನ್ನುವ ಅಪರೂಪದ ಕ್ಷಣವನ್ನು ಜೀವನ ಪರ್ಯಂತ ನೆನಪಿಸಿಕೊಳ್ಳುವ ಉದ್ದೇಶದಿಂದ ನೂತನ ವಧು-ವರರು ಹಲವಾರು ಯೋಜನೆಗಳನ್ನು ರೂಪಿಸಿಕೊಳ್ಳುತ್ತಾರೆ. ಅದರಲ್ಲಿ ಒಂದು ಫೋಟೋಶೂಟ್.
ಇಸ್ಲಾಮಾಬಾದ್: ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಎಂದೆಲ್ಲಾ ಫೋಟೋಶೂಟ್ ಮಾಡಿಸಿಕೊಳ್ಳುವ ಪದ್ಧತಿ ಬಂದು ಹಲವಾರು ವರ್ಷಗಳೇ ಕಳೆದುಬಿಟ್ಟಿವೆ. ಮದುವೆಗೆ ಮುನ್ನ ನೂತನ ಜೋಡಿ ಮಾಡಿಸಿಕೊಳ್ಳುವ ಫೋಟೋಶೂಟ್ವೈವಿಧ್ಯಮಯವಾಗಿರಬೇಕೆಂದು ಬಯಸುವವರು ಹಲವರು. ಅದಕ್ಕಾಗಿ ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ.
ಅಂಥದ್ದೇ ಒಂದು ಜೋಡಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಆದರೆ ಈ ಫೋಟೋಶೂಟ್ ವಿಡಿಯೋ ನೋಡಿ ನೆಟ್ಟಿಗರು ಮಾತ್ರ ಭಾರಿ ಗರಂ ಆಗಿದ್ದಾರೆ.
ಇದಕ್ಕೆ ಕಾರಣ, ಫೋಟೋಶೂಟ್ ಮಾಡಿಸಿಕೊಳ್ಳಲು ಈ ಜೋಡಿ ಮದುವೆಯಾದ ರಾತ್ರಿಯೇ ಸಿಂಹದ ಮರಿಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಮದುವೆಯ ಸಂಪ್ರದಾಯಗಳೆಲ್ಲಾ ಮುಗಿದ ಮೇಲೆ ಅದೇ ರಾತ್ರಿ ಈ ನೂತನ ಜೋಡಿ ಸಿಂಹದ ಮರಿಯ ಜತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಿದ್ದೆಯ ಗುಂಗಿನಲ್ಲಿಯೇ ಬಹುಸಮಯದವರೆಗೆ ಇದ್ದ ಮರಿಯ ಜತೆ ಈ ಫೋಟೋಶೂಟ್ ನಡೆದಿದೆ.
ಇಂಥದ್ದೊಂದು ಸಾಹಸಕ್ಕೆ ಕೈಹಾಕಿರುವ ಜೋಡಿ ಇಸ್ಲಾಮಾದ್ನ ಜೋಡಿ. ಫೋಟೋಶೂಟ್ ಮಾಡಿಸಿದ್ದ ಫೋಟೋ ಸ್ಟುಡಿಯೋ ಮಾಲೀಕ, ಹೆಮ್ಮೆಯಿಂದ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಫೋಟೋಗಾಗಿಯೇ ಹುಲಿ ಮರಿಯನ್ನು ತರಲಾಗಿತ್ತು. ಅದು ನಿದ್ದೆ ಮಾಡುತ್ತಿರುವಾಗ ಫೋಟೋ ತೆಗೆಸಿಕೊಂಡಿರುವುದಾಗಿ ಅವರು ಹೇಳಿದ್ದರು. ಆದರೆ ಸಿಂಹದ ಮರಿ ಬಹಳ ಸಮಯದವರೆಗೆ ನಿದ್ದೆ ಮಾಡುತ್ತಿದ್ದ ಕಾರಣ, ಅದಕ್ಕೆ ನಿದ್ದೆ ಗುಳಿಗೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮೊದಲು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ವೈಲ್ಡ್ಲೈಫ್ ಸಂಸ್ಥೆ. ಅಲ್ಲಿಂದ ಶುರುವಾಯ್ತು ಟೀಕೆಗಳ ಸುರಿಮಳೆ. ಫೋಟೋ ಸ್ಟುಡಿಯೋ ಹಾಗೂ ದಂಪತಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಭಾರಿ ಒತ್ತಡ ಬರುತ್ತಲೇ ಅದನ್ನು ತಮ್ಮ ಖಾತೆಯಿಂದ ದಂಪತಿ ಡಿಲೀಟ್ ಮಾಡಿದೆ ಸ್ಟುಡಿಯೋ. ಆದರೆ ಸ್ಕ್ರೀನ್ ಶಾಟ್ ಗಳು ಹರಿದಾಡುತ್ತಿವೆ.
ಫೋಟೋಗಳು ವೈರಲ್ ಆದ ನಂತರ, ಸ್ಟುಡಿಯೋ ಈ ಪ್ರಾಣಿಯನ್ನು ದುರುಪಯೋಗಪಡಿಸಿಕೊಂಡಿಲ್ಲ ಅಥವಾ ಅದಕ್ಕೆ ನಿದ್ರೆ ಭರಿಸುವ ಔಷಧಿ ಕೊಟ್ಟಿಲ್ಲ ಎಂದು ಹೇಳಿದರೂ ಕಮೆಂಟಿಗರು ಕೇಳುತ್ತಿಲ್ಲ.