More

    ಹುಟ್ಟಿದ ವಾರವೇ ನಿಮಗೆ ಶುಭ- ಜ್ಯೋತಿಷಿ ಸಲಹೆ ಮೇರೆಗೆ ಕುಸುಮಾ ನಾಮಪತ್ರ ಸಲ್ಲಿಕೆ

    ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್. ಕುಸುಮಾ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಅವರು ಹುಟ್ಟಿರುವುದು ಮಂಗಳವಾರ ಆಗಿರುವ ಕಾರಣ, ಮಂಗಳವಾರವೇ ನಾಮಪತ್ರ ಸಲ್ಲಿಸಲು ಜ್ಯೋತಿಷಿ ನೀಡಿರುವ ಸಲಹೆಯ ಹಿನ್ನೆಲೆಯಲ್ಲಿ ಇಂದೇ ಮುಹೂರ್ತ ಫಿಕ್ಸ್​ ಮಾಡಲಾಗಿತ್ತು.

    ಈ ಮೊದಲು ಆಗಿದ್ದ ನಿಗದಿಯಂತೆ ಕಾಂಗ್ರೆಸ್​ ನಾಯಕರ ಸಮ್ಮುಖದಲ್ಲಿ ಕುಸುಮಾ ಅವರು ನಾಳೆ ನಾಮಪತ್ರ ಸಲ್ಲಿಸಬೇಕಾಗಿತ್ತು. ಆದರೆ ಜ್ಯೋತಿಷಿ ಸಲಹೆಯಂತೆ ಇಂದು ಒಳ್ಳೆಯ ಮುಹೂರ್ತ ಎಂದಿರುವ ಕಾರಣ, ಒಂದು ದಿನ ಮುಂಚಿತವಾಗಿ ನಾಮಪತ್ರ ಸಲ್ಲಿಸಲಾಗಿದೆ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರ ಆಪ್ತ ಜ್ಯೋತಿಷಿ ಡಾ.ಬಿ.ಪಿ ಆರಾಧ್ಯ ಅವರ ಸಲಹೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಂದು 12 ಗಂಟೆಯಿಂದ 12. 15 ನಿಮಿಷದ ಒಳಗೆ ನಾಮಪತ್ರ ಸಲ್ಲಿಸಲು ಡಾ.ಆರಾಧ್ಯ ಅವರು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಮ್ಮುಖದಲ್ಲೇ ನಾಮಪತ್ರ ಸಲ್ಲಿಸಲಾಗಿದೆ.

    ಇದನ್ನೂ ಓದಿ: ಪ್ರೀತಿಯ ಅಕ್ಕಾ.. ಕನ್ನಡಿ ನೋಡ್ಕೊಳ್ಳಿ ಎಂದು ಕುಸುಮಾ ಹೇಳಿದ್ದು ಯಾಕೆ?!

    ಮುನಿರತ್ನ ವಿರುದ್ಧ ಕುಸುಮಾ ಕಣಕ್ಕಿಳಿಸಿದರೆ ಮುನಿರತ್ನ ಅವರನ್ನು ಸೋಲಿಸಬಹುದು ಎಂದು ಡಿ.ಕೆ.ಶಿಗೆ ಜ್ಯೋತಿಷಿ ಸಲಹೆ ನೀಡಿದ್ದರು ಎನ್ನಲಾಗಿದೆ. ಕುಸುಮಾ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ವೇಳೆಯಲ್ಲೂ ಡಿಕೆಶಿಯವರು ಜ್ಯೋತಿಷಿ ಸಲಹೆ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ.

    ಕುಸುಮಾ ಅವರ ಹುಟ್ಟಿದ ದಿನ ಮಂಗಳವಾರ. ಹೀಗಾಗಿ ತಾರಾಬಲದ ಮೇಲೆ ಮಂಗಳವಾರವಾದ ಇಂದು ಒಂದು ನಾಮಪತ್ರ ಸಲ್ಲಿಸಲು ಸೂಚಿಸಿದ್ದರು.

    ನಾಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸಮ್ಮುಖದಲ್ಲಿ ಎರಡನೇ ನಾಮಪತ್ರ ಸಲ್ಲಿಸಲಿದ್ದಾರೆ.

    ನಟಿ ಕಂಗನಾ ವಿರುದ್ಧ ತುಮಕೂರಲ್ಲಿ ದಾಖಲಾಯ್ತು ಎಫ್‌ಐಆರ್

    ಉಸಿರಾಟದ ಸಮಸ್ಯೆ: ರಾಷ್ಟ್ರಪತಿ ಪದಕ ಪುರಸ್ಕೃತ ನಿವೃತ್ತ ಎಸ್​ಪಿ ನೂರುಲ್ಲಾ ವಿಧಿವಶ

    ನನ್ನನ್ನು ಕ್ಷಮಿಸಿಬಿಡಿ… ಕಣ್ಣೀರು ಸುರಿಸಿದ ಉ.ಕೊರಿಯಾ ಸರ್ವಾಧಿಕಾರಿ ಕಿಮ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts