ಐಷಾರಾಮಿ ಜೀವನಕ್ಕಾಗಿ ವಂಚಕನ ಲವ್​ ಮಾಡಿ ಎಲ್ಲಾ ಕಳಕೊಂಡ ನಟಿ ಜಾಕ್ವೆಲಿನ್​ ಮತ್ತೆ ಕೋರ್ಟ್​ಗೆ!

jacqueline fernandez
Published on

ನವದೆಹಲಿ: ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ವಂಚಕ ಸುಕೇಶ್ ಚಂದ್ರಶೇಖರ್ನಿಂದ ಲಕ್ಷ ಲಕ್ಷ ರೂಪಾಯಿ ಬೆಲೆ ಬಾಳುವ ಅರೇಬಿಯನ್ ಕುದುರೆ, ವಜ್ರದ ಕಿವಿಯೋಲೆಗಳು, ಐಷಾರಾಮಿ ಕಾರುಗಳು, ಒಂದು ಜೋಡಿ ಲೂಯಿ ವಿಟಾನ್ ಶೂಸ್ ಸೇರಿದಂತೆ ಕೋಟಿಗಟ್ಟಲೆ ಹಣವನ್ನು ಪಡೆದುಕೊಂಡಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಂಕಷ್ಟ ಇನ್ನೂ ಮುಗಿದಿಲ್ಲ.

ಸುಕೇಶ್ ಚಂದ್ರಶೇಖರ್ನ ಅತಿ ಸಮೀಪದ ನಿಕಟವರ್ತಿಯಾಗಿದ್ದ ಹಲವು ಯುವತಿಯರ ಪೈಕಿ ಈಕೆ ಕೂಡ ಒಬ್ಬರು. ತನಿಖೆಯ ಭಾಗವಾಗಿ ಜಾಕ್ವೆಲಿನ್​ ಅವರ ಆಸ್ತಿಯನ್ನು ತನಿಖಾಧಿಕಾರಿಗಳು ಇದಾಗಲೇ ಜಪ್ತಿ ಮಾಡಿದ್ದಾರೆ. 7.27 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ ಹಲವಾರು ಕೋಟಿ ರೂಪಾಯಿ ಆಸ್ತಿ ಜಪ್ತಿ ಮಾಡಲಾಗಿದೆ.

ಜಿಮ್ ಉಡುಗೆಗಾಗಿ ಗುಚಿ ಬಟ್ಟೆಗಳು, ಶೂಗಳು, ರೋಲೆಕ್ಸ್ ವಾಚ್, 15 ಜೋಡಿ ಕಿವಿಯೋಲೆಗಳು, 5 ದುಬಾರಿ ಬ್ಯಾಗ್ಗಳು, ಹರ್ಮ್ಸ್ ಬಳೆಗಳು ಮತ್ತು ಎಲ್ವಿ ಬ್ಯಾಗ್​ಗಳು ಈ ಐಷಾರಾಮಿ ಪಟ್ಟಿಯಲ್ಲಿ ಸೇರಿವೆ. 52 ಲಕ್ಷ ರೂಪಾಯಿ ಮೌಲ್ಯದ ಕುದುರೆ, 9 ಲಕ್ಷ ಮೌಲ್ಯದ ಪರ್ಷಿಯನ್ ಬೆಕ್ಕು, ರತ್ನಗಳಿಂದ ಕೂಡಿದ ಕಿವಿಯೋಲೆಗಳು ಮತ್ತು ಹರ್ಮ್ಸ್ ಬ್ರೇಸ್ಲೆಟ್ ಸೇರಿದಂತೆ 52 ಲಕ್ಷ ಮೌಲ್ಯದ ಕುದುರೆ ಪಡೆದಿರುವ ಬಗ್ಗೆ ನಟಿ ಒಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ಐಷಾರಾಮಿ ಜೀವನಕ್ಕಾಗಿ ವಂಚಕನ ಪ್ರೇಮಪಾಶಕ್ಕೆ ಸಿಲುಕಿರುವ ಆರೋಪ ಹೊತ್ತ ನಟಿ ಇದಾಗಲೇ ಈ ಎಲ್ಲಾ ಆಸ್ತಿಗಳನ್ನು ಕಳೆದುಕೊಳ್ಳುವಂತಾಗಿದೆ.

ಈ ನಡುವೆಯೇ ಆಕೆ ವಿದೇಶಕ್ಕೆ ಹೋಗದಂತೆ ಕೋರ್ಟ್​ ಆದೇಶಿಸಿದೆ. ಆದರೆ ಅಬುಧಾಬಿಯಲ್ಲಿ ನಡೆಯಲಿರುವ ಐಐಎಫ್​ಗೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಟಿಗೆ ಆಹ್ವಾನ ಬಂದಿದ್ದು, ಇದಕ್ಕೆ ಅನುಮತಿ ಕೋರಿ ದೆಹಲಿ ಕೋರ್ಟ್​ಗೆ ಮನವಿ ಮಾಡಿದ್ದಾರೆ. 15 ದಿನಗಳ ಕಾಲ ವಿದೇಶ ಪ್ರವಾಸಕ್ಕೆ ಅನುಮತಿ ನೀಡುವಂತೆ ಕೋರಿದ್ದು, ಈ ಸಮಯದಲ್ಲಿ ಅಬುಧಾಬಿ, ಫ್ರಾನ್ಸ್ ಮತ್ತು ನೇಪಾಳಕ್ಕೆ ಪ್ರಯಾಣಿಸಬೇಕಿದೆ ಎಂದಿದ್ದಾರೆ.

ಈ ಮೊದಲು ಸುಕೇಶ್​ ಪೊಲೀಸರ ಬಲೆಗೆ ಬೀಳುತ್ತಿದ್ದಂತೆಯೇ ಜಾಕ್ವೆಲಿನ್​ ಜತೆಗಿರುವ ಫೋಟೋ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಜಾಕ್ವಲಿನ್​ಗೆ ಸುಕೇಶ್ ಕಿಸ್ ಕೊಟ್ಟಿರುವ ದೃಶ್ಯ ಸೇರಿದಂತೆ ಅವರು ಖಾಸಗಿಯಾಗಿರುವ ಹಲವಾರು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತಮ್ಮ ಖಾಸಗಿ ಫೋಟೋಗಳನ್ನು ವೈರಲ್​ ಮಾಡದಂತೆ ಇನ್ಸ್ಟಾಗ್ರಾಂ ಖಾತೆಯಲ್ಲಿ ನಟಿ ಕೋರಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net