More

    ಕೇರಳ ಸಿಎಂ ಸೇರಿ ಆರು ಸಚಿವರು ಕ್ವಾರಂಟೈನ್‌: ಸಹಕಾರ ಸಚಿವ ಧ್ವಜಾರೋಹಣ

    ಕೋಯಿಕೋಡ್‌: ಕೆಲ ದಿನಗಳ ಹಿಂದೆ ಕೋಯಿಕೋಡ್‌ನಲ್ಲಿ ಸಂಭವಿಸಿದ್ದ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕರೊನಾ ಸೋಂಕಿನ ಅಪಾಯ ಇರುವ ಹಿನ್ನೆಲೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

    ಇವರಷ್ಟೇ ಅಲ್ಲದೇ ಕೇರಳ ಆರು ಸಚಿವರು ಕೂಡ ಸೆಲ್ಪ್‌ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇದರಲ್ಲಿ ಆರೋಗ್ಯ ಸಚಿವೆ ಕೆ.ಕೆ ಶೈಲಾಜಾ ಕೂಡ ಇದ್ದಾರೆ.

    ಕೋಯಿಕೋಡ್‌ ನಡೆದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಪಘಾತದ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸುಮಾರು 20 ಅಧಿಕಾರಿಗಳಿಗೆ ಕರೊನಾ ‌ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

    ಇದನ್ನೂ ಓದಿ: LIVE: ಸ್ವಾತಂತ್ರ್ಯೋತ್ಸವ ದಿನ ನಿಮಿತ್ತ ದೇಶವನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ

    ಸಚಿವರಾದ ಎ.ಸಿ.ಮೊಯಿದೀನ್, ಕಂದಾಯ ಸಚಿವ ಇ. ಚಂದ್ರಶೇಖರನ್, ಕೈಗಾರಿಕಾ ಸಚಿವ ಇ.ಪಿ. ಜಯರಾಜನ್ ಸೆಲ್ಫ್‌ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಮುಖ್ಯಮಂತ್ರಿ ಸೇರಿದಂತೆ ಸಚಿವರೆಲ್ಲರೂ ಕ್ವಾರಂಟೈನ್‌ ಆಗಿರುವ ಹಿನ್ನೆಲೆಯಲ್ಲಿ ತಿರುವನಂತಪುರದಲ್ಲಿ ಶನಿವಾರ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಹಕಾರ ಮತ್ತು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ದ್ವಜಾರೋಹಣ ಮಾಡಲಿದ್ದಾರೆ ಎಂದು ಕೇರಳ ಸಿಎಂಒ ತಿಳಿಸಿದ್ದಾರೆ.

    ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ

    ಹೋಟೆಲ್‌ನಲ್ಲಿ ರಾತ್ರಿ ಕಳೆದ ಪ್ರೇಮಿಗಳು ಮಾರನೆಯ ದಿನ ಶವವಾದರು!

    ಅತ್ಯಂತ ಕ್ರೂರವಾಗಿ ಲಾಕಪ್‌ ಡೆತ್‌ ಮಾಡಿದ್ದ ಆರೋಪಿ ಪೊಲೀಸ್‌ ಕರೊನಾಕ್ಕೆ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts