ಊಟಕ್ಕೆ ಲೇಟ್‌ ಆಯಿತೆಂದು ಪತ್ನಿಯ ಮೇಲೆ ಹಲ್ಲೆ ಮಾಡಿದ: ಕೈಮುಗಿದು ಬೇಡಿಕೊಂಡರೂ ಕೊಂದೇ ಬಿಟ್ಟ ಪಾಪಿ ಗಂಡ!

murder
Published on

ಜಾರ್ಖಂಡ್: ರಾತ್ರಿ ಊಟ ಕೊಡಲು ವಿಳಂಬ ಮಾಡಿದ ಕಾರಣಕ್ಕೆ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ ಇಲ್ಲೊಬ್ಬ ಮಹಾಪಾಪಿ ಗಂಡ. 70 ವರ್ಷ ಈ ಪಾಪಿ ಗಂಡ ತನ್ನ ಪತ್ನಿಯ ಮೇಲೆ ಹಲ್ಲೆ ಮಾಡಿ, ಕೊನೆಗೆ ಕೊಲೆ ಮಾಡಿದ್ದಾನೆ.

ಇಂಥದ್ದೊಂದು ಕೃತ್ಯ ನಡೆದಿರುವುದು ಜಾರ್ಖಂಡ್‌ನ ಕುಂತಿ ಜಿಲ್ಲೆಯ ಕಲಾಮತಿ ಹಳ್ಳಿಯಲ್ಲಿ. ಮನೆಯಲ್ಲಿಯೇ ಇದ್ದ ಈತ ರಾತ್ರಿ ಅಡುಗೆ ಅಡುಗೆ ಮಾಡುವಂತೆ ಪತ್ನಿಗೆ ಹೇಳಿದ್ದಾನೆ. ಪತ್ನಿ ಅಡುಗೆಯನ್ನೇನೋ ಬೇಗ ಮಾಡಿದ್ದಳು. ಆದರೆ ಪತಿಗೆ ಬಡಿಸಲು ಸ್ವಲ್ಪ ವಿಳಂಬವಾಗಿದೆ. ಅಷ್ಟಕ್ಕೇ ಗಂಡ ಸಿಕ್ಕಾಪಟ್ಟೆ ಹಲ್ಲೆ ಮಾಡಿದ್ದಾನೆ. ಆತನ ಹಲ್ಲೆಗೆ ಪತ್ನಿ ಕುಸಿದು ಬಿದ್ದಿದ್ದಾಳೆ.

ಇಷ್ಟಕ್ಕೆ ಸುಮ್ಮನಾಗದ ಗಂಡ, ಮತ್ತೆ ಹಲ್ಲೆ ಮಾಡಿದ್ದಾನೆ. ತನಗೆ ಏನೂ ಮಾಡದಂತೆ ಕೇಳಿಕೊಂಡರೂ ಬಿಡದ ಆತ ಹಲ್ಲೆ ಮುಂದುವರೆಸಿದ್ದಾನೆ. ನಂತರ ರಕ್ತದ ಮಡುವಿನಲ್ಲಿ ಪತ್ನಿ ಒದ್ದಾಡುತ್ತಿದ್ದರೂ ಆಸ್ಪತ್ರೆಗೆ ಸಾಗಿಸದೇ ಕೊಲೆ ಮಾಡಿದ್ದಾನೆ. ನಂತರ ಇಡೀ ರಾತ್ರಿ ಹೆಂಡತಿ ಮೃತದೇಹದ ಜತೆ ಇದ್ದಾನೆ.

ಮಾರನೆಯ ದಿನ ಪೊಲೀಸರಿಗೆ ವಿಷಯ ತಿಳಿದು ಗಂಡನನ್ನು ಬಂಧಿಸಿದ್ದಾರೆ. ಇಬ್ಬರೂ ಗಲಾಟೆಗೂ ಮುನ್ನ ಮದ್ಯಪಾನ ಮಾಡಿದ್ದರು ಎನ್ನಲಾಗಿದೆ. ಗಂಡನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net