ವಿವಿಧ ಪದವೀಧರರಿಗೆ ಕೆನರಾ ಬ್ಯಾಂಕ್​ನಲ್ಲಿವೆ ಉದ್ಯೋಗಾವಕಾಶ- ಅರ್ಜಿ ಆಹ್ವಾನ

CANARA
Published on

ಕೆನರಾ ಬ್ಯಾಂಕ್​ ಅಂಗಸಂಸ್ಥೆಯಾಗಿರುವ ಕೆನರಾ ಬ್ಯಾಂಕ್​ ಸೆಕ್ಯುರಿಟೀಸ್​ ಲಿಮಿಟೆಡ್​ನಿಂದ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ಘಟಕದಲ್ಲೂ ನೇಮಕ ಮಾಡಿಕೊಳ್ಳುತ್ತಿದ್ದು, ಸ್ಥಳಿಯ ಅಭ್ಯರ್ಥಿಗಳಿಗೆ ಅವಕಾಶವಿದೆ.

ಹುದ್ದೆಗಳ ವಿವರ: ಡೆಪ್ಯುಟಿ ಮ್ಯಾನೇಜರ್​-2, ಅಸಿಸ್ಟೆಂಟ್​ ಮ್ಯಾನೇಜರ್​-2 (ಬೆಂಗಳೂರು), ಅಸಿಸ್ಟೆಂಟ್​ ಮ್ಯಾನೇಜರ್​(ಬ್ಯಾಕ್​ ಆಫೀಸ್​)-1, ಮತ್ತು ಜೂನಿಯರ್​ ಆಫೀಸರ್​-1(ಬೆಂಗಳೂರು), ಜೂನಿಯರ್​ ಆಫೀಸರ್​ (ಬ್ಯಾಕ್​ ಆಫೀಸ್​)-1 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಎಲ್ಲ ಹುದ್ದೆಗಳಿಗೂ ಮೀಸಲಾತಿ ಅನ್ವಯವಾಗಲಿದೆ.

ವಯೋಮಿತಿ: ಎಲ್ಲ ಹುದ್ದೆಗಳಿಗೂ 20ರಿಂದ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಅಭ್ಯರ್ಥಿಗಳಿಗೆ 3 ವರ್ಷ ವಯೋಸಡಿಲಿಕೆ ಇದೆ.

ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್​ ಸೈನ್ಸ್​, ಇನ್​ಮೇರ್ಷನ್​ ಸೈನ್ಸ್​ನಲ್ಲಿ ಬಿಇ/ಬಿಟೆಕ್​/ಎಂಸಿಎ ಪದವಿ ಪಡೆದಿರಬೇಕು. ಶೇ.50 ಅಂಕದೊಂದಿಗೆ ತೇರ್ಗಡೆಯಾಗಿರಬೇಕು. ಕನಿಷ್ಠ 1ರಿಂದ 3 ವರ್ಷ ವೃತ್ತಿ ಅನುಭವ ಇರಬೇಕು.

ವೇತನ: ಡೆಪ್ಯುಟಿ ಮ್ಯಾನೇಜರ್​ 44,000 ರೂ., ಅಸಿಸ್ಟೆಂಟ್​ ಮ್ಯಾನೇಜರ್​ಗೆ 32,500 ರೂ. ಹಾಗೂ ಜೂನಿಯರ್​ ಆಫೀಸರ್​ಗೆ 34,000 ಮಾಸಿಕ ವೇತನದೊಂದಿಗೆ ಇತರ ಭತ್ಯೆ ಇರಲಿದೆ.

ಆಯ್ಕೆ ಪ್ರಕ್ರಿಯೆ: ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಮೂರು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮೀಸಲಾತಿ ಕೋರುವವರು ಅಗತ್ಯ ದಾಖಲೆ ಸಲ್ಲಿಸತಕ್ಕದ್ದು.

ಅರ್ಜಿ ಸಲ್ಲಿಸುವ ವಿಳಾಸ: THE GENERAL MANAGER, HR DEPARTMENT, CANARA BANK SECURITIES LTD 7 TH FLOOR, MAKER CHAMBER III NARIMAN POINT MUMBAI – 400021

ಅರ್ಜಿ ಸಲ್ಲಿಸಲು ಕೊನೇ ದಿನ: 20.5.2022

ಅಧಿಸೂಚನೆಗೆ: https://bit.ly/37cRBWI

ಮಾಹಿತಿಗೆ: https://www.canmoney.in/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net