

ಬೆಂಗಳೂರು: ಯಶ್ ಅಭಿನಯದ ಕೆಜಿಎಫ್ 2 ಬಾಕ್ಸ್ ಆಫೀಸ್ ಕೊಳ್ಳೆಹೊಡೆದಿದೆ. ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಈ ಚಿತ್ರ ಭಾರಿ ಸದ್ದು ಮಾಡುತ್ತಿರುವುದು ಗೊತ್ತಿರುವ ವಿಷಯವೇ.
ಕರ್ನಾಟಕದಲ್ಲಿ 153.8 ಕೋಟಿ ರೂ, ತೆಲುಗು ರಾಜ್ಯದಲ್ಲಿ 125.7 ಕೋಟಿ ರೂ. , ತಮಿಳುನಾಡು 94.24 ಕೋಟಿ ರೂ. , ಕೇರಳದಲ್ಲಿ 53.8 ಕೋಟಿ ರೂ. , ಇತರೆಡೆ 402.9 ಕೋಟಿ ರೂ. ಹೀಗೆ ಒಟ್ಟಾರೆಯಾಗಿ 816.3 ಕೋಟಿ ರೂ. ಗಳಿಗೆ ಹಾಗೂ ವಿದೇಶದಲ್ಲಿ 164.2 ಕೋಟಿ ರೂಗಳಿಗೆ, ಎಲ್ಲವನ್ನೂ ಸೇರಿಸಿ 980.5 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಕನ್ನಡದಲ್ಲಿ ಸಾವಿರ ಕೋಟಿ ರೂ. ಕಲೆಕ್ಷನ್ ಮಾಡಿದ ಮೊದಲ ಚಿತ್ರ ಎನಿಸಿಕೊಂಡಿದೆ. ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ರೂ. ರೂ. ಗಳಿಸಿದ ಮೊದಲ ಚಿತ್ರವಾಗಿದ್ದು, ಎರಡನೇ ಸ್ಥಾನವನ್ನು ಕೆಜಿಎಫ್ 2 ಅಲಂಕರಿಸಿದೆ.
ಇದಾಗಲೇ ಹಲವಾರು ದಾಖಲೆಗಳನ್ನು ಬರೆದಿರುವ ಕೆಜಿಎಫ್-2 ನೋಡದವರು ಅತಿ ವಿರಳ ಎನ್ನಬಹುದು. ಅಂಥವರಿಗೆ ಹಾಗೂ ಇನ್ನೊಮ್ಮೆ ಈ ಚಿತ್ರವನ್ನು ನೋಡಬೇಕು ಎಂದುಕೊಳ್ಳುತ್ತಿರುವವರಿಗೆ ಇದೀಗ ಖುಷಿಯ ವಿಚಾರವೊಂದು ಹೊರ ಬಂದಿದೆ. ಅದೇನೆಂದರೆ, ಕೆಜಿಎಫ್-2 ಅನ್ನು ಉಚಿತವಾಗಿ ನೋಡುವ ಅವಕಾಶವನ್ನು ಕಲ್ಪಿಸಲಾಗಿದೆ.
ಅಮೇಜಾನ್ ಪ್ರೈಮ್ನಲ್ಲಿ ಕೆಜಿಎಫ್ 2 ಇದಾಗಲೇ ದಾಖಲೆ ಬರೆದಿದ್ದು, ಅಲ್ಲೀಗ ಅದನ್ನು ಉಚಿತವಾಗಿ ನೋಡಬಹುದಾಗಿದೆ. ಈ ಮೊದಲು ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಪ್ರೇಕ್ಷಕರು ದುಡ್ಡು ಕೊಟ್ಟು ಅಮೇಜಾನ್ ಪ್ರೈಮ್ನಲ್ಲಿ ಚಿತ್ರ ನೋಡಬಹುದಿತ್ತು. ಇದೀಗ ಅಲ್ಲಿ ಉಚಿತವಾಗಿ ನೋಡಬಹುದಾಗಿದೆ.
'ಕೆಜಿಎಫ್ 2' ಜೂನ್ 3 ರಿಂದ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ರಿಲೀಸ್ ಆಗುತ್ತಿದೆ. ಇದನ್ನು ನೋಡಲು ಯಾವುದೇ ರೀತಿಯ ಹೆಚ್ಚುವರಿ ಹಣ ಕಟ್ಟಬೇಕಾಗಿಲ್ಲ. ಅಮೆಜಾನ್ ಮೆಂಬರ್‌ಶಿಪ್ ಇದ್ದರೆ ಸಾಕು. ಎಲ್ಲಾ ಸಿನಿಮಾಗಳ ಹಾಗೆ ಈ ಚಿತ್ರವನ್ನು ಅಮೆಜಾನ್‌ನಲ್ಲಿ ನೋಡಬಹುದು.