ಆಶ್ಲೇಷ ನಕ್ಷತ್ರ: ಕುಕ್ಕೆ ದೇಗುಲದಲ್ಲಿ ಭಕ್ತರ ಸಾಗರ- ರಾತ್ರಿಯಿಂದಲೇ ಕ್ಯೂ

kukke
Published on

ಸುಬ್ರಹ್ಮಣ್ಯ: ಹಲವಾರು ದೋಷಗಳಿಗೆ ಪರಿಹಾರ ನೀಡುವ ದೇವರು ಎಂದೇ ಹೆಸರುಗಳಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ನಿನ್ನೆ ರಾತ್ರಿಯಿಂದಲೇ ಜನಸಾಗರ ಹರಿದು ಬರುತ್ತಿದೆ. ಇದಕ್ಕೆ ಕಾರಣ ಇಂದು ಆಶ್ಲೇಷ ನಕ್ಷತ್ರದ ವಿಶೇಷ ದಿನ.

ಈ ದಿನ ಪೂಜೆ ಸಲ್ಲಿಸಿದರೆ ಅದಕ್ಕೆ ಬಹಳ ಮಹತ್ವವಿದೆ ಎನ್ನುವುದು ಭಕ್ತರ ನಂಬಿಕೆ. ವಿಶೇಷವಾಗಿ ಆಶ್ಲೇಷ ನಕ್ಷತ್ರ ದಿನದಂದು ಹೆಚ್ಚಿನ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ಆಶ್ಲೇಷ ಬಲಿ ಸೇವೆ ಮಾಡಿಸುತ್ತಾರೆ.

ಈ ಹಿನ್ನೆಲೆಯಲ್ಲಿ ವಿಶೇಷ ಸೇವೆ ನೆರವೇರಿಸಲು ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಇಲ್ಲಿ ಸೇರಿದ್ದಾರೆ.

ಇಂದು ಬೆಳಗ್ಗೆ 6 ಗಂಟೆಯಿಂದಲೇ ಪೂಜೆಯ ರಸೀತಿ ನೀಡಲು ಶುರು ಮಾಡಲಾಗಿದೆ. ಕೋವಿಡ್ ಕಾರಣದಿಂದ ಸೇವೆಗಳಿಗೆ ಮಿತಿ ಇರುವುದರಿಂದ ನಿನ್ನೆ ರಾತ್ರಿಯಿಂದಲೇ ಜನರು ಕ್ಯೂನಲ್ಲಿ ನಿಂತುಕೊಂಡಿರುವ ದೃಶ್ಯ ಕಂಡುಬಂತು. ಇಂದು ಕೂಡ ಸುಬ್ರಹ್ಮಣ್ಯನ ದರ್ಶನ ಪಡೆಯಲು ಭಕ್ತರು ಆಗಮಿಸುತ್ತಲೇ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net