ಪ್ರತ್ಯೇಕವಾಗಿದ್ದ ಪತ್ನಿಯ ಬಳಿ ಹೋಗಿ ಅಪ್ಪಿಕೊಂಡ: ನೋಡುತ್ತಿದ್ದಂತೆಯೇ ಛಿದ್ರವಾಯಿತು ಎರಡೂ ದೇಹ!

bomb
Published on

ಲುಂಗೇಲಿ (ಮಿಜೋರಾಂ): ಜಗಳ ಮಾಡಿ ಪ್ರತ್ಯೇಕವಾಗಿದ್ದ ಹೆಂಡತಿಯನ್ನು ಕರೆದು ಭಯಾನಕ ರೀತಿಯಲ್ಲಿ ಆಕೆಯನ್ನು ಕೊಲೆ ಮಾಡಿ ತಾನೂ ಸತ್ತಿರುವ ಘಟನೆ ಮಿಜೋರಾಂನ ಲಿಂಗೇಲಿಯಲ್ಲಿ ನಡೆದಿದೆ.

ರೊಹಮಿಗ್ಲಿಯಾನ ಎಂಬಾತ ಇಂಥ ಕೃತ್ಯ ಎಸಗಿದ್ದಾನೆ. ಈತನ ಪತ್ನಿ ಜಗಳವಾಡಿಕೊಂಡು ಪ್ರತ್ಯೇಕವಾಗಿ ಮಗಳ ಜತೆ ವಾಸವಾಗಿದ್ದಳು. ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದಳು. ಆಕೆಯನ್ನು ಕೊಲ್ಲಲು ಭಯಾನಕ ‌ಪ್ಲ್ಯಾನ್‌ ಹಾಕಿದ ಪತಿ ತನ್ನ ಬಟ್ಟೆಯೊಳಗೆ ಜಿಲೆಟಿನ್ ಬಾಂಬ್ ಇಟ್ಟುಕೊಂಡು ಅವಳು ಇರುವಲ್ಲಿ ಹೋಗಿದ್ದಾನೆ.

ಆಕೆಯ ಜೊತೆಯಲ್ಲಿದ್ದ ಮಗಳನ್ನು ದೂರ ಕಳಿಸಿದ್ದ. ತರಕಾರಿ ಮಾರುತ್ತಾ ಗಾಡಿಯ ಬಳಿ ಕುಳಿತಿದ್ದ ಹೆಂಡತಿಯ ಪಕ್ಕದಲ್ಲೇ ಕುಳಿತ ಆಕೆಯ ಗಂಡ ತನಗಾಗಿ ಒಂದು ಸಿಗರೇಟ್ ತಂದುಕೊಡುವಂತೆ ಕೇಳಿದ್ದ. ಆಕೆ ಸಿಗರೇಟ್ ತಂದು ಕೊಟ್ಟಾಗ ಅದನ್ನು ಬಾಯಿಗಿಟ್ಟುಕೊಂಡ ಆತ ಎದ್ದು ನಿಂತವನೇ ತಲೆ ಸುತ್ತುಬಂದಂತೆ ನಟಿಸಿದ್ದಾನೆ. ಆಗ ಪತ್ನಿ ಬಳಿಗೆ ಹೋದಾಗ ಆಕೆಯನ್ನು ಜೋರಾಗಿ ತಬ್ಬಿಕೊಂಡಿದ್ದಾನೆ. ಕೂಡಲೇ ಬಾಂಬ್ ಸ್ಫೋಟವಾಗಿ ಅವರಿಬ್ಬರ ದೇಹ ಛಿದ್ರವಾಗಿದೆ.

ಈ ಘಟನೆ ಬಳಿಕ ಅವರ ಮಗಳು ನಾಪತ್ತೆಯಾಗಿದ್ದಾಳೆ. ಪ್ರತ್ಯಕ್ಷದರ್ಶಿಗಳು ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಈತ ಹೀಗೆಕೆ ಮಾಡಿದ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net