

ಆದಾಯ ತೆರಿಗೆಯ ಮುಖ್ಯ ಪ್ರಧಾನ ಆಯುಕ್ತರ ಕಚೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಕ್ರೀಡಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕ್ರೀಡೆಯಲ್ಲಿ ತೊಡಗಿಕೊಂಡಿದ್ದು, ವಿಶ್ವವಿದ್ಯಾಲಯ, ಅಂತರ ವಿಶ್ವವಿದ್ಯಾಲಯ, ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡ ಅಭ್ಯರ್ಥಿಗಳಿಗೆ ಇದು ಸುವರ್ಣಅವಕಾಶವಾಗಿದೆ.
ಒಟ್ಟು ಹುದ್ದೆಗಳು: 155
ಮುಂಬೈನಲ್ಲಿರುವ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಉತ್ತಮ ಸಂಭಾವನೆ ಇದೆ. ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಯಾವ ಕ್ರೀಡೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬುದನ್ನು ಆನ್ಲೈನ್ ಅರ್ಜಿಯಲ್ಲೇ ನಮೂದಿಸಲು ಸೂಚಿಸಲಾಗಿದೆ. ಈ ಹುದ್ದೆಗಳು 2 ವರ್ಷದ ಪ್ರೊಬೆಷನರಿ ಅವಧಿಗೆ ಒಳಪಟ್ಟಿದ್ದು, ಮುಂಬೈನ ಯಾವುದೇ ಪ್ರಾದೇಶಿಕ ಕಚೇರಿಗೆ ನೇಮಕ ಮಾಡಬಹುದಾಗಿದೆ.
ಹುದ್ದೆ ವಿವರ
* ಇನ್ಸ್ಪೆಕ್ಟರ್ ಆಫ್ ಇನ್ಕಂ ಟ್ಯಾಕ್ಸ್ - 8
* ಟ್ಯಾಕ್ಸ್ ಅಸಿಸ್ಟೆಂಟ್ - 83
* ಮಲ್ಟಿ ಟಾಸ್ಕಿಂಗ್ ಸ್ಟಾಫ್ - 64
ಶೈಕ್ಷಣಿಕ ಅರ್ಹತೆ: ಮಲ್ಟಿ ಟಾಸ್ಕಿಂಗ್ ಸ್ಟಾಫ್ಗೆ ಮೆಟ್ರಿಕ್ಯುಲೇಷನ್, ಇನ್ಸ್ಪೆಕ್ಟರ್ಗೆ ಯಾವುದೇ ಪದವಿ, ಟ್ಯಾಕ್ಸ್ ಅಸಿಸ್ಟೆಂಟ್ಗೆ ಪದವಿ ಜತೆ ಡಾಟಾ ಎಂಟ್ರಿ ವೇಗ ಪ್ರತಿ ಗಂಟೆಗೆ 8000 ಕೀ ಡಿಪ್ರೆಷನ್ ಇರಬೇಕು ಎಂದು ಸೂಚಿಸಲಾಗಿದೆ.
ಯಾವ ಕ್ರೀಡೆಯವರಿಗೆ ಅವಕಾಶ?: ಅಥ್ಲೆಟಿಕ್ಸ್, ಸ್ವಿಮ್ಮಿಂಗ್, ಸ್ಕ್ವಾಷ್, ಬಿಲಿಯರ್ಡ್, ಚೆಸ್, ಕ್ಯಾರಂ, ಬ್ರಿಡ್ಜ್, ಬ್ಯಾಡ್ಮಿಂಟನ್, ಲಾನ್ ಟೆನ್ನಿಸ್, ಟೇಬಲ್ ಟೆನಿಸ್, ಶೂಟಿಂಗ್, ವೈಟ್ಲಿಫ್ಟಿಂಗ್, ವ್ರೆಜ್ಲಿಂಗ್, ಬಾಕ್ಸಿಂಗ್, ಜೂಡೊ, ಜಿಮ್ನಾಸ್ಟಿಕ್, ಬಾಡಿ ಬಿಲ್ಡಿಂಗ್, ವಾಲಿಬಾಲ್, ಬಾಸ್ಕೆಟ್ಬಾಲ್, ಫುಟ್ಬಾಲ್, ಕಬ್ಬಡಿ, ಕ್ರಿಕೆಟ್
ವಯೋಮಿತಿ: 1.8.2021ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ ಗರಿಷ್ಠ 25, 27, 30 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ನೀಡಲಾಗಿದೆ.
ವೇತನ: ಇನ್ಕಂ ಟ್ಯಾಕ್ಸ್ ಇನ್ಸ್ಪೆಕ್ಟರ್ಗೆ ಮಾಸಿಕ 44,900 ರೂ.ನಿಂದ 1,42,400 ರೂ. ವೇತನ, ಟ್ಯಾಕ್ಸ್ ಅಸಿಸ್ಟೆಂಟ್ಗೆ ಮಾಸಿಕ 25,500-81,100 ರೂ., ಮಲ್ಟಿ ಟಾಸ್ಕಿಂಗ್ ಸ್ಟಾಫ್ಗೆ ಮಾಸಿಕ 18,000-56,900 ರೂ. ವೇತನ ಇದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 25.8.2021
ಅಧಿಸೂಚನೆಗೆ: https://bit.ly/3rg37WO
ಮಾಹಿತಿಗೆ:http://www.incometaxmumbai.in