‘ಮಿಲನ’ ಬೆಡಗಿ ಪಾರ್ವತಿಗೆ ಕಿರುಕುಳ: ಆಹಾರ ಪೊಟ್ಟಣ ತರುತ್ತಿದ್ದವ ಕೊನೆಗೂ ಸಿಕ್ಕಬಿದ್ದ!

parvathy
Published on

ತಿರುವನಂತಪುರ: ಆಹಾರ ಪೊಟ್ಟಣಗಳನ್ನು ಹೊತ್ತು ಮನೆಗೆ ಭೇಟಿ ನೀಡುತ್ತ ಬಹುಭಾಷಾ ತಾರೆ ಪಾರ್ವತಿ ತಿರುವೋತುಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.

ನಟಿಯನ್ನು ಹಿಂಬಾಲಿಸಿ, ಆಕೆಯ ಮನೆಗೆ ಬರುವುದೂ ಅಲ್ಲದೇ, ನಟಿಗೆ ನಿರಂತರ ಫೋನ್ ಕರೆಗಳ ಮೂಲಕ ಕಿರುಕುಳ ನೀಡುತ್ತಿದ್ದ ಕೊಲ್ಲಂ ಮೂಲದ ಅಫ್ಸಲ್‌ನನ್ನು (34) ಪೊಲೀಸರು ಬಂಧಿಸಿದ್ದಾರೆ.

ತಿಂಡಿ ಪೊಟ್ಟಣವೆಲ್ಲಾ ತಮಗೆ ಬೇಡ ಎಂದು ಹಲವು ಬಾರಿ ಈತನಿಗೆ ಪಾರ್ವತಿ ಹೇಳಿದ್ದರೂ ಪುನಃ ಪುನಃ ಅದನ್ನು ತರುವ ನೆಪದಲ್ಲಿ ಮನೆಗೆ ಭೇಟಿ ನೀಡುತ್ತಿದ್ದ. ಅಲ್ಲಿರುವ ಭದ್ರತಾ ಸಿಬ್ಬಂದಿ ಜತೆ ಕ್ಯಾತೆ ತೆಗೆದು ಒಳಗೆ ನುಗ್ಗುತ್ತಿದ್ದ. ಈತನ ವಿರುದ್ಧ ಈ ಹಿಂದೆಯೇ ನಟಿ ದೂರು ದಾಖಲಿಸಿದ್ದರು. ಅಂತೂ ಆತನನ್ನು ಈಗ ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯರ ಮೇಲೆ ನಾನಾ ವಿಧದಲ್ಲಿ ಆಗುತ್ತಿರುವ ದೌರ್ಜನ್ಯದ ಕುರಿತು ಪಾರ್ವತಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದರು.

ಮಲಯಾಳಿ ನಟಿಯಾಗಿರುವ ಪಾರ್ವತಿ, ಕನ್ನಡದಲ್ಲಿಯೂ ನಟಿಸಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಜತೆ ಮಿಲನ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೂ ಅಲ್ಲದೇ ‘ಪೃಥ್ವಿ’, ‘ಮಳೆ ಬರಲಿ ಮಂಜೂ ಇರಲಿ’, ‘ಅಂದರ್ ಬಾಹರ್’ ಮೊದಲಾದ ಚಿತ್ರಗಳಲ್ಲಿ ನಾಯಕಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net