ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ಖಾಲಿ ಇವೆ ವಿವಿಧ ಹುದ್ದೆಗಳು: 88 ಸಾವಿರ ರೂ.ವರೆಗೆ ಸಂಬಳ

udyogamitra- khadi
Published on

ಬೆಂಗಳೂರು: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ಖಾಲಿ ಇರುವಂತ ಗ್ರೂಪ್-ಬಿ ಹಾಗೂ ಗ್ರೂಪ್-ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಒಟ್ಟು 29 ಹುದ್ದೆಗಳಿದ್ದು, ನವೆಂಬರ್‌ 23 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಹುದ್ದೆಗಳ ವಿವರ: ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ - 02 ಹುದ್ದೆಗಳು- ಸ್ನಾತಕ ಪದವಿ
ಪ್ರಥಮ ದರ್ಜೆ ಸಹಾಯಕರು - 09 ಹುದ್ದೆಗಳು: ಯಾವುದೇ ಪದವಿ
ತಾಂತ್ರಿಕ ಮೇಲ್ವಿಚಾರಕರು - 05 ಹುದ್ದೆಗಳು- ಬಿಎಸ್ಸಿ ಪದವಿ
ತಾಂತ್ರಿಕ ಸಹಾಯಕರು - 13 - ಐಟಿಐ

ವೇತನ ಶ್ರೇಣಿ: ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ - ರೂ.45,300 ರಿಂದ 88,300
ಪ್ರಥಮ ದರ್ಜೆ ಸಹಾಯಕರು - ರೂ.27,650 ರಿಂದ ರೂ.52,650
ತಾಂತ್ರಿಕ ಮೇಲ್ವಿಚಾರಕರು - ರೂ.27,650 ರಿಂದ 52,650
ತಾಂತ್ರಿಕ ಸಹಾಯಕರು - ರೂ.21,400 ರಿಂದ 42,000

ಕೊನೆಯ ದಿನ: ನವೆಂಬರ್‌ 23

ಅರ್ಜಿ ಶುಲ್ಕ: ಸಾಮಾನ್ಯ ವರ್ಗ, ಇತರೆ ಪ್ರವರ್ಗದವರಿಗೆ ರೂ.800, ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1, ಮಾಜಿ ಸೈನಿಕರಿಗೆ ರೂ.400 ಆಗಿದೆ. ಅಂಗವಿಕಲ, ದಿವ್ಯಾಂಗ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.

ಆಯ್ಕೆ ವಿಧಾನ: ಖಾದಿ ಮಂಡಳಿಯು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಮೆರಿಟ್ ಆಧಾರದ ಮೇಲೆ ಹಾಗೂ ಜಾಲ್ತಿಯಲ್ಲಿರುವಂತ ಮೀಸಲಾತಿ ನೀತಿಯನ್ನು ಅನುಸರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?: ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವೆಬ್ ಸೈಟ್ https://bit.ly/3EbJunW  ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net