ಜಾನ್​​ಸನ್​ ಪೌಡರ್​ನಿಂದ ಕ್ಯಾನ್ಸರ್​: ₹890 ಕೋಟಿ ಪರಿಹಾರಕ್ಕೆ 'ಸುಪ್ರೀಂ' ಆದೇಶ

johnson
Published on

ನ್ಯೂಯಾರ್ಕ್​: ಜಾನ್ಸ್​ನ್​ ಆ್ಯಂಡ್​ ಜಾನ್ಸ್​ನ್​ ಕಂಪೆನಿಯ ಪೌಡರ್​ ವಿರುದ್ಧ ಇದಾಗಲೇ ಹಲವಾರು ಕಡೆಗಳಲ್ಲಿ ಕೇಸು ದಾಖಲಾಗಿರುವ ಬೆನ್ನಲ್ಲೇ, ಆತಂಕದ ವರದಿಯೊಂದು ನ್ಯೂಯಾರ್ಕ್​ನಿಂದ ಬಂದಿದೆ. ಈ ಪೌಡರ್​ ಬಳಸುತ್ತಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬರು ಕ್ಯಾನ್ಸರ್​ಗೆ ತುತ್ತಾಗಿರುವುದಾಗಿ ವರದಿಯಾಗಿದೆ.

ಬ್ರೂಕ್ಲಿನ್​ ಎಂಬ ಮಹಿಳೆ ಹಾಗೂ ಅವರ ಪತಿ ಈ ಬೇಬಿ ಪೌಡರ್​ ಬಳಸುತ್ತಿದ್ದ ಕಾರಣ, ಕ್ಯಾನ್ಸರ್​ಗೆ ತುತ್ತಾಗಿರುವುದಾಗಿ ಆರೋಪ ಬಂದಿದ್ದು, ಈ ಸಂಬಂಧ ಅವರ ಕಂಪೆನಿಯ ವಿರುದ್ಧ ಕೋರ್ಟ್​ನಲ್ಲಿ ಕೇಸ್​ ಹಾಕಿದ್ದರು.

ಆರೋಪಕ್ಕೆ ಸಂಬಂಧಿಸಿದಂತೆ 14 ವಾರಗಳ ವಿಚಾರಣೆ ನಡೆಸಿದ ಅಮೆರಿಕದ ಸುಪ್ರೀಂಕೋರ್ಟ್​, ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಅವರ ಪತಿಗೆ 120 ಮಿಲಿಯನ್​ ಡಾಲರ್​ (ಸುಮಾರು 890 ಕೋಟಿ ರೂಪಾಯಿ) ಪರಿಹಾರ ನೀಡುವಂತೆ ಆದೇಶಿಸಿದೆ.

ಸಂತ್ರಸ್ತರಿಗೆ 325 ಮಿಲಿಯನ್​ ಡಾಲರ್​ ನೀಡುವಂತೆ ಹೈಕೋರ್ಟ್​ ಆದೇಶಿಸಿದ್ದನ್ನು ಕಂಪೆನಿ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿತ್ತು ಹಾಗೂ ತನ್ನ ವಿರುದ್ಧ ವೃಥಾ ಆರೋಪ ಮಾಡಲಾಗಿದೆ, ಅರ್ಜಿದಾರರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಕಂಪೆನಿ ವಾದಿಸಿತ್ತು.

ಆದರೆ ಆರೋಪ ನಿರಾಧಾರ ಎನ್ನುವುದನ್ನು ಸುಪ್ರೀಂಕೋರ್ಟ್​ ತಳ್ಳಿಹಾಕಿದೆ. ಕ್ಯಾನ್ಸರ್​ನಂಥ ಮಾರಕ ರೋಗಕ್ಕೆ ತುತ್ತಾಗಿರುವುದು ವೃಥಾ ಆರೋಪವಲ್ಲ. ಹೈಕೋರ್ಟ್​ ಎಲ್ಲ ರೀತಿಯ ಸತ್ಯಾಸತ್ಯತೆಗಳನ್ನು ಪರಿಶೀಲಿಸಿಯೇ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್​ ತೀರ್ಪನ್ನು ರದ್ದು ಮಾಡಲಾಗದು ಎಂದಿದೆ.

ಆದರೆ 325 ಮಿಲಿಯನ್​ ಡಾಲರ್​ ಪರಿಹಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪರಿಹಾರದ ಮೊತ್ತವನ್ನು ಕಡಿಮೆ ಮಾಡಲಾಗುವುದು ಎಂದು ಹೇಳಿದ ನ್ಯಾಯಮೂರ್ತಿಗಳು 120 ಮಿಲಿಯನ್​ ಡಾಲರ್​ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.

ಮಾತ್ರವಲ್ಲದೇ ಮಾರುಕಟ್ಟೆಯಲ್ಲಿ ಅಧಿಕ ಪಾಲು ಮತ್ತು ಲಾಭವನ್ನು ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿ ಜಾನ್​ಸನ್​ ಆ್ಯಂಡ್​ ಜಾನ್​ಸನ್​ ಕಂಪೆನಿಯು ಆರೋಗ್ಯಕ್ಕೆ ಅಪಾಯ ಎನ್ನುವಂಥ ಅಂಶಗಳನ್ನು ಬಳಸುತ್ತಿರುವುದು ದುರದೃಷ್ಟಕರ ಎಂದು ಕೋರ್ಟ್​ ಹೇಳಿದೆ.

ಈ ಪೌಡರ್​ನಿಂದ ಅಂಡಾಂಶಯದ ​ ಕ್ಯಾನ್ಸರ್​ಗೆ ಕಾರಣವಾಗಿದೆ ಎಂದು ಕ್ಯಾಲಿಫೋರ್ನಿಯಾದ ಮಹಿಳೆ 417 ಮಿಲಿಯನ್​ ಡಾಲರ್​ ಪರಿಹಾಕೋರಿ ಕಂಪನಿ ವಿರುದ್ಧ ಈ ಹಿಂದೆ ಮೊಕದ್ದಮೆ ಹೂಡಿದ್ದರು.ಇನ್ನು ಈ ಕಂಪನಿಯ ಶಾಂಪೂವಿನಲ್ಲಿ ಕೂಡ ಕ್ಯಾನ್ಸರ್​ಕಾರಕ ಫಾರ್ಮಲೆಹೈಡ್​ ಎಂಬ ರಾಸಾಯನಿಕ ವಿದೆ ಎಂಬ ಆರೋಪ ಕೇಳಿಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net