

ಬೆಂಗಳೂರು: ಜೊತೆಜೊತೆಯಲಿ ಧಾರವಾಹಿಯಿಂದ ಹೊರಕ್ಕೆ ಹೋಗಿರುವ ನಾಯಕ ನಟ ಅನಿರುದ್ಧ್ ಈ ಕುರಿತು ಮತ್ತೊಮ್ಮೆ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.
ತಮ್ಮ ವಿರುದ್ಧ ಬಂದಿರುವ ಆರೋಪಗಳಿಗೆ ಅವರು, ಪತ್ರಿಕಾಗೋಷ್ಠಿಯ ಮೂಲಕ ಉತ್ತರ ನೀಡುತ್ತಿದ್ದಾರೆ. ನಾನು ಏನು ಹೇಗೆ ಎಂಬ ಬಗ್ಗೆ ಸಹ ಕಲಾವಿದರ ಬಳಿ ಕೇಳಿ, ಸತ್ಯ ಗೊತ್ತಾಗುತ್ತದೆ ಎಂದಿರುವ ನಟ, ಈ ವಿಷಯದಲ್ಲಿ ತಮ್ಮ ಕುಟುಂಬವನ್ನು ಎಳೆದು ತಂದಿರುವುದು ತುಂಬಾ ನೋವಿನ ಸಂಗತಿ ಎಂದು ಹೇಳಿದ್ದಾರೆ.
ಧಾರಾವಾಹಿಯಲ್ಲಿ ಏನೇ ಸಮಸ್ಯೆ ಆಗಿದ್ದರೂ ನನ್ನ ಬಳಿ ಬಂದು ಬಗೆಹರಿಸಿಕೊಳ್ಳುವ ಬದಲು ನೇರವಾಗಿ ಮಾಧ್ಯಮಗಳ ಮುಂದೆ ಹೋಗಿರುವುದು ಸರಿಯಲ್ಲ. ನನ್ನ ಬಳಿ ಬಂದರೆ ಎಲ್ಲವನ್ನೂ ಪರಿಹರಿಸಿಕೊಳ್ಳಬಹುದಿತ್ತು ಎಂದಿದ್ದಾರೆ.
ನಾನು ಮೊದಲೆ ಹೇಳಿದ್ದೆ ಸ್ಕ್ರಿಪ್ಟ್ ಒಂದು ದಿನ ಮೊದಲೇ ಬೇಕು ಅಂತ, ಆದರೂ ಸೆಟ್ ಗೆ ಬಂದಾಗ ಸ್ಕ್ರಿಪ್ಟ್ ಕೊಡುತ್ತಾರೆ. ಅದನ್ನ ಓದಲು ತುಂಬಾ ಸಮಯವಾಗುತ್ತದೆ. ಅನೇಕ ಬಾರಿ ಸರಿ ಇಲ್ಲ ಅಂತ ಹೇಳಿದ್ದೆ ಅದನ್ನು ಅವರು ಒಪ್ಪಿಕೊಂಡಿದ್ದಾರೆ. ಸ್ಕ್ರಿಪ್ಟ್ ವಿಚಾರಕ್ಕೆ ಅಷ್ಟೆ ಮನಸ್ತಾಪ ಆಗಿದ್ದು ಇದನ್ನು ಅವರು ಮಕ್ಕಳ ಮೇಲೆ ಕೈ ಇಟ್ಟು ಹೇಳಲಿ, ನಾನು ನನ್ನ ಮಕ್ಕಳ ಮೇಲೆ ಕೈ ಇಟ್ಟು ಹೇಳುತ್ತೇನೆ ಎಂದು ಚಾಲೆಂಜ್ ಹಾಕಿದರು.
ನಾನು ಹೋರಾಟ ಮಾಡಿದ್ದು ಸ್ಕ್ರಿಪ್ಟ್ ಗೋಸ್ಕರ ಅಷ್ಟೆ, ಕೊನೆಯ ನಿಮಿಷಕ್ಕೆ ಸ್ಕ್ರಿಪ್ಟ್ ಕೊಟ್ಟರೆ ನನಗೆ ಕೋಪ ಬರುತ್ತೆ. ನನ್ನ ಪಾತ್ರ ನೆಗೆಟಿವ್ ಆಗಬಾರದು ಎಂದು ಮೊದಲೇ ಹೇಳಿದ್ದೆ ಅದನ್ನು ಒಪ್ಪಿಕೊಂಡಿದ್ದರು. ಆದರೆ ಬಳಿಕ ನೆಗೆಟಿವ್ ಆಗಿದೆ. ಆದರೂ ನಾನು ಮಾಡಿದೆ. ಈಗ ಅವರು ಅನಿರುದ್ಧ ಒಪ್ಪಿಕೊಳ್ಳುತ್ತಿಲ್ಲ ಅಂತ ನನ್ನ ಮೇಲೆ ಹೇಳುತ್ತಿದ್ದಾರೆ. ಇದನ್ನು ಸಹ ಅವರು ಅವರ ಮಕ್ಕಳ ಮೇಲೆ ಕೈ ಇಟ್ಟು ಹೇಳಲಿ ಎಂದು ಹೇಳಿದರು. ನನ್ನ ಮಾನಹಾನಿಯಾಗಿದೆ ಇದನ್ನು ಯಾರಿಗೆ ಹೇಳುವುದು ಎಂದು ಪ್ರಶ್ನೆ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯ ನೇರ ಪ್ರಸಾರ ಇಲ್ಲಿದೆ: