

ಉತ್ತರಕನ್ನಡ ಜಿಲ್ಲೆ ಕೈಗಾದಲ್ಲಿರುವ ನ್ಯೂಕ್ಲಿಯರ್ ಪವರ್ ಕಾಪೋರ್ರೇಷನ್ ಆಫ್ ಇಂಡಿಯಾ ಲಿಮಿಟೆಡ್ನ (ಎನ್ಪಿಸಿಐಎಲ್) ಟಕದಲ್ಲಿ ವಿವಿಧ ಇಂಜಿನಿಯರ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸೈಟ್ ಆಯ್ಕೆ, ವಿನ್ಯಾಸ, ನಿರ್ಮಾಣ, ನಿರ್ವಹಣೆ, ನವೀಕರಣ, ಆಧುನೀಕರಣ ಮತ್ತು ಉನ್ನತಿಕರಣ, ಸಸ್ಯ ಜೀವ ವಿಸ್ತರಣೆ, ತ್ಯಾಜ್ಯ ನಿರ್ವಹಣೆ ಸೇರಿ ಪರಮಾಣು ತಂತ್ರಜ್ಞಾನಕ್ಕೆ ಸಂಬಂಧಿಸಿದ ಇತರ ಕೆಲಸಗಳನ್ನು ನಿರ್ವಹಿಸುವ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಒಟ್ಟು ಹುದ್ದೆಗಳು: 26
ಪರಮಾಣು ಇಂಧನ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಾರ್ವಜನಿಕ ವಲಯ ಉದ್ಯಮವಾಗಿರು ಎನ್ಪಿಸಿಐಎಲ್ನಿಂದ 2 ವರ್ಷದ ಅವಧಿಗೆ ಅಥವಾ ರೆಗ್ಯುಲರ್ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ವರೆಗೆ, ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಕಾರ್ಯಾವಧಿ ಇರಲಿದೆ.
ಹುದ್ದೆ ವಿವರ
- ಫಿಕ್ಸಡ್ ಟರ್ಮ್ ಇಂಜಿನಿಯರ್
* ಸಿವಿಲ್ - 11
* ಮೆಕಾನಿಕಲ್ - 8
* ಎಲೆಕ್ಟ್ರಿಕಲ್ - 4
* ಸಿ ಆ್ಯಂಡ್ ಐ- ಇಸಿ - 2
* ಸಿ ಆ್ಯಂಡ್ ಐ- ಸಿಎಸ್/ ಐಎಸ್ - 1
ಶೈಕ್ಷಣಿಕ ಅರ್ಹತೆ: ಸಿವಿಲ್, ಮೆಕಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್/ ಇನ್ಮೇರ್ಷನ್ ಸೈನ್ಸ್ ಇಂಜಿನಿಯರಿಂಗ್ನಲ್ಲಿ ಬಿಇ/ ಬಿ.ಟೆಕ್/ ಬಿಎಸ್ಸಿ ಪದವಿ ಪಡೆದಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ದೂರ ಶಿಕ್ಷಣ ಮೂಲಕ ಪಡೆದ ಪದವಿಗೆ ಮಾನ್ಯತೆ ಇಲ್ಲ.
ವಯೋಮಿತಿ: 29.7.2021ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ವೇತನ: ಮಾಸಿಕ 61,400 ರೂ. ವೇತನ ಇದ್ದು, ಈ ಮೊತ್ತವು ಅವಧಿ ಮುಗಿಯುವವರೆಗೂ ಏಕೀಕೃತವಾಗಿರುತ್ತದೆ. ಹೆಚ್ಚಳ ಇರುವುದಿಲ್ಲ.
ಇತರ ಸೌಲಭ್ಯಗಳು: ಫಿಕ್ಸಡ್ ಟಮ್ರ್ ಅಪಾಯಿಂಟ್ಮೆಂಟ್ ಅನ್ವಯ ನೇಮಕವಾದ ಅಭ್ಯರ್ಥಿಗಳಿಗೆ ಬ್ಯಾಚುಲರ್ ರೀತಿಯ ವಸತಿ ಸೌಲಭ್ಯ ನೀಡಲಾಗುವುದು. ವಸತಿಯಿಂದ ಕಚೇರಿಗೆ ಕನಿಷ್ಠ ವೆಚ್ಚದಲ್ಲಿ ಸಾರಿಗೆ ಸೌಲಭ್ಯ, ಕೈಗಾ ನಗರ ಪ್ರದೇಶದಲ್ಲಿ ವೈದ್ಯಕಿಯ ಸೌಲಭ್ಯ, ಕ್ಯಾಂಟೀನ್ ಸೌಲಭ್ಯ, ಸಂಸ್ಥೆಯ ಕೆಲಸಕ್ಕಾಗಿ ಪ್ರಯಾಣ ಬೆಳೆಸಿದರೆ ಪ್ರಯಾಣ ಭತ್ಯೆ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ: ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ವೈದ್ಯಕಿಯ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಲಾಗುವುದು.
ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗೆ 13, ಇತರ ಹಿಂದುಳಿದ ವರ್ಗಕ್ಕೆ 7, ಎಸ್ಸಿಗೆ 3, ಎಸ್ಟಿಗೆ 1, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 2, ಅಂಗವಿಕಲರಿಗೆ 2 ಸ್ಥಾನ ಕಾಯ್ದಿರಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 29.7.2021
ಅಧಿಸೂಚನೆಗೆ: https://bit.ly/3hIzklh
ಮಾಹಿತಿಗೆ: http://npcilcareers.co.in