More

    ಮುಸ್ಲಿಂ ಯುವತಿಯರ ಮದುವೆಯಲ್ಲಿ ದಿಢೀರ್‌ ಏರಿಕೆ! ವಯಸ್ಸಿನ ಭಯಕ್ಕೆ ಮಕ್ಕಳ ನಿಖಾ ಮಾಡಲು ಮುಗಿಬಿದ್ದ ಪಾಲಕರು…

    ಹೈದರಾಬಾದ್‌: ತೆಲಂಗಾಣ ಸೇರಿದಂತೆ ಕೆಲವು ಕಡೆಗಳಲ್ಲಿ ಮುಸ್ಲಿಂ ಯುವತಿಯರ ವಿವಾಹದಲ್ಲಿ ಏಕಾಏಕಿ ಹೆಚ್ಚಳ ಕಂಡುಬಂದಿದೆ. ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಲು ಇವರು ಮುಗಿಬೀಳುತ್ತಿದ್ದು, ಲಗುಬಗೆಯಿಂದ ಮದುವೆ ಮಾಡಿಕೊಡುತ್ತಿದ್ದಾರೆ.

    ಅಷ್ಟಕ್ಕೂ ಇಂಥ ಏರಿಕೆಗೆ ಕಾರಣ ಏನು ಗೊತ್ತಾ? ಕೇಂದ್ರ ಸರ್ಕಾರ ಮಹಿಳೆಯರ ವಿವಾಹದ ಕಾನೂನುಬದ್ಧ ವಯೋಮಿತಿಯನ್ನು 18 ರಿಂದ 21 ವರ್ಷಕ್ಕೆ ಏರಿಕೆ ಮಾಡಲು ಹೊರಟಿರುವುದು! ಮುಸ್ಲಿಂ ಸೇರಿದಂತೆ ಕೆಲವು ಧರ್ಮದವರಿಗೆ ಅವರದ್ದೇ ಆದ ವೈಯಕ್ತಿಯ ಕಾನೂನುಗಳು ಇರುತ್ತವೆ. ಆದರೆ ಮದುವೆಗೆ ಸಂಬಂಧಿಸಿದ ಕಾನೂನು ಸೇರಿದಂತೆ ಹಲವು ಕಾನೂನುಗಳಿಗೆ ಧರ್ಮದ ಮಿತಿ ಇರುವುದಿಲ್ಲ. ಅವು ಎಲ್ಲರಿಗೂ ಅನ್ವಯ. ಆದಾಗ್ಯೂ ಹಾಲಿ ಮುಸ್ಲಿಂ ಧರ್ಮದಲ್ಲಿ ಮದುವೆಯ ವಿಷಯಕ್ಕೆ ಬರುವುದಾದರೆ ಹಲವರು ತಮ್ಮದೇ ಆದ ವೈಯಕ್ತಿಯ ಕಾನೂನಿನ ಅಡಿಯಲ್ಲಿಯೇ ವಿವಾಹ ಮಾಡುತ್ತಿದ್ದಾರೆ. ಈ ಕಾರಣದಿಂದ ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ವಿವಾಹ ಮಾಡುತ್ತಿರುವುದು ಸಾಮಾನ್ಯ.

    ಆದರೆ ಈಗ ಕೇಂದ್ರ ಸರ್ಕಾರ ಮದುವೆ ಸೇರಿದಂತೆ ಹಲವಾರು ಕಾನೂನುಗಳಲ್ಲಿ ಏಕರೂಪದ ನಾಗರಿಕ ಸಂಹಿತೆ ತರಲು ಹೊರಟಿರುವುದು ಕೂಡ ಹಲವರಿಗೆ ನುಂಗಲಾರದ ತುತ್ತಾಗಿಬಿಟ್ಟಿದೆ. ಈ ವಿಷಯ ಚಾಲ್ತಿಯಲ್ಲಿ ಇರುವ ಮಧ್ಯೆಯೇ ವಿವಾಹಕ್ಕೆ ಸಂಬಂಧಿಸಿದಂತೆ ಹೆಣ್ಣುಮಕ್ಕಳ ವಯೋಮಿತಿಯನ್ನು ಮೂರು ವರ್ಷ ಹೆಚ್ಚಿಗೆ ಮಾಡಿರುವುದು ಕೆಲವರ ನಿದ್ದೆಗೆಡಿಸಿದ್ದು, ಅದು ಕಾನೂನು ಆಗಿ ಜಾರಿಗೊಳ್ಳುವ ಪೂರ್ವದಲ್ಲಿಯೇ ಲಗುಬಗೆಯಿಂದ ಮದುವೆ ಮಾಡಿ ಹೆಣ್ಣುಮಕ್ಕಳನ್ನು ಕಳುಹಿಸಿಕೊಡುತ್ತಿದ್ದಾರೆ.

    ತೆಲಂಗಾಣದಲ್ಲಿ ವಿವಾಹದ ಸಮಯದಲ್ಲಿ ದಿನಕ್ಕೆ 3ರಿಂದ 4 ವಿವಾಹಗಳು ಜರುಗುತ್ತಿದ್ದವು. ಆದರೆ ಈಗ ಖಾಜಿಗಳು ದಿನಕ್ಕೆ 10 ರಿಂದ 20 ವಿವಾಹಗಳನ್ನು ಮಾಡಿಸುತ್ತಿದ್ದಾರೆ. ವಧುವಿನ ಪಾಲಕರು ವರನ ಮನೆಯವರೊಂದಿಗೆ ಸೇರಿ ಕೇವಲ ಕಾನೂನಾತ್ಮಕ ವಿವಾಹದ ಪ್ರಕ್ರಿಯೆ ಮುಗಿಸಿಕೊಳ್ಳುತ್ತಿದ್ದಾರೆ. ಆದರೆ ಸಾಂಪ್ರದಾಯಿಕ ಆಚರಣೆಗಳನ್ನು ಪೂರ್ವ ನಿಗದಿತ ಸಮಯದಲ್ಲೇ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಹಲವು ಖಾಜಿಗಳು ಪ್ರತಿದಿನ 10-20 ಮದುವೆ ನಡೆಸುತ್ತಿದ್ದಾರೆ. ಮಸೀದಿಗಳು ಮತ್ತು ಫಂಕ್ಷನ್ ಹಾಲ್‌ಗಳಲ್ಲಿ ಮಾತ್ರವಲ್ಲದೆ ಮನೆಗಳಲ್ಲಿಯೂ ನಿಖಾ ಏರ್ಪಡಿಸಲಾಗುತ್ತಿದೆ. ರಾಜ್ಯ ವಕ್ಫ್ ಮಂಡಳಿಯಿಂದ ನೇಮಕಗೊಂಡ ಖಾಜಿಗಳು ಕಾನೂನು ವಿಧಿ ವಿಧಾನಗಳನ್ನು ಪೂರ್ಣಗೊಳಿಸಲು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಧಾವಿಸುತ್ತಿರುವುದು ಕಂಡುಬರುತ್ತಿದೆ.

    ‘ಹೈದರಾಬಾದ್‌ ಮುಸ್ಲಿಮರು ಶೇ.90 ಹೆಣ್ಣುಮಕ್ಕಳ ವಿವಾಹ 18-20 ರ ಒಳಗಡೆ ನಡೆಯುತ್ತದೆ. ಶೇ.10ರಷ್ಟು ಮಂದಿ ಮಾತ್ರ ತಮ್ಮ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಕೊಡುತ್ತಾರೆ. ಆದ್ದರಿಂದ ತರಾತುರಿಯಲ್ಲಿ ವಿವಾಹ ಮಾಡುತ್ತಿದ್ದಾರೆ. ಸಂಸತ್ತಿನಲ್ಲಿ ಕಾಯ್ದೆ ಒಪ್ಪಿಗೆ ಪಡೆದು ಜಾರಿಗೆ ಬರಲು ಇನ್ನೆರಡು ವರ್ಷ ಬೇಕಾಗಬಹುದು, ಹೀಗಾಗಿ ತರಾತುರಿಯಲ್ಲಿ ವಿವಾಹದ ತಪ್ಪು ನಿರ್ಣಯ ತೆಗೆದುಕೊಳ್ಳಬೇಡಿ ಎಂದು ತೆಲಂಗಾಣ ವಕ್ಫ್‌ಬೋರ್ಡಿನ ಮುಖ್ಯಸ್ಥ ಪಾಲಕರಿಗೆ ಸಲಹೆ ನೀಡಿದ್ದಾರೆ.

    ಬಂಜೆ ಎಂಬ ಚುಚ್ಚುಮಾತು ಕೇಳಿಕೇಳಿ ನೊಂದು ತವರು ಮನೆ ಸೇರಿ ಮಾಡಿದಳೊಂದು ಖತರ್ನಾಕ್‌ ಐಡಿಯಾ!

    VIDEO: ಮಂಡ್ಯದಲ್ಲೊಂದು ಅಮಾನವೀಯ ಘಟನೆ- ಎಲ್ಲರೆದುರು ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿ ಕೂಡಿಹಾಕಿ ಥಳಿಸಿದ ಶಿಕ್ಷಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts