VIDEO: ಇಡೀ ದ್ವೀಪವನ್ನು ಆವರಿಸಿದ ಜ್ವಾಲಾಮುಖಿ- ಭಯಾನಕ ವಿಡಿಯೋ ವೈರಲ್‌

jwalamukhi
Published on

ಕ್ಯಾನರಿ : ಸ್ಟೇಪ್‌ನ ಕ್ಯಾನರಿ ದ್ವೀಪವಾದ ಲಾ ಪಾಲ್ಮಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು ಅದರ ಭಯಾನಕ ವಿಡಿಯೋ ವೈರಲ್‌ ಆಗಿದೆ.

ಜ್ವಾಲಾಮುಖಿಯ ಪ್ರಭಾವ ಎಷ್ಟಿತ್ತೆಂದರೆ ಇಡೀ ದ್ವೀಪಕ್ಕೆ ದ್ವೀಪವೇ ಹೊತ್ತಿ ಉರಿಯುವಂತೆ ಭಾಸವಾಗುತ್ತಿದೆ. ಇಲ್ಲಿ ನೆಲೆಸಿದ್ದ ಲಕ್ಷಾಂತರ ಮಂದಿಯನ್ನು ಸಾಮೂಹಿಕವಾಗಿ ಸ್ಥಳಾಂತರಿಸಲು ಕಾರಣವಾಗಿದೆ. ದ್ವೀಪಕ್ಕೆ ಬಂದಿರುವ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜ್ವಾಲಾಮುಖಿಯ ಲಾವಾ ದೃಶ್ಯ ಡ್ರೋನ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೊಳಗಳಲ್ಲಿ ಬೆಂಕಿ ಹೊತ್ತಿ ಉರಿದರೆ, ಅತ್ತ ಭಾರಿ ಪ್ರಮಾಣದ ದ್ರಾಕ್ಷಿ ತೋಟವನ್ನು ಬೆಂಕಿ ತನ್ನ ಕೆನ್ನಾಲಿಗೆಯನ್ನು ಚಾಚಿ ಆವರಿಸಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.

ಬೆಂಕಿ ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಜನರನ್ನು ಸ್ಥಳಾಂತರಿಸುವುದು ಕೂಡ ದೊಡ್ಡ ಸವಾಲಾಗಿದೆ.

ಭಯಾನಕ ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net