VIDEO: ಮಾಟದಿಂದ ಆಸ್ತಿ ವಿಷಯ ಬಗೆಹರಿಸ್ತೇನೆ ಎಂದು ದುಡ್ಡು ಗುಳುಂ ಮಾಡಿದ ಮಂತ್ರವಾದಿಗೆ ಬಿತ್ತು ಗೂಸಾ!

koppal1
Published on

ಕೊಪ್ಪಳ: ಆಸ್ತಿ ವಿಷಯವನ್ನು ಬಗೆಹರಿಸುವುದಾಗಿ ಹೇಳಿ ಮಾಟ- ಮಂತ್ರ ಮಾಡಿಸಲು ಮಹಿಳೆಯೊಬ್ಬರಿಂದು 50 ಸಾವಿರ ರೂಪಾಯಿ ಪಡೆದು 2 ಲಕ್ಷ ರೂ. ಹಣ ಕೇಳಿದ ಮಂತ್ರವಾದಿಗೆ ಜನರು ಥಳಿಸಿರುವ ಘಟನೆ ಕೊಪ್ಪಳದ ಭಾಗ್ಯನಗರದಲ್ಲಿ ನಡೆದಿದೆ.

ಮಾಟಮಂತ್ರ ಮಾಡಿಸಿರುವುದಾಗಿ ನಗರದ ಮಹಾದೇವಿ ಎಂಬ ಮಹಿಳೆಯಿಂದ ಮೊದಲು 50 ಸಾವಿರ ರೂಪಾಯಿ ಹಣ ಪಡೆದುಕೊಂಡಿರುವ ಈ ಮಂತ್ರವಾದಿ ನಂತರ ಎರಡು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾನೆ! ಹಂದ್ರಾಳದ ಚಂದನಗೌಡ ಎಂಬ ಮಂತ್ರವಾದಿ ಈತ.

ಹೆಚ್ಚಿನ ಹಣದ ಬೇಡಿಕೆ ಒಡ್ಡುತ್ತಲೇ ಮಹಾದೇವಿ ಅವರು ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ನಂತರ ಸಂಬಂಧಿಕರು ಚಂದನಗೌಡನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಅಣ್ಣಂದಿರೊಂದಿಗೆ ಆಸ್ತಿಯ ವಿಷಯಕ್ಕೆ ಜಗಳ ಇತ್ತು; ಇದನ್ನು ಬಗೆಹರಿಸಿ ಕೊಡಬೇಕೆಂದು ಮಹಾದೇವಿ ಈತನ ಮೊರೆ ಹೋಗಿದ್ದರು. ಮೊದಲು ಹಣ ಪಡೆದಿದ್ದ ಈತ ಹೆಚ್ಚಿನ ಹಣದ ಬೇಡಿಕೆ ಒಡ್ಡಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net